ಉಪಚುನಾವಣೆ ಎಫೆಕ್ಟ್: ಶಿರಾದಲ್ಲಿ 50 ಮಂದಿಗೆ ಕೊರೋನಾ ಪಾಸಿಟಿವ್
ಶಿರಾ ಉಪಚುನಾವಣೆ ಸಂದರ್ಭದಲ್ಲಿ ಉಂಟಾದ ಜನ ದಟ್ಟಣೆಯ ಕಾರಣ ಶೇ.20 ರಷ್ಟು ಜನಸಂಖ್ಯೆಗೆ ಸೋಂಕು ತಟ್ಟಿದ್ದು, ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಬೇಕೆಂದು ಸರ್ಕಾರ ಸೂಚಿಸಿತ್ತು.
Published: 07th November 2020 07:06 AM | Last Updated: 07th November 2020 12:36 PM | A+A A-

ಸಾಂದರ್ಭಿಕ ಚಿತ್ರ
ತುಮಕೂರು: ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಶಿರಾದಲ್ಲಿ 50 ಮಂದಿ ಐಸೋಲೇಟ್ ನಲ್ಲಿದ್ದಾರೆ,
ಶಿರಾ ಉಪಚುನಾವಣೆ ಸಂದರ್ಭದಲ್ಲಿ ಉಂಟಾದ ಜನ ದಟ್ಟಣೆಯ ಕಾರಣ ಶೇ.20 ರಷ್ಟು ಜನಸಂಖ್ಯೆಗೆ ಸೋಂಕು ತಟ್ಟಿದ್ದು, ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಬೇಕೆಂದು ಸರ್ಕಾರ ಸೂಚಿಸಿತ್ತು.
ಶುಕ್ರವಾರ 3,768 ಮಂದಿಗೆ ಪರೀಕ್ಷೆ ನಡೆಸಿದ್ದು, ಅವರ್ಯಾರಲ್ಲೂ ರೋಗ ಲಕ್ಷಣಗಳಿರಲಿಲ್ಲ, 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲು 45 ತಂಡ ರಚಿಸಲಾಗಿದೆ.
ನವೆಂಬರ್ 14ರವರೆಗೆ 45 ಸಾವಿರ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗುವುದು, ಇವರೆಲ್ಲಾ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದವರಾಗಿದ್ದಾರೆ. 135 ಆರೋಗ್ಯ ಅಧಿಕಾರಿಗಳು, ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳಲಿದ್ದಾರೆ.
ಇನ್ನೂ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ತಾಲೂಕು ಕಚೇರಿ ಅಧಿಕಾರಿಗಳಿಗೂ ಪರೀಕ್ಷೆ ನಡೆಸಿದ್ದು ನೆಗೆಟಿವ್ ಬಂದಿದೆ, ಪೊಲೀಸ್ ಸಿಬ್ಬಂದಿಗೂ ಪರೀಕ್ಷೆ ನಡೆಸಲಾಗುವುದು ಎಂದು ನೋಡಲ್ ಅಧಿಕಾರಿ ಡಾ.ಸನತ್ ಹೇಳಿದ್ದಾರೆ.