ಯಾವ ಕಾರಣಕ್ಕೆ ಸೋತಿದ್ದೇವೆಂಬುದನ್ನು ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ: ಪುಟ್ಟಣ್ಣ

ಯಾವ ಕಾರಣಕ್ಕೆ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆಂಬುದನ್ನು ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಪುಟ್ಟಣ್ಣ ಅವರು ಹೇಳಿದ್ದಾರೆ. 
ಪುಟ್ಟಣ್ಣ
ಪುಟ್ಟಣ್ಣ

ಬೆಂಗಳೂರು: ಯಾವ ಕಾರಣಕ್ಕೆ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆಂಬುದನ್ನು ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಪುಟ್ಟಣ್ಣ ಅವರು ಹೇಳಿದ್ದಾರೆ. 

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದ ಹಿರಿಯ ನಾಯಕರೇ ಪ್ರಚಾರದಲ್ಲಿ ಪಾಲ್ಗೊಂಡರೂ ಸೋಲು ಕಾಣಲು ಕಾರಣವೇನು ಎಂಬುದನ್ನು ಜೆಡಿಎಸ್ ನಾಯಕತ್ವ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಪುಟ್ಟಣ್ಣ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ವಿರುದ್ಧ 2,228 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ ಅವರು 7335 ಮತ, ಜೆಡಿಎಸ್'ನ ರಂಗನಾಥ್ 5017 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ 782 ಮತಗಳನ್ನು ಪಡೆದಿದ್ದಾರೆ. 

ಕ್ಷೇತ್ರದಲ್ಲಿ ಒಟ್ಟು 22261 ಮತದಾರರ ಪೈಕಿ 14,538 ಜನರು ಮತ ಚಲಾಯಿಸಿದ್ದಾರೆ. 1251 ಮತಗಳು ತಿರಸ್ಕೃತಗೊಂಡಿವೆ. ಒಟ್ಟು 13,287 ಮತಗಳನ್ನು ಪರಿಗಣಿಸಲಾಗಿದೆ. ಜೆಡಿಎಸ್ ನಲ್ಲಿದ್ದ ಪುಟ್ಟಣ್ಣ ಬಿಜೆಪಿ ಸೇರಿ ಯಶಸ್ಸು ಕಂಡಿರುವುದು ವಿಶೇಷವಾಗಿದೆ. 

ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಒಟ್ಟು 75,781 ಮತದಾರರ ಪೈಕಿ 52,041 ಮತಗಳ ಚಲಾವಣೆಯಾಗಿದೆ. ಇದರಲ್ಲಿ ಸಂಕನೂರ ಅವರು 23,857 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್'ನ ಆರ್.ಎಂ.ಕುಬೇರಪ್ಪ ಅವರು 12,448 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಜೆಡಿಎಸ್ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರರಿಗೆ ಬೆಂಬಲಿಸಿತ್ತು. ಗುರಿಕಾರ 6188 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 

ಇನ್ನು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪ್ರತಿಸ್ಪರ್ಧಿ ಕಾಂಗ್ರೆಸ್'ನ ಶರಣಪ್ಪ ಮಟ್ಟೂರ್ ವಿರುದ್ಧ 3,310 ಮತಗಳ ಅಂತರದಲ್ಲಿ ಜಯಿಸಿ 4ನೇ ಬಾರಿ ಪರಿಷತ್ ಪ್ರವೇಶಿಸಲಿದ್ದಾರೆ. ಮೇಲ್ಮನೆಗೆ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ಶರಣಪ್ಪ ಮಟ್ಟೂರ್ ಅವರು 7,082 ಮತ ಗಳಿಸಿ ಸೋಲನುಭವಿಸಿದ್ದಾರೆ. ಶಶಿಲ್ ನಮೋಶಿ 9,797 ಮತ ಪಡೆದು ಜಯ ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ 3,812 ಮತ ಗಳಿಸಿದ್ದಾರೆ. 

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮ ಎಣಿಕೆ ಕಾರ್ಯ ತಡರಾತ್ರವರೆಗೂ ಮುಂದುವರೆದಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿ ಡಿಟಿ ಶ್ರೀನಿವಾಸ್ ಮುನ್ನಡೆಯಲಿದ್ದಾರೆ. ಶ್ರೀನಿವಾಸ್ ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿಯಾಗಿದ್ದಾರೆ. 2ನೇ ಸುತ್ತಿನ ಮತ ಎಣಿಕೆ ಮುಗಿದಾಗ ಶ್ರೀನಿವಾಸ್ 7798 ಮತ ಗಳಿಸಿದ್ದರು.  ಬಿಜೆಪಿ ಅಧಿಕೃತ ಅಭ್ಯರ್ಥಿ ಚಿದಾನಂದಗೌಡರು 7202 ಮತ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್'ನ ಚೌಡರೆಡ್ಡಿ ತೂಪಲ್ಲಿ 5374 ಮತ, ಕಾಂಗ್ರೆಸ್'ನ ರಮೇಶ್ ಬಾಬು 2949 ಮತ ಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com