ಬಳ್ಳಾರಿ ಜನತೆ ಕನ್ನಡ ಪ್ರೇಮ: ಏಕಶಿಲಾ ಬೆಟ್ಟದ ಮೇಲೆ ಹಾರಿತು 65 ಅಡಿ ಉದ್ದದ ಕನ್ನಡ ಬಾವುಟ!

ಇಂದು ರಾಜ್ಯದೆಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದು ಗಣಿ ಜಿಲ್ಲೆ ಎಂದೇ ಹೆಸರಾದ ಬಳ್ಳಾರಿಯಲ್ಲಿ ಯುವಕರ ತಂಡವೊಂದು 65 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ತಾಯ್ನಾಡಿಗೆ ಗೌರವ ಸೂಚಿಸಿದೆ.

Published: 01st November 2020 01:03 PM  |   Last Updated: 01st November 2020 01:03 PM   |  A+A-


ಬಳ್ಳಾರಿಯ ಏಕಶಿಲಾ ಬೆಟ್ಟದ ಮೇಲಿನ ಕನ್ನಡ ಬಾವುಟ

Posted By : Raghavendra Adiga
Source : Online Desk

ಬಳ್ಳಾರಿ: ಇಂದು ರಾಜ್ಯದೆಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದು ಗಣಿ ಜಿಲ್ಲೆ ಎಂದೇ ಹೆಸರಾದ ಬಳ್ಳಾರಿಯಲ್ಲಿ ಯುವಕರ ತಂಡವೊಂದು 65 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ತಾಯ್ನಾಡಿಗೆ ಗೌರವ ಸೂಚಿಸಿದೆ.

ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿಈ ವಿಶೇಷ ಧ್ವಜಾರೋಹಣ ಮಾಡಲಾಗಿದೆ.ಟೆ ಮುಖ್ಯದ್ವಾರದ ಬಾಗಿಲು ಎದುರಿಗೆ ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರಾದ ಸಿದ್ಮಲ್ ಮಂಜುನಾಥ, ಕಪ್ಪಗಲ್ಲು ಚಂದ್ರಶೇಖರ ಆಚಾರ್ ಮುಂದಾಳತ್ವದಲ್ಲಿ ತಾಯಿ ಭುವನೇಶ್ವರಿಯ ಪೂಜೆ ನೆರವೇರಿದ್ದು ಇದಾದ ನಂತರ ಏಕಶಿಲಾ ಬೆಟ್ಟದ ಮೇಲೆ ಕನ್ನಡ ಧ್ವಜ ಹಾರಿಸಲಾಗಿದೆ.

ಕಳೆದ ಹದಿನೈದು ವರ್ಷದ ಹಿಂದೆ ಐವತ್ತನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಸಮಯದಲ್ಲಿ ಐವತ್ತು ಅಡಿ ಧಜ ಹಾರಿಸಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಧ್ವಜಾರೋಹಣ ನಡೆಸಿಕೊಂಡು ಬರಲಾಗುತ್ತಿದ್ದು ಈ ವರ್ಷ  65 ಅಡಿ ಉದ್ದದ ಕನ್ನಡ ಬಾವುಟ ಹಾರಿಸಲಾಗಿದೆ ಎಂದು ಚಂದ್ರಶೇಖರ್ ಆಚಾರ್ ಮಾಹಿತಿ ನೀಡಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp