ಕನ್ನಡೇತರರು ಮನೆಯಲ್ಲೇ ಕನ್ನಡ ಕಲಿಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವೀಕೆಂಡ್ ಕ್ಲಾಸ್!

ಹೊರ ರಾಜ್ಯದಿಂದ ಬಂದಿದ್ದೀರಾ...? ಕನ್ನಡ ಕಲಿಯುವ ಹಂಬಲವಿದೆಯೇ...? ಹಾಗಾದರೆ ಚಿಂತೆ ಬೇಡೆ ನಿಮ್ಮ ಮನೆ ಬಾಗಿಲಿನಲ್ಲೇ ನಿಂತು ಇನ್ನು ಮುಂದೆ ಕನ್ನಡ ಕಲಿಯಬಹುದು... 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೊರ ರಾಜ್ಯದಿಂದ ಬಂದಿದ್ದೀರಾ...? ಕನ್ನಡ ಕಲಿಯುವ ಹಂಬಲವಿದೆಯೇ...? ಹಾಗಾದರೆ ಚಿಂತೆ ಬೇಡೆ ನಿಮ್ಮ ಮನೆ ಬಾಗಿಲಿನಲ್ಲೇ ನಿಂತು ಕನ್ನಡ ಕಲಿಯಬಹುದು... 

ಆಶ್ಚರ್ಯ ಬೇಡ ಹೊರ ರಾಜ್ಯದಿಂದ ಬಂದು ನಗರ ಅಪಾರ್ಟ್'ಮೆಂಟ್'ಗಳಲ್ಲಿ ಉಳಿದುಕೊಂಡಿರುವವರಿಗೆ, ಕನ್ನಡ ಕಲಿಯಲು ಹಂಬಲಿಸುವವರಿಗೆ ಕನ್ನಡ ಕಲಿಸುವ ಸಲುವಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವೀಕೆಂಡ್ ಕ್ಲಾಸ್'ಗಳನ್ನು ನಡೆಸಲು ಮುಂದಾಗಿದೆ. 

ಐಟಿ ತಾಣವೆಂದೇ ಹೇಳಲಾಗುವ ನಗರದ ಸರ್ಜಾಪುರ, ವೈಟ್'ಫೀಲ್ಡ್, ಮಹದೇವಪುರ, ಬನ್ನೇರುಘಟ್ಟ ರಸ್ತೆ, ರಾಜರಾಜೇಶ್ವರಿನಗರ, ಬೆಂಗಳೂರು ಪೂರ್ವ ಹಾಗೂ ಇತರೆ ಪ್ರದೇಶಗಳಲ್ಲಿನ ಅಪಾರ್ಟ್ಮೆಂಟ್ ಗಳಲ್ಲಿ ಕನ್ನಡಿಗರೇತರ ನಿವಾಸಿಗಳು ನೆಲೆಸಿದ್ದಾರೆ. ಇವರಲ್ಲಿ ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ ವಾರಾಂತ್ಯದ ದಿನಗಳಲ್ಲಿ ತರಗತಿಗಳನ್ನು ನ ಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ತಿಳಿಸಿದ್ದಾರೆ. 

ಇದಕ್ಕಾಗಿ ಈಗಾಗಲೇ ಪ್ರಾಧಿಕಾರ ತಂಡಗಳನ್ನು ರಚನೆ ಮಾಡಿದ್ದು, ಅಪಾರ್ಟ್'ಮೆಂಟ್'ಗಳಿಗೆ ಭೇಟಿ ನೀಡುವ ಎಷ್ಟು ಮಂದಿ ಕನ್ನಡ ಕಲಿಯಲು ಆಸಕ್ತಿ ಹೊಂದಿದ್ದಾರೆಂಬ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ನವೆಂಬರ್ ಅಂತ್ಯದೊಳಗೆ ಈ ಬಗ್ಗೆ ಮಾಹಿತಿಗಳು ಲಭ್ಯವಾಗಲಿದೆ. 5-10 ಮಂದಿ ಆಸಕ್ತಿ ತೋರಿಸುವ ಅಪಾರ್ಟ್'ಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ನಂತರ ಅಂತಹ ಅಪಾರ್ಟ್ಮೆಂಟ್ ನಲ್ಲಿ ವಾರಾಂತ್ಯದ ದಿನಗಳಲ್ಲಿ ಉಚಿತವಾಗಿ ಕನ್ನಡ ಕಲಿಸುವ ತರಗತಿಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ. 

ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇ-ಲರ್ನಿಂಗ್ ಪೋರ್ಟಲ್ ಆರಂಭಿಸಿದ್ದು, ಯಾವುದೇ ವ್ಯಕ್ತಿ ಎಲ್ಲಿಯೇ ಇದ್ದರೂ ಆನ್'ಲೈನ್ ಮೂಲಕ ಕೂಡ ಕನ್ನಡ ಭಾಷೆಯನ್ನು ಕಲಿಯುವ ಅವಕಾಶ ಕಲ್ಪಿಸಿದೆ. ಆಸಕ್ತಿ ಇರುವ ಅಪಾರ್ಟ್'ಮೆಂಟ್ ನಿವಾಸಿಗಳು ಅಥವಾ ಸ್ವಯಂಸೇವಕರು ಕೆಡಿಎ ವೆಬ್'ಸೈಟ್ https://kannadapraadhikaara.karnataka.gov.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com