ಆಗಸ್ಟ್ ನಲ್ಲಿ ರಾಜ್ಯದ ಶೇ.46ರಷ್ಟು ಮಂದಿಗೆ ಕೋವಿಡ್ ಬಂದಿತ್ತು: ಸೆರೋ ಸಮೀಕ್ಷೆ ವರದಿ

ಕಳೆದ ಆಗಸ್ಟ್ ವೇಳೆಗೆ ಕರ್ನಾಟಕದ ಜನಸಂಖ್ಯೆಯ ಅರ್ಧದಷ್ಟು ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಸಹ, ಜೂನ್ ಮಧ್ಯಭಾಗದಿಂದ ಆಗಸ್ಟ್ ನಡುವೆ ಖಾಸಗಿ ಸಂಸ್ಥೆ ಸೆರೋ ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ. 46.7 ಮಂದಿ ಸೋಂಕಿಗೆ ಒಳಗಾಗಿದ್ದರು.
ಆಗಸ್ಟ್ ನಲ್ಲಿ ರಾಜ್ಯದ ಶೇ.46ರಷ್ಟು ಮಂದಿಗೆ ಕೋವಿಡ್ ಬಂದಿತ್ತು: ಸೆರೋ ಸಮೀಕ್ಷೆ ವರದಿ

ಬೆಂಗಳೂರು: ಕಳೆದ ಆಗಸ್ಟ್ ವೇಳೆಗೆ ಕರ್ನಾಟಕದ ಜನಸಂಖ್ಯೆಯ ಅರ್ಧದಷ್ಟು ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಸಹ, ಜೂನ್ ಮಧ್ಯಭಾಗದಿಂದ ಆಗಸ್ಟ್ ನಡುವೆ ಖಾಸಗಿ ಸಂಸ್ಥೆ ಸೆರೋ ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ. 46.7 ಮಂದಿ ಸೋಂಕಿಗೆ ಒಳಗಾಗಿದ್ದರು. ಇದು ಆಗಸ್ಟ್ 29 ರೊಳಗೆ ಆರೋಗ್ಯ ಇಲಾಖೆಯಿಂದ ವರದಿಯಾದ ಪ್ರಕರಣಗಳ ಸಂಖ್ಯೆಗೂ 96.4 ಪಟ್ಟು ಹೆಚ್ಚಾಗಿದೆ. ಸಮೀಕ್ಷೆ ಪ್ರಕಾರ ರಾಜ್ಯದ 3.27 ಲಕ್ಷ ಜನಕ್ಕೆ ಕೋವಿಡ್ ಸೋಂಕು ತಗುಲಿತ್ತು.

ಐಡಿಎಫ್‌ಸಿ ಇನ್ಸ್ಟಿಟ್ಯೂಟ್ ಡ್ಯೂಕ್ ವಿಶ್ವವಿದ್ಯಾಲಯ, ಚಿಕಾಗೊ ವಿಶ್ವವಿದ್ಯಾಲಯ, ಮ್ಯಾಪ್ಮಿಜೆನೊಮ್ ಮತ್ತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಜ್ಞರು ಸೆರೊಪ್ರೆವೆಲೆನ್ಸ್ ಸಮೀಕ್ಷೆಯ ವರದಿಗಳನ್ನು ಬಿಡುಗಡೆ ಮಾಡಿದರು. ಇದಕ್ಕೆ ಎಸಿಟಿ ಅನುದಾನ ನೀಡಿತ್ತು.

ಸಂಶೋಧನೆಯ ಪ್ರಮುಖಾಂಶಗಳು

ಗ್ರಾಮೀಣ ಕರ್ನಾಟಕದಲ್ಲಿ ಶೇ.44.1, ನಗರಗಳಲ್ಲಿ ಶೇ. 53.8ರಷ್ಟು ಮಂದಿ , ಒಟ್ಟಾರೆ ರಾಜ್ಯದಲ್ಲಿ ಶೇ. 46.7 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.ಗ್ರಾಮೀಣ ಪ್ರದೇಶಗಳು ಬಹುತೇಕ ಸಮಾನ ಪರಿಣಾಮಕ್ಕೆ ಒಲಗಾಗಿದ್ದವು., ನಗರ ಪ್ರದೇಶಗಳು ಮಾತ್ರ ಕೋವಿಡ್ಗೆ ಹೆಚ್ಚು ಗುರಿಯಾಗುತ್ತವೆ ಎಂಪ್ರದೇಶಗಳಲ್ಲಿಬ ಗ್ರಹಿಕೆಗೆ ವಿರುದ್ಧವಾಗಿಗ್ರಾಮೀಣ ಪ್ರದೇಶಗಳಲ್ಲಿ ಸಹ ಸೋಂಕು ಭಾರೀ ಹೆಚ್ಚಳವಾಗಿತ್ತು.

ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.1.5 ನಿಂದ 1.7 ನಡುವೆ ಹಾಗೂ ನಗರ  ಪ್ರದೇಶಗಳಲ್ಲಿ ಶೇ,. 4ರಿಂದ 10.5ರ ನಡುವೆ ಧನಾತ್ಮಕ ಪರೀಕ್ಷೆ ನಡೆಸಿದ್ದು, ಇದು ರೋಗದ ಶೀಘ್ರ ಹರಡುವಿಕೆಯನ್ನು ಸೂಚಿಸುತ್ತದೆ. "ನಮ್ಮ ಡೇಟಾವು ಹೆಚ್ಚಿನ ಮಟ್ಟದ ಸಕ್ರಿಯ ಸೋಂಕುಗಳು ಮತ್ತು ರೋಗ ವ್ಯಾಪಿಸುವಿಕೆಗೆ ಪುರಾವೆಗಳನ್ನು ತೋರಿಸುತ್ತದೆ, ವಿಶೇಷವಾಗಿ ನಮ್ಮ ಅಧ್ಯಯನದ ಅವಧಿಯಲ್ಲಿ ಮೈಸೂರು ಮತ್ತು ಕರಾವಳಿ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಶೇ.9.7-0.5 ವ್ಯಕ್ತಿಗಳು ಪ್ರಸ್ತುತ ಸೋಂಕಿಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ" ಎಂದುಚಿಕಾಗೊ ವಿಶ್ವವಿದ್ಯಾಲಯ, ಮತ್ತು ಅಧ್ಯಯನದ ಸಂಶೋಧಕರಲ್ಲಿ ಒಬ್ಬರಾದ ಪ್ರಿಟ್ಜ್ಕರ್ ಸ್ಕೂಲ್ ಆಫ್ ಪ್ರಾಧ್ಯಾಪಕ ಅನುಪ್ ಮಲಾನಿ ಹೇಳಿದರು

ಈ ಅಧ್ಯಯನವು ಕೋವಿಡ್ -19 ಗೆ ನಿರ್ದಿಷ್ಟವಾದ ಪ್ರತಿಕಾಯಗಳ ಉಪಸ್ಥಿತಿಯನ್ನು ಕಂಡುಹಿಡಿಯಲು ಎಲಿಸಾ ಪರೀಕ್ಷೆಗಳನ್ನು ಬಳಸಿತು ಮತ್ತು ಪ್ರಸ್ತುತ ಸೋಂಕುಗಳನ್ನು ನಿರ್ಧರಿಸಲು ನಿಗದಿ ಮಾಡಿದ್ದ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಿತು. ಅಧ್ಯಯನದ ಮಾದರಿಯು 20 ಜಿಲ್ಲೆಗಳಲ್ಲಿ 2,912 ಮನೆಗಳನ್ನು ಒಳಗೊಂಡಿದ್ದು, ಪ್ಯಾನಲ್ ಸಮೀಕ್ಷೆಯ ಅಸ್ತಿತ್ವದಲ್ಲಿರುವ ಮಾದರಿಯಲ್ಲಿ , ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಕನ್ಸ್ಯೂಮರ್ ಪಿರಮಿಡ್ಸ್ ಹೌಸ್ಹೋಲ್ಡ್ ಸರ್ವೆ ನಿಗಾವಹಿಸಿತ್ತು. ಒಟ್ಟೂ ಪ್ರದೇಶಗಳನ್ನು 5 ಏಕರೂಪದ ಪ್ರದೇಶಗಳಾಗಿ ವಿಂಗಡಿಸಲಾಗಿದೆ - ಬೆಂಗಳೂರು ಎಚ್‌ಆರ್, ಬೆಳಗಾವಿ, ಎಚ್‌ಆರ್, ಕಲಬುರಗಿ ಎಚ್‌ಆರ್, ಮೈಸೂರು ಎಚ್‌ಆರ್ ಮತ್ತು ಕರಾವಳಿ ಎಚ್‌ಆರ್ಇದು ಕೃಷಿ-ಹವಾಮಾನ ಪರಿಸ್ಥಿತಿಗಳು, ನಗರೀಕರಣ ದರಗಳು ಮತ್ತಿತರೆ  ಅಂಶಗಳನ್ನು ಆಧಾರವಾಗಿ ಹೊಂದಿದೆ.

ಶಿಫಾರಸುಗಳು

ಡ್ಯೂಕ್ ವಿಶ್ವವಿದ್ಯಾಲಯದ ಸ್ಯಾನ್‌ಫೋರ್ಡ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧಕರಲ್ಲಿ ಒಬ್ಬರಾದ ಡಾ. ಮನೋಜ್ ಮೋಹನನ್, ಈ ಸಂಶೋಧನೆಗಳು ಪ್ರಕರಣಗಳು ತಗ್ಗುತ್ತಿದೆ ಎನ್ನುವ್ದುಅನ್ನು ಸೂಚಿಸಿಲ್ಲ ಎಂದಿದ್ದಾರೆ. "ನಿಜವಾದ ಸಂಖ್ಯೆಯ ಪ್ರಕರಣಗಳನ್ನು ಕಂಡುಹಿಡಿಯಲು ಸಾಕಷ್ಟು ಯಾದ್ರಿಚ್ಚಿಕ ಪರೀಕ್ಷೆ ಇಲ್ಲ ಎಂದು ಸಂಶೋಧನೆಗಳು ಸೂಚಿಸುತ್ತವೆ. ಉದಾಹರಣೆಗೆ, ಪಾಸಿಟಿವ್ ವರದಿ ಬಂದಿರುವ ಐವರು ಅಕ್ಕಪಕ್ಕದ ಮನೆಯವರಲ್ಲಿ ಒಬ್ಬರು ಮಾತ್ರ ರೋಗಲಕ್ಷಣವನ್ನು ಹೊಂದಿರುತ್ತಾರೆ ಮತ್ತು ಅವರಿಗಷ್ಟೇ ಕೋವಿಡ್ ಇರುವುದು ಖಚಿತವಾಗುತ್ತದೆ. ಇತರರು ಕೋವಿಡ್ ಹೊಂದಿದ್ದರೂ ಸಹ ಪತ್ತೆಯಾಗುವುದಿಲ್ಲ.ಭಾರತದ ಜನಸಂಖ್ಯೆಯ ಸುಮಾರು 90-95% ರಷ್ಟು ಮಂದಿಗೆ ಯಾವ ರೋಗ ಲಕ್ಷಣಗಳಿಲ್ಲ. ಉದ್ದೇಶಿತ ಸ್ಥಳಗಳಲ್ಲಿ ಯಾದ್ರಿಚ್ಚಿಕ ಪರೀಕ್ಷೆಯನ್ನು ನಡೆಸಲು ರಾಜ್ಯವು ನೀತಿ ನಿರ್ಧಾರವನ್ನು ತೆಗೆದುಕೊಳ್ಳಬಹುದು, ”ಎಂದು ಅವರು ಹೇಳಿದರು, ರೋಗಿಗಳನ್ನು ಮಾತ್ರವಲ್ಲದೆ ರೋಗವನ್ನು ಹರಡುವ ಜನರ ಮೇಲೆ ಗಮನ ಕೇಂದ್ರೀಕರಿಸುವ ಅವಶ್ಯಕತೆಯಿದೆ.

ಉತ್ಪಾದಕ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡುವ ಬದಲು ಆಗಾಗ್ಗೆ ಪರೀಕ್ಷೆಯನ್ನು ಅಳವಡಿಸಿಕೊಳ್ಳಲು ಬಲವಾದ ಕಾರಣವಿದೆ ಎಂದು ವರದಿ ಹೇಳಿದೆ. ಟೋಟಲ್ ಬ್ರೇಕ್ ಔಟ್ ನಂತಹಾ ಪಾಯದಲ್ಲಿರುವ ಜನಸಂಖ್ಯೆಯಲ್ಲಿ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಇದು ತೀವ್ರತರವಾದ ಪ್ರಕರಣಗಳಲ್ಲಿ ಅಥವಾ ಮರಣಗಳಂತಹಾ ಘಟನೆಗೆ ಕಾರಣವಾಗಬಹುದು ಮತ್ತು ಇದು ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಹೊರೆ ಉಂಟುಮಾಡುತ್ತದೆ. ಆದ್ದರಿಂದ ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಕೋವಿಡ್ ಅಪಾಯದ ಬಗ್ಗೆ ಅಪಾಯದಲ್ಲಿರುವ ವ್ಯಕ್ತಿಗಳಿಗೆ ತಿಳಿಸುವ ಪ್ರಯತ್ನಗಳನ್ನು ಮುಂದುವರಿಸುವುದು ಬಹಳ ಮುಖ್ಯ. ”
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com