ಮದುವೆಗೆ ಮುನ್ನ ಮತಾಂತರ ಕಡ್ಡಾಯ ಎನ್ನುವವರು ಹುಟ್ಟು ಮತಾಂಧರು: ಸಂಸದ ಪ್ರತಾಪ್ ಸಿಂಹ

ಮದುವೆಗೆ ಮುನ್ನ ಮತಾಂತರ ಕಡ್ಡಾಯ ಎಂಬುವವರು ಹುಟ್ಟು ಮತಾಂಧರಾಗಿದ್ದು, ಇಂಥ ಒತ್ತಡ ಹೇರುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದು ಅತ್ಯಗತ್ಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 
ಪ್ರತಾಸ್ ಸಿಂಹ
ಪ್ರತಾಸ್ ಸಿಂಹ

ಮಡಿಕೇರಿ: ಮದುವೆಗೆ ಮುನ್ನ ಮತಾಂತರ ಕಡ್ಡಾಯ ಎಂಬುವವರು ಹುಟ್ಟು ಮತಾಂಧರಾಗಿದ್ದು, ಇಂಥ ಒತ್ತಡ ಹೇರುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದು ಅತ್ಯಗತ್ಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮದುವೆಗೂ ಮುನ್ನ ಮತಾಂತರವಾಗಬೇಕು ಎಂಬ ಒತ್ತಡ ಹೇರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಹೇಳಿದ್ದಾರೆ. ಇದು ಸ್ವಾಗತಾಹ೯. ಕನಾ೯ಟಕದಲ್ಲಿಯೂ ಸಚಿವ ಸಿ.ಟಿ.ರವಿ ಇಂಥ ಕಾನೂನು ಜಾರಿ ಸಂಬಂಧ ಸಕಾ೯ರ ಒಲವು ತೋರುತ್ತದೆ ಎಂದಿದ್ದಾರೆ. ಇದು ಸೂಕ್ತ ನಿಧಾ೯ರವಾಗಲಿದೆ ಎಂದು ಹೇಳಿದರು. 

ಪ್ರೀತಿಸುವಾಗ ಅಡ್ಡಿ ಬಾರದ ಧಮ೯ ಮದುವೆಯಾಗುವಾಗ ಯಾಕೆ ಅಡ್ಡಿ ಬರುತ್ತಿದೆ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಇಂಥ ವ್ಯಕ್ತಿಗಳು ಪ್ರೀತಿಯ ನಾಟಕವಾಡಿ, ಧರ್ಮಾಂಧತೆ ಜತೆಗೆ ಮತಾಂತರದ ಉದ್ದೇಶ ಹೊಂದಿದ್ದಾರೆ. ಲವ್ ಜಿಹಾದ್ ಗೆ ಇದು ಉದಾಹರಣೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕಾನೂನು ಬೇಕೇಬೇಕು ಎಂದರು. 

ರಾಜ್ಯದ ಮುಖ್ಯಮಂತ್ರಿಯಾದ ಕೂಡಲೇ ಟಿಪ್ಪುಜಯಂತಿ ರದ್ದುಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ನುಡಿದಂತೆ ನಡೆದುಕೊಂಡು ಟಿಪ್ಪು ಜಯಂತಿ ರದ್ದುಗೊಳಿಸಿದ್ದಾರೆ. ಇದೀಗ ಲವ್ ಜಿಹಾದ್ ಗೆ ಸಂಬಂಧಿಸಿದಂತೆಯೂ ಯಡಿಯೂರಪ್ಪ ಸೂಕ್ತ ನಿಧಾ೯ರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದೂ ಸಂಸದ ಪ್ರತಾಪ್ ಸಿಂಹ ಹೇಳಿದರು.

ಗೋಣಿಕೊಪ್ಪದ ಯುವಕನೋವ೯ ಪಾಕಿಸ್ತಾನದ ಸೆರೆಮನೆಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಈ ಬಗ್ಗೆ ತನಗೂ ಖಚಿತ ಮಾಹಿತಿ ಲಭಿಸಿಲ್ಲ. ಖಚಿತಮಾಹಿತಿ ಇದ್ದಲ್ಲಿ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ವ್ಯವಹರಿಸಿ ಪಾಕಿಸ್ತಾನದ ಇಂಡಿಯನ್ ಹೈ ಕಮೀಷನರ್ ಗಮನಕ್ಕೂ ತಂದು ಆತನನ್ನು ಬಂಧಮುಕ್ತಗೊಳಿಸಿ ಭಾರತಕ್ಕೆ ಖಂಡಿತಾ ಕರೆತರಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇನೆ ಎಂದೂ ಪ್ರತಾಪ್ ಸಿಂಹ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com