ಕೊಳ್ಳೇಗಾಲ: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ, ನೇಣು ಬಿಗಿದು ಯುವಕನ ಕೊಲೆ
ವಿವಾಹೇತರ ಸಂಬಂಧ ಕಾರಣಕ್ಕೆ ಯುವಕನೊಬ್ಬನನ್ನು ಕೊಂದು ನೇಣು ಹಾಕಿಕೊಂಡಿದ್ದಾನೆ ಎಂದು ಬಿಂಬಿಸಿರುವ ಆರೋಪ ಕೇಳಿ ಬಂದಿದೆ. ಕೊಳ್ಳೇಗಾಲ ತಾಲೂಕಿನ ಗುಂಡೇಗಾಲದಲ್ಲಿ ಈ ಘಟನೆ ನಡೆದಿದೆ.
Published: 05th November 2020 05:06 PM | Last Updated: 05th November 2020 05:06 PM | A+A A-

ಸಾಂದರ್ಭಿಕ ಚಿತ್ರ
ಚಾಮರಾಜನಗರ: ವಿವಾಹೇತರ ಸಂಬಂಧ ಕಾರಣಕ್ಕೆ ಯುವಕನೊಬ್ಬನನ್ನು ಕೊಂದು ನೇಣು ಹಾಕಿಕೊಂಡಿದ್ದಾನೆ ಎಂದು ಬಿಂಬಿಸಿರುವ ಆರೋಪ ಕೇಳಿ ಬಂದಿದೆ. ಕೊಳ್ಳೇಗಾಲ ತಾಲೂಕಿನ ಗುಂಡೇಗಾಲದಲ್ಲಿ ಈ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಕಂಡಯ್ಯನಪಾಳ್ಯದ ಪ್ರಕಾಶ್(23) ಮೃತ ದುರ್ದೈವಿ. ಈತ ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ಪತಿ ಮನೆಯವರಿಗೆ ತಿಳಿದು, ಕಳೆದ 5 ದಿನಗಳ ಹಿಂದೆ ತಮ್ಮ ಕೋಮಿನ ಪಂಚಾಯಿತಿ ಸೇರಿಸಿದ್ದರು ಎಂದು ತಿಳಿದು ಬಂದಿದೆ.
ಪಂಚಾಯಿತಿಯಲ್ಲಿ ಪ್ರಕಾಶನ ಜೊತೆಯೇ ಇರುವುದಾಗಿ ಮಹಿಳೆ ತಿಳಿಸಿದ್ದರಿಂದ 3 ಲಕ್ಷ ರೂ. ದಂಡ ನೀಡಿ ವಿವಾಹ ಮಾಡಿಕೊಳ್ಳುವಂತೆ ತೀರ್ಪು ನೀಡಲಾಗಿತ್ತು. ಹಣ ಕೊಡುವ ತನಕ ಗುಂಡೇಗಾಲದಲ್ಲೇ ಇರುವಂತೆ ಮನೆಯೊಂದರಲ್ಲಿ ಕೂಡಿಹಾಕಿದ್ದರು ಎನ್ನಲಾಗಿದೆ.
ಪ್ರಕಾಶ್ನ ಮನೆಯವರು ಹಣ ಹೊಂದಿಸುತ್ತಿರುವ ವಿಚಾರ ತಿಳಿದು ಮಹಿಳೆಯ ಗಂಡ ಮತ್ತು ಸಂಬಂಧಿಕರು ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪ್ರಕಾಶ್ನ ತಾಯಿ ಮಂಜುಳಾ ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಿಯತಮೆ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
-ನಂದೀಶ್ ಗುಳಿಪುರ