ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಲಿವೆ!

13 ವರ್ಷಗಳ ಬಳಿಕ ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸಲಿವೆ.
ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗವಾಗಿ ಚಲಿಸಲಿರುವ ರೈಲುಗಳು
ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗವಾಗಿ ಚಲಿಸಲಿರುವ ರೈಲುಗಳು

ಬೆಂಗಳುರು: 13 ವರ್ಷಗಳ ಬಳಿಕ ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸಲಿವೆ. ಪ್ರಸ್ತುತ ಗಂಟೆಗೆ 75 ಕಿ.ಮೀ ಸಂಚರಿಸುತ್ತಿದ್ದು, ಈ ಬದಲಾವಣೆಯ ಮೂಲಕ ನೈಋತ್ಯ ರೈಲ್ವೆಯಲ್ಲಿ 8 ಪ್ರದೇಶಗಳಲ್ಲಿ ಹೆಚ್ಚಿನ ವೇಗದಲ್ಲಿ ರೈಲುಗಳು ಸಂಚರಿಸಲಿವೆ.

110 ಕಿ.ಮೀ ವೇಗದಲ್ಲಿ ಸ್ಪೀಡ್ ಟೆಸ್ಟ್ ನಡೆಸಲಾಗಿದ್ದು, ಈಗ ಗರಿಷ್ಠ 100 ಕಿಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ ಎಂದು ಎಸ್ ಡಬ್ಲ್ಯುಆರ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ ತಿಳಿಸಿದ್ದಾರೆ.

ಬೈಯ್ಯಪ್ಪನಹಳ್ಳಿ-ಧರ್ಮಾವರಂ, ಪೆನುಕೊಂಡ- ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ- ಧರ್ಮಾವರಂ, ಕೆಎಸ್ಆರ್ ಬೆಂಗಳೂರು-ಜೋಲಾರ್ ಪೆಟ್ಟೈ (ಡಬಲ್ ಲೈನ್), ಯಶವಂತಪುರ-ತುಮಕೂರು (ಡಬಲ್ ಲೈನ್), ಯಶವಂತಪುರ-ತುಮಕೂರು (ಡಬಲ್ ಲೈನ್) ಹಾಗೂ ಬೀರೂರು-ಚಿಕ್ಕಜಾಜೂರು ಮಾರ್ಗಗಳಲ್ಲಿ 110 ಕಿ.ಮೀ ವೇಗದಲ್ಲಿ ಸಂಚರಿಸಲು ಅನುಮತಿ ಇದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಎಸ್ ಡಬ್ಲ್ಯುಆರ್ ರೈಲುಗಳ ವೇಗವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದು 110 ಕಿ.ಮೀ ವೇಗಗತಿಯಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com