ಮನೆ ಬಾಡಿಗೆ ವಿಚಾರವಾಗಿ ಮಾಲಕಿಯಿಂದ ಬಾಡಿದಾರರ ಮೇಲೆ ಮಾರಣಾಂತಿಕ ಹಲ್ಲೆ

ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಡಿಗೆದಾರ ಮಹಿಳೆ ಮೇಲೆ ಮನೆ ಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಡಿಗೆದಾರ ಮಹಿಳೆ ಮೇಲೆ ಮನೆ ಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದ್ದು, ಬಾಡಿಗೆದಾರರಾದ ಪೂರ್ಣಿಮಾ (31 ವರ್ಷ) ಅವರ ಮೇಲೆ ಮನೆ ಮಾಲೀಕರಾದ ಮಹಾಲಕ್ಷ್ಮಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಪೂರ್ಣಿಮಾ ರಕ್ತದ ಮಡುವಿನಲ್ಲಿ ಕುಳಿತಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ  ರಾಜಗೋಪಾಲ ನಗರ ಠಾಣೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆ ಮಾಲಕಿಯನ್ನು ವಶಕ್ಕೆ ಪಡೆದಿದ್ದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದಾರೆ. ಇವತ್ತು ಬೆಳಗ್ಗೆ 10 ಗಂಟೆ ನಂತರ ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದಾರೆ ಎನ್ನಲಾಗಿದೆ.

ಹೆಗ್ಗನಹಳ್ಳಿ ಮಾರುತಿ ನಗರದ ಮಹಾಲಕ್ಷ್ಮೀ (40 ವರ್ಷ) ಬಂಧಿತಳಾಗಿದ್ದು, ಮನೆ ಬಾಡಿಗೆ ವಿಚಾರವಾಗಿ ಪೂರ್ಣಿಮಾ ಮೇಲೆ ಆರೋಪಿ ಮಹಾಲಕ್ಷ್ಮಿ ಚಾಕುವಿನಿಂದ ಹಲ್ಲೆ ನಡೆಸಿದ್ದಳು. ಮಹಾಲಕ್ಷೀ ಮನೆಯಲ್ಲಿ ನೆಲೆಸಿದ್ದ ಪೂರ್ಣಿಮಾ ದಂಪತಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು, ಮನೆ ಮಾಲಕಿಗೆ ಮಾಸಿಕ  5,500 ಬಾಡಿಗೆ ಪಾವತಿಸುತ್ತಿದ್ದರು. ಆದರೆ ಲಾಕ್‌ ಡೌನ್‌ ವೇಳೆ ಕೆಲಸ ಕಳೆದುಕೊಂಡ ಕಾರಣಕ್ಕೆ ಎರಡು ತಿಂಗಳು ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂತ್ರಸ್ತೆ ಮೇಲೆ ಮಹಾಲಕ್ಷೀ ಗಲಾಟೆ ಮಾಡಿದ್ದಾಳೆ. ಈ ಬಗ್ಗೆ ಸಂತಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು  ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com