ಡ್ರಗ್ಸ್ ಪ್ರಕರಣ: ಬಿನೀಶ್ ಕೊಡಿಯೇರಿ ಇಡಿ ಕಸ್ಟಡಿ ನಾಲ್ಕು ದಿನ ವಿಸ್ತರಣೆ

ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಯವರನ್ನು ಕರ್ನಾಟಕ ನ್ಯಾಯಾಲಯ ನವೆಂಬರ್ 11 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಒಪ್ಪಿಸಿದೆ.
ಡ್ರಗ್ಸ್ ಪ್ರಕರಣ: ಬಿನೀಶ್ ಕೊಡಿಯೇರಿ ಇಡಿ ಕಸ್ಟಡಿ ನಾಲ್ಕು ದಿನ ವಿಸ್ತರಣೆ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಯವರನ್ನು ಕರ್ನಾಟಕ ನ್ಯಾಯಾಲಯ ನವೆಂಬರ್ 11 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಒಪ್ಪಿಸಿದೆ.

ವಾರದ ಆರಂಭದಲ್ಲಿ, ಇಡಿ 25 ಗಂಟೆಗಳಿಗಿಂತ ಹೆಚ್ಚು ಕಾಲ ಬಿನೀಶ್ ಕೊಡಿಯೇರಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಬೆಂಗಳೂರು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ವಯ ಅವರನ್ನು ಬಂಧಿಸಿದೆ.

ಆರ್ಥಿಕ ಅಪರಾಧಗಳ ನಿಯಂತ್ರಕ ಇಡಿ ಈ ಹಿಂದೆ ಬಂಧಿಸಿದ ಡ್ರಗ್ ಪೆಡ್ಲರ್ ಮೊಹಮ್ಮದ್ ಅನೂಪ್ ತನ್ನವಿಚಾರಣೆಯ ಸಮಯದಲ್ಲಿ ಅಂತರ-ರಾಜ್ಯ ಮಾದಕವಸ್ತು, ಡ್ರಗ್ಸ್ ಮಾರಾಟ ಮತ್ತು ಖರೀದಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಮತ್ತು ಬಿನೀಶ್ ಅವರೊಂದಿಗೆ ಕಟ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದೆ.  "ತನಿಖೆಯ ಸಮಯದಲ್ಲಿ, ಮೊಹಮ್ಮದ್ ಅನೂಪ್ ಬಿನೀಶ್ ಮತ್ತು ಅವರ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ.ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ .

ತನಿಖೆಯು ಅನೂಪ್ ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿದ್ದನ್ನು ಬಹಿರಂಗಪಡಿಸಿದೆ ಮತ್ತು ಅಪಾರ ಪ್ರಮಾಣದ ಹಣವನ್ನು ಹಲವಾರು ಖಾತೆಗಳಿಗೆ ವರ್ಗಾಯಿಸಲು ಮತ್ತು ವ್ಯವಹಾರ ನಡೆಸಲು ತೊಡಗಿದ್ದ ಆದಾಗ್ಯೂ, ಅನೂಪ್ ಈ ನಗದು ಮತ್ತು ನಿಧಿ ವಹಿವಾಟುಗಳನ್ನು ವಿವರಿಸಲು ಸಾಧ್ಯವಾಗಲಿಲ್ಲ "ಫಂಡ್ ಟ್ರಯಲ್ ತನಿಖೆಯಿಂದ ಬಿನೀಶ್ ಅವರ ಖಾತೆಗಳಲ್ಲಿ ಅಪಾರ ಪ್ರಮಾಣದ ಅಕ್ರಮಹಣವನ್ನು ನಿಯಮಿತವಾಗಿ ಜಮಾ ಮಾಡಲಾಗುತ್ತಿದೆ ಎಂದು ದೃಢಪಡಿಸಿದೆ.ವುಗಳಿಗೆ ಮುಂಚಿತವಾಗಿ ಕೇರಳದಲ್ಲಿ ದೊಡ್ಡ ನಗದು ಠೇವಣಿ ಇದೆ"

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985 ರ ವಿವಿಧ ವಿಭಾಗಗಳ ಅಡಿಯಲ್ಲಿ ನೋಂದಾಯಿಸಲಾದ ಬೆಂಗಳೂರಿನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೋಂದಾಯಿಸಿದ ಎಫ್ಐಆರ್ ಆಧರಿಸಿ ಮೊಹಮ್ಮದ್ ಅನೂಪ್ ಮತ್ತು ಇತರರ ವಿರುದ್ಧ ಇಡಿ ತನಿಖೆಯನ್ನು ಪ್ರಾರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com