ಬೆಂಗಳೂರು: ಬರೋಬ್ಬರಿ 32 ಟ್ರಾಕ್ಟರ್ ಕದ್ದಿದ್ದ ಖದೀಮನ ಬಂಧನ
ಟ್ರ್ಯಾಕ್ಟರ್ ಗಳನ್ನು ಕದ್ದು ರೈತರಿಗೆ ಬಾಡಿಗೆಗೆ ನೀಡಿ ಹಣ ಸಂಪಾದನೆಯ ಮಾರ್ಗ ಕಂಡುಕೊಂಡಿದ್ದ ಮಂಡ್ಯ ಮೂಲದ 48 ವರ್ಷದ ಚಾಲಾಕಿ ಕಳ್ಳನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
Published: 13th November 2020 08:34 PM | Last Updated: 13th November 2020 08:34 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಟ್ರ್ಯಾಕ್ಟರ್ ಗಳನ್ನು ಕದ್ದು ರೈತರಿಗೆ ಬಾಡಿಗೆಗೆ ನೀಡಿ ಹಣ ಸಂಪಾದನೆಯ ಮಾರ್ಗ ಕಂಡುಕೊಂಡಿದ್ದ ಮಂಡ್ಯ ಮೂಲದ 48 ವರ್ಷದ ಚಾಲಾಕಿ ಕಳ್ಳನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಸಹಚರರ ನೆರವಿನೊಂದಿಗೆ ಬೋರೇಗೌಡ ಎಂಬ ವ್ಯಕ್ತಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ 32 ಟ್ರಾಕ್ಟರುಗಳನ್ನು ಕದ್ದಿದ್ದಾನೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಸುಂಕದಕಟ್ಟೆಯ ಹೊಯ್ಸಳ ನಗರದಲ್ಲಿ ಟ್ರ್ಯಾಕ್ಟರ್ ಕದ್ದ ನಂತರ ಮಾಲೀಕರು ನೀಡಿದ ದೂರಿನನ್ವಯ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಬೋರೆಗೌಡ ಪೊಲೀಸರ ಬಲೆಗೆ ಬೀಳಲು ನೆರವಾಗಿವೆ.