ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮತ್ತೆ ಸುಗ್ರೀವಾಜ್ಞೆ ಅಧಿಸೂಚನೆ ಪ್ರಕಟ

ವಿವಾದಾತ್ಮಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀ ವಾಜ್ಞೆ ಹೊರಡಿಸಿದ್ದು, ನೀರಾವರಿ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಖರೀದಿಸದಂತೆ ಹಾಗೂ ಎಸ್‍ಸಿ ಎಸ್ಟಿ ಸಮುದಾಯದ ಜಮೀನನ್ನು ಯಾವುದೇ  ಉದ್ದೇಶಕ್ಕೆ ಬಳಸಲು ಅವಕಾಶ ನೀಡದಂತೆ ಸುಗ್ರೀವಾಜ್ಞೆಯಲ್ಲಿ ಅಧಿಸೂಚಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿವಾದಾತ್ಮಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀ ವಾಜ್ಞೆ ಹೊರಡಿಸಿದ್ದು, ನೀರಾವರಿ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಖರೀದಿಸದಂತೆ ಹಾಗೂ ಎಸ್‍ಸಿ ಎಸ್ಟಿ ಸಮುದಾಯದ ಜಮೀನನ್ನು ಯಾವುದೇ  ಉದ್ದೇಶಕ್ಕೆ ಬಳಸಲು ಅವಕಾಶ ನೀಡದಂತೆ ಸುಗ್ರೀವಾಜ್ಞೆಯಲ್ಲಿ ಅಧಿಸೂಚಿಸಲಾಗಿದೆ.

1974ರ ಮೂಲ ಕಾಯ್ದೆಗೆ ಜುಲೈ ತಿಂಗಳಲ್ಲಿ ತಿದ್ದುಪಡಿ ತಂದು ಸೆಕ್ಷನ್ 79ಎ, 79ಬಿ, 79ಸಿ ಕಲಂಗಳನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು.ಸೆಕ್ಷೆನ್ 80ನ್ನು ರದ್ದುಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು.ನಂತರ ಸೆಪ್ಟಂಬರ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ವಿಧೇಯಕ ಮಂಡಿಸಿತ್ತು.

ಆದರೆ, ವಿಧಾನಸಭೆ ಯಲ್ಲಿ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದವರ ಜಮೀನು ಖರೀದಿ ಮಾಡುವುದಕ್ಕೆ ನಿಷೇಧ, ನೀರಾವರಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲು  ನಿರ್ಬಂಧ ಹಾಗೂ ಒಂದು ಕುಟುಂಬದ ಸದಸ್ಯರು ಹೊಂದುವ ಜಮೀನಿನ ಮಿತಿಯನ್ನು 54 ಎಕರೆಗೆ ಮಿತಿಗೊಳಿಸಲು ರಾಜ್ಯ ಸರ್ಕಾರ ಅಧಿವೇಶನದಲ್ಲಿ ತಿದ್ದುಪಡಿ ತರಲು ಒಪ್ಪಿಗೆ ನೀಡಿತ್ತು.

ವಿಧಾನಸಭೆಯಲ್ಲಿ ತಿದ್ದುಪಡಿ ಮೂಲಕ ಅನುಮೋದನೆಯಾದ ವಿಧೇಯಕ ವಿಧಾನ ಪರಿಷತ್‍ನಲ್ಲಿ ಅಂಗೀಕಾರ ದೊರೆಯದೇ ಇದ್ದುದರಿಂದ ರಾಜ್ಯ ಸರ್ಕಾರ ಜುಲೈನಲ್ಲಿ  ಹೊರಡಿಸಿದ್ದ ಸುಗ್ರೀವಾಜ್ಞೆ ನವೆಂಬ ರ್ 3ಕ್ಕೆ ನಿರಶನಗೊಂಡಿದೆ.

ಈ ಹಿನ್ನೆಲೆಯಲ್ಲಿ ಜುಲೈ  13 ರಂದು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಮುಂದಿನ ಆರು ತಿಂಗಳು ಜಾರಿಯಲ್ಲಿರುವಂತೆ ಮತ್ತೆ ಕೆಲವು ತಿದ್ದುಪಡಿಗಳೊಂದಿಗೆ  ರಾಜ್ಯ ಸರ್ಕಾರ ಹೊರಡಿಸಿದೆ .ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಅಂಗೀಕರಿಸುವ ಮೂಲಕ ಅನುಮೋದನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com