ಹಂಪಿಯದ್ದು ಮಂತ್ರಮುಗ್ದಗೊಳಿಸುವ ಅದ್ಭುತ ಸೌಂದರ್ಯ: ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹಂಪಿಯ ಸೌಂದರ್ಯವನ್ನು ವೀಕ್ಷಣೆ ಮಾಡಿದರು. ವಿಶ್ವಪಾರಂಪರಿಕ ತಾಣದ ಕುರಿತು ಅವರು ಮೆಚ್ಚುಗೆ ಸೂಚಿಸಿದರು. 

Published: 09th November 2020 12:27 PM  |   Last Updated: 09th November 2020 12:50 PM   |  A+A-


NITI Ayog CEO Amitabh Kant and his family visit Hampi

ಹಂಪಿಗೆ ನೀತಿ ಆಯೋಗದ ಸಿಇಒ ಭೇಟಿ

Posted By : Shilpa D
Source : The New Indian Express

ಬಳ್ಳಾರಿ: ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹಂಪಿಯ ಸೌಂದರ್ಯವನ್ನು ವೀಕ್ಷಣೆ ಮಾಡಿದರು. ವಿಶ್ವಪಾರಂಪರಿಕ ತಾಣದ ಕುರಿತು ಅವರು ಮೆಚ್ಚುಗೆ ಸೂಚಿಸಿದರು. 

ಶನಿವಾರ ಮತ್ತು ಭಾನುವಾರ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹಂಪಿ ಪ್ರವಾಸ ಕೈಗೊಂಡಿದ್ದರು. ಕುಟುಂಬ ಸಮೇತ ಶನಿವಾರ ಹಂಪಿಗೆ ಆಗಮಿಸಿದ್ದ ಅವರು ಪ್ರಮುಖ ಸ್ಮಾರಕಗಳ ವೀಕ್ಷಣೆ ನಡೆಸಿದರು. ಪ್ರವಾಸಿ ತಾಣದ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ಬ್ಯಾಟರಿ ಚಾಲಿತ ವಾಹನದಲ್ಲಿ ಹಂಪಿ ವೀಕ್ಷಿಸಿ ಭಾನುವಾರವೂ ಸಹ ಹಂಪಿಯ ವಿವಿಧ ಸ್ಮಾರಕಗಳ ವೀಕ್ಷಣೆಯನ್ನು ಅವರು ನಡೆಸಿದರು. ಹಂಪಿಯ ಪ್ರಸಿದ್ಧ ಕಲ್ಲಿನ ರಥದ ಮುಂದೆ ಅವರು ಫೋಟೋ ತೆಗೆಸಿಕೊಂಡರು. 

ಹಂಪಿ ವೀಕ್ಷಣೆ ಬಳಿಕ ಮಾತನಾಡಿದ ಅಮಿತಾಭ್ ಕಾಂತ್, "ಹಂಪಿಯ ಸೌಂದರ್ಯವನ್ನು ನೋಡಲು ಎರಡು ದಿನಗಳ ಸಮಯ ಸಾಕಾಗುವುದಿಲ್ಲ, ಕೆಲವು ದಿನಗಳ ಕಾಲ ರಜೆ ಬೇಕು. ಇಲ್ಲಿಯ ನಿರ್ವಹಣೆಯೂ ಚೆನ್ನಾಗಿದೆ ಎಂದು ಹೇಳಿದರು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp