ಡಿವೈಎಸ್ಪಿ ಗಣಪತಿ ಆತ್ಮಹತ್ಯೆ: ಮಾಜಿ ಸಚಿವ ಜಾರ್ಜ್ ಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಇಂದು ಮಾಜಿ ಸಚಿವ ಕೆಜೆ ಜಾರ್ಜ್ ಗೆ ಬಿಗ್ ರಿಲೀಫ್ ನೀಡಿದೆ. ಪ್ರಕರಣದ ಸಂಬಂಧ ಸಿಬಿಐ ನೀಡಿದ್ದ ಬಿ-ರಿಪೋರ್ಟ್ ಎತ್ತಿ ಹಿಡಿದಿದೆ.

Published: 04th November 2020 05:20 PM  |   Last Updated: 04th November 2020 05:20 PM   |  A+A-


ಕೆಜೆ ಜಾರ್ಜ್,ಡಿವೈಎಸ್ಪಿ ಗಣಪತಿ

Posted By : Raghavendra Adiga
Source : Online Desk

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಇಂದು ಮಾಜಿ ಸಚಿವ ಕೆಜೆ ಜಾರ್ಜ್ ಗೆ ಬಿಗ್ ರಿಲೀಫ್ ನೀಡಿದೆ. ಪ್ರಕರಣದ ಸಂಬಂಧ ಸಿಬಿಐ ನೀಡಿದ್ದ ಬಿ-ರಿಪೋರ್ಟ್ ಎತ್ತಿ ಹಿಡಿದಿದೆ.

2016ರ ಜು.17ರಂದು ನಡೆದಿದ್ದ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆಗೆ ಘಟನೆಗೆ ಹಲವರು ಕಾರಣವಾಗಿದ್ದಾರೆಂದು ಮಾಡಿದ್ದ ಆರೋಪ "ಹುರುಳಿಲ್ಲದ್ದು" ಎಂದು ಸಿಬಿಐ ಬಿ-ರಿಪೋರ್ಟ್ ಸಲ್ಲಿಸಿತ್ತು. ಆದರೆ ಈ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿತ್ತು.

ಮಾಜಿ ಸಚಿವ ಜಾರ್ಜ್ ಹಾಗೂ ಇತರೆ ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವಿತ್ತು

ಆದರೆ ಸಮನ್ಸ್ ಪ್ರಶ್ನಿಸಿ ಮೂವರು ಸಹ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಸಿಬಿಐ ನೀಡಿದ್ದ ವರದಿಯನ್ನು ಮಾನ್ಯ ಮಾಡಿದೆ. ಈ ಮೂಲಕ ಮೃತ ಗಣಪತಿಯವರ ಕುಟುಂಬಕ್ಕೆ ಭಾರೀ ಹಿನ್ನೆಡೆಯಾಗಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp