ರೈಲ್ವೆ ರಾಷ್ಟ್ರೀಯ ಪ್ರಶಸ್ತಿಗೆ ಇಬ್ಬರು ಮಹಿಳೆಯರು ಸೇರಿ ರಾಜ್ಯದ 6 ಮಂದಿ ಆಯ್ಕೆ

ರೈಲ್ವೆ ಸಚಿವಾಲಯದಿಂದ 65 ನೇ ವಾರ್ಷಿಕ ರೈಲ್ವೆ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲು ಕರ್ನಾಟಕದ ಆರು ರೈಲ್ವೆ ನೌಕರರನ್ನು ಆಯ್ಕೆ ಮಾಡಲಾಗಿದೆ, ಇದು 'ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ'  ಸಿಕ್ಕುವ ಅವಕಾಶವೆಂದು ಪರಿಗಣಿಸಲ್ಪಟ್ಟಿದೆ. ಅವರು ಮಾರ್ಚ್ 2020 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ದೇಶಾದ್ಯಂತ 139 ಪ್ರಶಸ್ತಿ ಪುರಸ್ಕೃತರು ಇದರ ಭಾಗವಾಗಲಿದ್ದಾರೆ.
ಗೀತಾ ಮೊಹಾಪಾತ್ರ , ಕೆ ಪೂಜಾ
ಗೀತಾ ಮೊಹಾಪಾತ್ರ , ಕೆ ಪೂಜಾ

ಬೆಂಗಳೂರು: ರೈಲ್ವೆ ಸಚಿವಾಲಯದಿಂದ 65 ನೇ ವಾರ್ಷಿಕ ರೈಲ್ವೆ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲು ಕರ್ನಾಟಕದ ಆರು ರೈಲ್ವೆ ನೌಕರರನ್ನು ಆಯ್ಕೆ ಮಾಡಲಾಗಿದೆ, ಇದು 'ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ'  ಸಿಕ್ಕುವ ಅವಕಾಶವೆಂದು ಪರಿಗಣಿಸಲ್ಪಟ್ಟಿದೆ. ಅವರು ಮಾರ್ಚ್ 2020 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ದೇಶಾದ್ಯಂತ 139 ಪ್ರಶಸ್ತಿ ಪುರಸ್ಕೃತರು ಇದರ ಭಾಗವಾಗಲಿದ್ದಾರೆ.

ಕೋವಿಡ್ ಬಿಕ್ಕಟ್ಟಿನಿಂದಾಗಿ ನವೆಂಬರ್ 5ಕ್ಕೆ ಪ್ರಶಸ್ತಿ ವಿಜೇತರ ಹೆಸರನ್ನು ವಿಳಂಬವಾಗಿ ಘೋಷಿಸಲಾಗಿದೆ.  ಅಲ್ಲದೆ ಈ ಬಾರಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಸಮಾರಂಭ ವರ್ಚುವಲ್ ಶೈಲಿಯಲ್ಲಿರಲಿದೆ.ಬೆಂಗಳೂರು ರೈಲ್ವೆ ವಿಭಾಗದಲ್ಲಿ ಅವರ ಅತ್ಯುತ್ತಮ ಸಾಧನೆಗಾಗಿ ಇಬ್ಬರು ಮಹಿಳಾ ಉದ್ಯೋಗಿಗಳು ಸೇರಿದಂತೆ ಮೂವರನ್ನು ಆಯ್ಕೆ ಮಾಡಲಾಗಿದೆ. ಇನ್ನೊಬ್ಬ ಅಧಿಕಾರಿ ಮೈಸೂರಿನ ಸೆಂಟ್ರಲ್ ರೈಲ್ವೆ ಕಾರ್ಯಾಗಾರಕ್ಕೆ ಸೇರಿದವರಾಗಿದ್ದು, ಇಬ್ಬರು ಯಲಹಂಕಾದ ರೈಲ್ವೆ ಚಕ್ರದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ಕೆ.ವರ್ಮಾ ಅವರ ಪ್ರಕಾರ, "ಇದು ಯಾವುದೇ ರೈಲ್ವೆ ನೌಕರರು ತಮ್ಮ ವೃತ್ತಿಜೀವನದಲ್ಲಿ ಪಡೆಯಬಹುದಾದ ಅತ್ಯುನ್ನತ ಗೌರವ. ನೈಋತ್ಯ ರೈಲ್ವೆಯ  ಇಬ್ಬರು ಮಹಿಳಾ ಅಧಿಕಾರಿಗಳು ಬೆಂಗಳೂರು ವಿಭಾಗದ ಇತ್ತೀಚೆಗೆ ರೈಲ್ವೆ ನೇಮಕಾತಿ ಮಂಡಳಿಗೆ ಸದಸ್ಯ ಕಾರ್ಯದರ್ಶಿಯಾಗಿ ಸೇರ್ಪಡೆಯಾಗಿರುವ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕಿ ಗೀತಾ ಮೊಹಾಪಾತ್ರ ಈ ಗೌರವಕ್ಕೆ ಪಾತ್ರವಾಗಿದ್ದು  "ನಾವು ಪ್ರಶಸ್ತಿಗಳಿಗಾಗಿ ಕೆಲಸ ಮಾಡುವುದಿಲ್ಲ ಆದರೆ ಮಾನ್ಯತೆ ದೊರಕಿರುವುದುನಿಜಕ್ಕೂ ಒಳ್ಳೆಯದು ನಮ್ಮ ಕೆಲಸದ ಬಗ್ಗೆನಮಗೆ ತುಂಬಾ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ಇದೇ ವಿಭಾಗದ ಹಿರಿಯ ವಿಭಾಗೀಯ ವಿದ್ಯುತ್ ಎಂಜಿನಿಯರ್ ಆಗಿರುವ ಕೆ ಪೂಜಾ ಅವರಿಗೂ ಪ್ರಶಸ್ತಿ ಒಲಿದಿದೆ.2009 ರಲ್ಲಿ ವಿಭಾಗದಲ್ಲಿ ಜೂನಿಯರ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿರುವ ಪೂಜಾ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್ ಅಳವಡಿಸಲು ರೈಲ್ವೆ ಮಂಡಳಿಯು ನಿಗದಿಪಡಿಸಿದ ಗುರಿಯನ್ನು ಪೂರೈಸಿದ ದೇಶದ ಮೊದಲನೆಯ ವಿಭಾಗವಾಗಿ ಬೆಂಗಳೂರು ಹೊರಹೊಮ್ಮಲು ಕಾರ್ಣೀಭೂತವಾಗಿದ್ದಾರೆ.

"ಇದು ಅದ್ಭುತ ಕ್ಷಣ. ಇದು ಒಮ್ಮೆ ಜೀವಿತಾವಧಿಯಲ್ಲಿ ಬರುವಂತಹುದು,ಅತ್ಯುನ್ನತ ಮಟ್ಟದಲ್ಲಿ ಗುರುತಿಸಲ್ಪಟ್ಟದ್ದಕ್ಕೆ ಹೆಮ್ಮೆ ಇದೆ.  ಮೇಲಧಿಕಾರಿಗಳು ನನಗೆ ಸದಾ ಬೆನ್ನ ಹಿಂದೆ ಬೆಂಬಲ ಸೂಚಿಸುತ್ತಿದ್ದರು, ಹಾಗಾಗಿ ನನಗೆ ಇದು ಸರಳವಾಗಿದೆ" ಅವರು ಹೇಳೀದ್ದಾರೆ.

ಹಿರಿಯ ವಿಭಾಗೀಯ ಸಿಬ್ಬಂದಿ ವ್ಯವಸ್ಥಾಪಕ, ಕೆ ಆಸಿಫ್ ಹಫೀಜ್, ವಾರ್ಷಿಕವಾಗಿ ಸುಮಾರು 2,000 ಉದ್ಯೋಗಿಗಳು ಬರೆಯುವ ಬಡ್ತಿಗಾಗಿ ಸಿಬ್ಬಂದಿ ತೆಗೆದುಕೊಳ್ಳುವ ರೈಲ್ವೆ ಪರೀಕ್ಷೆಗಳನ್ನು ಗಣಕೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು, ಇನ್ನು  ಮೈಸೂರಿನ ಅಶೋಕಪುರಂನ ಕೇಂದ್ರ ರೈಲ್ವೆ ಕಾರ್ಯಾಗಾರದ ಮುಖ್ಯ ಡಿಪೋ ಮೆಟೀರಿಯಲ್ಸ್ ಅಧೀಕ್ಷಕ ಇ ಅಶ್ವತಪ್ಪ ಅವರಿಗೂ ಪ್ರಶಸ್ತಿ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com