ಬಿಬಿಎಂಪಿಯಲ್ಲಿ ಪಾರದರ್ಶಕತೆಗೆ ಒತ್ತು: ಯೋಜನೆ ವಿವರಗಳಿನ್ನು ವೆಬ್‌ಸೈಟ್‌ನಲ್ಲೂ ಲಭ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಶನಿವಾರದಿಂದ 2015 ರಿಂದೀಚಿನ ಲ್ಲಾ ಯೋಜನೆಗಳ ಮಾಹಿತಿಯನ್ನು ಒಳಗೊಂಡ ಪರಿಷ್ಕೃತ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಶನಿವಾರದಿಂದ 2015 ರಿಂದೀಚಿನ ಲ್ಲಾ ಯೋಜನೆಗಳ ಮಾಹಿತಿಯನ್ನು ಒಳಗೊಂಡ ಪರಿಷ್ಕೃತ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ.

ಸೆಪ್ಟೆಂಬರ್ 11 ರಂದು ಅಧಿಕಾರ ವಹಿಸಿಕೊಂಡ ಕೂಡಲೇ, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾಪಾಲಿಕೆ ವೆಬ್‌ಸೈಟ್‌ನಲ್ಲಿ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡುವ ಮೂಲಕ ನಾಗರಿಕರಿಗೆ ಹೆಚ್ಚು ಪ್ರೊಆಕ್ಟಿವ್ ಹಾಗೂ ಹೆಚ್ಚು ಆಕ್ಸಿಸೆಬಲ್ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ ಪ್ರಸಾದ್ ಅವರು ಅಧಿಕಾರ ವಹಿಸಿಕೊಂಡ ನಂತರ ಹೆಚ್ಚಿನ ಪಾರದರ್ಶಕತೆ ನೀಡುವ ಭರವಸೆ ನೀಡಿದ್ದರು.

ಪರಿಷ್ಕರಿಸಿಲಾದ ವೆಬ್‌ಸೈಟ್ ಜೂನ್ 2015 ರಿಂದ ಬಿಬಿಎಂಪಿ ಕೈಗೊಂಡ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆಯುಕ್ತರು, ಎಲ್ಲಾ ಯೋಜನೆಗಳ ವಿವರಗಳಾದ ಕೆಲಸದ ಸಂಬಂಧದ ಆದೇಶಗಳು, ಗುತ್ತಿಗೆದಾರರ ವಿವರಗಳು, ಖರ್ಚು, ಯೋಜನೆಯ ಸ್ಥಿತಿ, ವಿಳಂಬಕ್ಕೆ ಕಾರಣ, ಬುಕ್ ಮೆಸರ್ ಮೆಂಟ್ ಹಾಗೂ ಫ್ಟೋಗ್ರಫಿ ಡಾಕ್ಯುಮೆಂಟೇಷನ್ ಗಳನ್ನು ಅಪ್‌ಲೋಡ್ ಮಾಡಲಾಗಿದೆ. ಯಾವುದೇ ನಾಗರಿಕರು ಇದನ್ನು ನೋಡಬಹುದು. ತಿದ್ದುಪಡಿಗಳು, ಸಲಹೆಗಳು ಮತ್ತು ಕಾಮೆಂಟ್‌ಗಳಿಗಾಗಿ ಬಿಬಿಎಂಪಿಯನ್ನು ಸಂಪರ್ಕಿಸಬಹುದು. ವಾರ್ಡ್ ಸಮಿತಿ ಸಭೆಗಳು ಸೇರಿದಂತೆ ಬಳಕೆದಾರರು ಮಾಹಿತಿ, ವಾರ್ಡ್ ವಾರು ಪ್ರವೇಶಕ್ಕೂ ಅವಕಾಶವಿದೆ. ನಡೆಯುತ್ತಿರುವ ಕೆಲಸದ ಬಗ್ಗೆ ಇತ್ತೀಚಿನ ಮಾಹಿತಿಯನ್ನೂ ನೀಡಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವೆಬ್‌ಸೈಟ್ ಅನ್ನು ನಿರಂತರವಾಗಿ ನವೀಕರಿಸಲಾಗುವುದು ಎಂದು ಪ್ರಸಾದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com