ಕೋವಿಡ್-19 ವಿರುದ್ಧ ಹೋರಾಡಲು ಪೋಲಿಯೊ ಲಸಿಕೆ ಬಳಸಿ: ತಜ್ಞರ ಶಿಫಾರಸು

ಕೋವಿಡ್-19ಗೆ ಲಸಿಕೆ ಬರಲು ಇನ್ನೂ ಕೆಲವು ತಿಂಗಳು ಸಮಯ ಬೇಕಾಗುವುದರಿಂದ ಬೆಂಗಳೂರು, ಅಮೆರಿಕ, ಇಂಗ್ಲೆಂಡಿನ ತಜ್ಞರು ಹೇಳುವ ಪ್ರಕಾರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೋಲಿಯೊ ಲಸಿಕೆಯನ್ನು ಬಳಸಬಹುದು.
ಆರೋಗ್ಯ ಕಾರ್ಯಕರ್ತರು ಕೋವಿಡ್-19 ಸ್ಯಾಂಪಲ್ ತೆಗೆದುಕೊಳ್ಳುತ್ತಿರುವುದು
ಆರೋಗ್ಯ ಕಾರ್ಯಕರ್ತರು ಕೋವಿಡ್-19 ಸ್ಯಾಂಪಲ್ ತೆಗೆದುಕೊಳ್ಳುತ್ತಿರುವುದು

ಬೆಂಗಳೂರು: ಪೋಲಿಯೋ ವಿರುದ್ಧ ಬಾಯಿಗೆ ಹಾಕುವ ಲಸಿಕೆ(ಒಪಿವಿ) ಕೋವಿಡ್-19 ವಿರುದ್ಧ ಹೋರಾಡಲು ಸಹಾಯ ಮಾಡಬಹುದೇ? ಕೋವಿಡ್-19ಗೆ ಲಸಿಕೆ ಬರಲು ಇನ್ನೂ ಕೆಲವು ತಿಂಗಳು ಸಮಯ ಬೇಕಾಗುವುದರಿಂದ ಬೆಂಗಳೂರು, ಅಮೆರಿಕ, ಇಂಗ್ಲೆಂಡಿನ ತಜ್ಞರು ಹೇಳುವ ಪ್ರಕಾರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೋಲಿಯೊ ಲಸಿಕೆಯನ್ನು ಬಳಸಬಹುದು.

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೋಲಿಯೊ ಲಸಿಕೆಯನ್ನು ಕೊರೋನಾ ವಿರುದ್ಧ ಹೋರಾಡಲು ನೀಡಬಹುದು ಎಂದು ಸಲಹೆ ನೀಡಿ ವೈಜ್ಞಾನಿಕ ವರದಿ ಸಿದ್ದಪಡಿಸಿದ್ದಾರೆ.

ಪೋಲಿಯೊ ಲಸಿಕೆ ಮತ್ತು ಕೋವಿಡ್ 19ನ ವೈದ್ಯಕೀಯ ಅಧ್ಯಯನವನ್ನು ಇತ್ತೀಚೆಗೆ ತಜ್ಞರು ಬೆಂಗಳೂರಿನ ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಾಡಿದ್ದರು. ಕೋವಿಡ್-19 ರೋಗಿಗಳಿಗೆ ಆರಂಭದಲ್ಲಿಯೇ ಪೋಲಿಯೊ ಲಸಿಕೆ ನೀಡಿದರೆ ವೈರಸ್ ನ್ನು ಬೇಗನೆ ಕೊಲ್ಲಲು ಸಹಾಯ ಮಾಡುತ್ತದೆ. ಅಲ್ಲದೆ ವಯಸ್ಸಾದವರಲ್ಲಿ ಸಹ ಕೊರೋನಾ ಸೋಂಕು ತಗಲುವುದನ್ನು ತಡೆಗಟ್ಟುತ್ತದೆ. ಈ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಅಧ್ಯಯನದ ಭಾಗವಾಗಿದ್ದ ಬೆಂಗಳೂರಿನ ಹೆಡ್ ನೆಕ್ ಸರ್ಜಿಕಲ್ ಆಂಕೊಲಾಜಿ ಮತ್ತು ಅಸೋಸಿಯೇಟ್ ಡೀನ್ - ಸೆಂಟರ್ ಆಫ್ ಅಕಾಡೆಮಿಕ್ಸ್ ಅಂಡ್ ರಿಸರ್ಚ್ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ. ವಿಶಾಲ್ ರಾವ್, “ನಾವು ಜೀನೋಮಿಕ್ ಅಧ್ಯಯನವನ್ನು ನೋಡಿದಾಗ, ಒಪಿವಿ ಮತ್ತು ಕೊರೋನಾ ವೈರಸ್ ಎರಡೂ ಆರ್ ಎನ್ ಎ ವೈರಸ್.

ಆರಂಭಿಕ ಹಂತದಲ್ಲಿ ಒಬ್ಬ ವ್ಯಕ್ತಿಗೆ ಒಪಿವಿ ನೀಡಿದರೆ, ಅದು ಸೋಂಕಿಗೆ ಒಳಗಾಗುವ ಮೊದಲು, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪುನಃ ಸಕ್ರಿಯಗೊಳಿಸುತ್ತದೆ. ನಮ್ಮ ಅಧ್ಯಯನ ಮತ್ತು ಲಕ್ಷಣಗಳನ್ನು ನೋಡಿದಾಗ ಒಪಿವಿ ಕೆಲಸ ಮಾಡಬಹುದು ಎಂದು ನಮಗನಿಸಿದೆ ಎಂದರು.

ಸಾಮಾನ್ಯವಾಗಿ, ಪೋಲಿಯೊ ಲಸಿಕೆ ಜೀವಿತಾವಧಿಯಲ್ಲಿ ಇರುತ್ತದೆ. ಆದರೆ ಪುನಃ ಸಕ್ರಿಯಗೊಳಿಸುವ ಪ್ರಮಾಣವನ್ನು ನೀಡಿದಾಗ, ಇದು ಕೊರೋನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

ಎಪಿಜೆನೆಟಿಕ್ ಮಾರ್ಪಾಡುಗಳು ಮತ್ತು ಚಯಾಪಚಯ ಪ್ರೋಗ್ರಾಮಿಂಗ್ ಮೂಲಕ ಒಪಿವಿ ತರಬೇತಿ ಪಡೆದ ಸಹಜ ಪ್ರತಿರಕ್ಷೆಯನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನ ಹೇಳಿದೆ. ಇದು SAR-CoV2 ನಂತಹ ಹೊಸ ಆಕ್ರಮಣಕಾರಿ ರೋಗಕಾರಕಕ್ಕೆ ಒಡ್ಡಿಕೊಂಡ ನಂತರ ಸಹಜ ಪ್ರತಿರಕ್ಷಣಾ ವ್ಯವಸ್ಥೆಯ (NK ಜೀವಕೋಶಗಳು ಮತ್ತು ಮ್ಯಾಕ್ರೋಫೇಜ್‌ಗಳು) ಕೋಶಗಳಿಂದ ವರ್ಧಿತ ಮತ್ತು ದೀರ್ಘಕಾಲದ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com