ಕೋವಿಡ್-19 ಪರೀಕ್ಷೆಯ ಹಣ ಮರುಪಾವತಿಯಲ್ಲಿ ಸರ್ಕಾರದ ವಿಳಂಬ: ಖಾಸಗಿ ಲ್ಯಾಬ್ ಗಳ ಅಸಮಾಧಾನ

ಸರ್ಕಾರ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ನಡುವಿನ ತಿಕ್ಕಾಟಕ್ಕೆ ಕೋವಿಡ್-19 ಪರೀಕ್ಷೆಯ ಹಣ ಮರುಪಾವತಿಯ ವಿಷಯ ಕಾರಣವಾಗಿದೆ. 
ಕೋವಿಡ್-19 ಪರೀಕ್ಷೆಯ ಹಣ ಮರುಪಾವತಿಯಲ್ಲಿ ವಿಳಂಬ: ಖಾಸಗಿ ಲ್ಯಾಬ್ ಗಳಿಂದ ಅಸಮಾಧಾನ
ಕೋವಿಡ್-19 ಪರೀಕ್ಷೆಯ ಹಣ ಮರುಪಾವತಿಯಲ್ಲಿ ವಿಳಂಬ: ಖಾಸಗಿ ಲ್ಯಾಬ್ ಗಳಿಂದ ಅಸಮಾಧಾನ

ಬೆಂಗಳೂರು: ಸರ್ಕಾರ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ನಡುವಿನ ತಿಕ್ಕಾಟಕ್ಕೆ ಕೋವಿಡ್-19 ಪರೀಕ್ಷೆಯ ಹಣ ಮರುಪಾವತಿಯ ವಿಷಯ ಕಾರಣವಾಗಿದೆ. 

ಸರ್ಕಾರದಿಂದ ಕಳಿಸಲಾಗುವ ಕೋವಿಡ್-19 ಪರೀಕ್ಷೆಗಳ ವೆಚ್ಚಗಳಿಗೆ ಸರ್ಕಾರ 800 ರೂಪಾಯಿ ದರ ನಿಗದಿಪಡಿಸಿತ್ತು. ಆದರೆ ಹೆಚ್ಚುವರಿ ಹಣವನ್ನು ಖಾಸಗಿ ಲ್ಯಾಬ್ ಗಳಿಗೆ ಮರುಪಾವತಿ ಮಾಡಬೇಕಿರುವ ಸರ್ಕಾರ ಈ ವರೆಗೂ ಒಂದೇ ಒಂದು ರೂಪಾಯಿಯನ್ನೂ ಪಾವತಿ ಮಾಡಿಲ್ಲ ಎಂದು ಖಾಸಗಿ ಲ್ಯಾಬ್ ಗಳು ಅಸಮಾಧಾನ ವ್ಯಕ್ತಪಡಿಸಿವೆ.

ಅ.16 ರಂದು ಸರ್ಕಾರ ಆರ್ ಟಿ ಪಿಸಿಆರ್ ಪರೀಕ್ಷೆಗೆ 800 ರೂಪಾಯಿ ದರ ನಿಗದಿಪಡಿಸಿತ್ತು. ಸ್ಯಾಂಪಲ್ ಗಳನ್ನು ಸಾರಿಗೆ ಮೂಲಕ ಖಾಸಗಿ ಲ್ಯಾಬ್ ಗಳಿಗೆ ಕಳಿಸುವುದಕ್ಕೆ 400 ರೂಪಾಯಿಗಳಿಗೆ ನಿಗದಿಪಡಿಸಿತ್ತು.

ನಾಲ್ಕು ವಾರಗಳಿಂದ ಸರ್ಕಾರ ಮರುಪಾವತಿ ಮಾಡಿಲ್ಲ ಎಂದು ಖಾಸಗಿ ಲ್ಯಾಬ್ ನ ಸಿಇಒ ಹೇಳಿದ್ದಾರೆ. ಲ್ಯಾಬ್ ಗಳು ಅನೇಕ ಪೂಲ್ ಟೆಸ್ಟ್ ಗಳನ್ನೂ ಮಾಡಿವೆ ಎರಡನೇ ಬಾರಿ ನಡೆಸಿದ ಟೆಸ್ಟ್ ಗಳಿಗೆ ಸರ್ಕಾರ ಹಣ ಕೊಟ್ಟಿಲ್ಲ ಎಂದು ಖಾಸಗಿ ಲ್ಯಾಬ್ ಗಳು ದೂರಿವೆ.

ಈ ಬಗ್ಗೆ ಖಾಸಗಿ ವೈದ್ಯಕೀಯ ಪ್ರಾಂಶುಪಾಲರು ಮಾತನಾಡಿದ್ದು, ತಮ್ಮ ಸಂಸ್ಥೆಗಳೂ ಸಹ ಟೆಸ್ಟಿಂಗ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸರ್ಕಾರ ಈ ವರೆಗೂ 29,700 ರೂಪಾಯಿ ನೀಡಬೇಕಿದೆ ಈ ವರೆಗೂ ಒಂದೇ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.

ಲ್ಯಾಬ್ ಸ್ಥಾಪನೆಗೆ 1.5 ಕೋಟಿ ರೂಪಾಯಿ ಖರ್ಚು ಮಾಡಿರುತ್ತೇವೆ, ಸರ್ಕಾರ ಮರುಪಾವತಿ ಮಾಡದೇ ಇರುವುದಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com