ದಾಖಲೆ ನಕಲು ಮಾಡಿದ ಆರೋಪ; ಇಬ್ಬರು ಬಿಡಿಎ ಅಧಿಕಾರಿಗಳ ಅಮಾನತು

ದಾಖಲೆಗಳನ್ನು ನಕಲು ಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದಾಖಲೆಗಳನ್ನು ನಕಲು ಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಮೂಲಗಳ ಪ್ರಕಾರ ಬಿಡಿಎದ ಸೈಟ್ ಹಂಚಿಕೆ ವಿಭಾಗದ ಬಿ.ವೆಂಕಟ್ರಮಾನಪ್ಪ ಮತ್ತು ಅಕೌಂಟ್ಸ್ ವಿಭಾಗದ ಹಿರಿಯ ವಿಭಾಗೀಯ ಸಹಾಯಕ ಎಂ.ಮಾರಿ ಗೌಡ ಅವರು ನವೆಂಬರ್ 4 ರಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಮತ್ತು ಈ ಕುರಿತಂತೆ ಪ್ರತ್ಯೇಕ ವಿಚಾರಣೆ  ನಡೆಯುತ್ತಿದೆ ಎಂದು ಬಿಡಿಎ ಆಯುಕ್ತ ಎಚ್.ಆರ್ ಮಹಾದೇವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇಬ್ಬರ ಪೈಕಿ ಬಿ.ವೆಂಕಟ್ರಮಾನಪ್ಪ ಅವರ ಮೇಲೆ ಗಂಭೀರ ಕ್ರಿಮಿನಲ್ ಆರೋಪವಿದ್ದು, ಇದರಿಂದ ಸಂಸ್ಥೆಗೆ ನಷ್ಟ ಉಂಟಾಗಿದೆ.  ಮತ್ತೋರ್ವ ಅಮಾನತುಗೊಂಡ ಅಧಿಕಾರಿ ಎಂ.ಮಾರಿ ಗೌಡ ಅವರು ತಮ್ಮ ವೃತ್ತಿ ಜೀವನದ ಪ್ರಮೋಷನ್ ಪಡೆಯಲು ಪರೀಕ್ಷಾ ದಾಖಲೆಗಳನ್ನು ನಕಲು  ಮಾಡುವ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.  

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವೆಂಕಟ್ರಮಣಪ್ಪ ಅವರ ವಿರುದ್ಧ 9 ಆರೋಪಗಳಿದ್ದು, ಅವರಿಂದ ಬಿಡಿಎಗೆ ಕನಿಷ್ಠ 3 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಿರಿಯ ಬಿಡಿಎ ಅಧಿಕಾರಿಯೊಬ್ಬರ ಪ್ರಕಾರ, ಜುಲೈ 2018 ರಲ್ಲಿ ಜೆಪಿ  ನಗರ 8 ನೇ ಹಂತದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾಗಿರುವ ಸೈಟ್‌ಗಳನ್ನು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಪಡೆಯಲು ವ್ಯವಸ್ಥಾಪಕರಿಗಾಗಿ ಈ ಹಿಂದೆ ಬುಕ್ ಮಾಡಲಾಗಿತ್ತು. ವೆಂಕಟರಮಣಪ್ಪ ಅವರು ತಮ್ಮ ಪತ್ನಿ, ಸಹೋದರರ ಹೆಸರಿನಲ್ಲಿ ಸೈಟ್‌ಗಳನ್ನು  ಖಾತ್ರಿಪಡಿಸಿಕೊಂಡಿದ್ದರು. ಕೇವಲ ತಮ್ಮ ಕುಟುಂಬಸ್ಥರು ಮಾತ್ರವಲ್ಲದೇ ತಮ್ಮ ಸಹೋದರ ಮತ್ತು ಸಹ ಸಹೋದರನ ಕುಟುಂಬಸ್ಥರ ಹೆಸರಿನಲ್ಲೂ ಸೈಟ್ ಅಕ್ರಮವಾಗಿ ಸೈಟ್ ಪಡೆದಿರುವ ಗಂಭೀರ ಆರೋಪವಿದೆ. ಈ ಕುರಿತಂತೆ ಮೊದಲೇ ಬಿಡಿಎ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ  ಅಮಾನತು ಮಾಡಿದ್ದರು. ಆದರೆ ವೆಂಕಟರಮಣಪ್ಪ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಅದನ್ನು ಹಿಂತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.  

ಇತ್ತೀಚೆಗಷ್ಟೇ ಸರ್ ಎಂ ವಿಶ್ವೇಶ್ವರಯ್ಯ ಲೇ ಔಟ್ ಮತ್ತು ಹಾರೋಹಳ್ಳಿಯಲ್ಲಿ ಸೈಟ್ ಪಡೆದ ಪ್ರಕರಣದಲ್ಲಿ ಅಮಾನತಾಗಿದ್ದರು. ಈ ಬಗ್ಗೆ ಮಾತನಾಡಿರುವ ಬಿಡಿಎ ಅಧಿಕಾರಿಯೊಬ್ಬರು , ಏಪ್ರಿಲ್ 2017 ರಲ್ಲಿ ಸೈಟ್ ಅಕ್ರಮವಾಗಿ ಪಡೆದ ಆರೋಪದ ಕುರಿತು ಕಳೆದವಾರ ನಮಗೆ ಮಾಹಿತಿ  ಬಂದಿತ್ತು. ಸೈಟ್ ಹಂಚಿಕೆ ವಿಭಾಗದಲ್ಲಿರುವುದರಿಂದ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. 30x40 ಚದರ ಅಡಿ ಸೈಟ್ ಅನ್ನು ಕೇವಲ ಶೇ. 40% ಮೌಲ್ಯಕ್ಕೆ ಮಾರಾಟ ಮಾಡಿದ್ದರು. ಬಿಡಿಎ ನಿಗದಿತ ಬೆಲೆ ಚದರ ಅಡಿಗೆ `11,840 ರ ಬದಲು, ಅವರು  ಅವುಗಳನ್ನು ಪ್ರತಿ ಚದರ ಅಡಿಗೆ 29,600 ರೂ.ಗೆ ಮಾರಾಟ ಮಾಡಿದ್ದರು ಮತ್ತು ಖರೀದಿದಾರರಿಂದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದರು. ಅಂತೆಯೇ ನಂದಿನಿ ಲೇ ಔಟ್‌ನಲ್ಲಿ (100x80 ಚದರ ಅಡಿ) ಮತ್ತೊಂದು ಸೈಟ್‌ ಅನ್ನು 17 ಲಕ್ಷ ರೂ.ಗೆ ಮಾರಾಟ ಮಾಡಲಾಗಿದ್ದು, ಅದರ  ನಿಜವಾದ ವೆಚ್ಚ 1.5 ಕೋಟಿಯಾಗಿದೆ. ಸೈಟ್ ಗಳ ಮಾರಾಟ ಮಾಡುವ ಸಂಬಂಧ ನಕಲಿ ದಾಖಲೆ ಸೃಷ್ಟಿಸುವ ವೇಳೆ ಆತ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಮತ್ತೋರ್ವ ಅಮಾನತು ಅಧಿಕಾರಿ ಮಾರಿಗೌಡ ಅವರು, ಎರಡನೇ ವಿಭಾಗೀಯ ಸಹಾಯಕರಿಂದ ಪ್ರಥಮ ವಿಭಾಗೀಯ ಸಹಾಯಕರಾಗಿ ಬಡ್ತಿ ಪಡೆಯಲು ಅವರು 2008 ರಲ್ಲಿ ಸಲ್ಲಿಸಿದ ದಾಖಲೆಗಳು ನಕಲಿ ಎಂದು ನಮಗೆ ಸುಳಿವು ಸಿಕ್ಕಿತ್ತು. ಪರೀಕ್ಷೆಯ ದಾಖಲೆಗಳನ್ನು ವೈಟನರ್  ಬಳಸಿ ತಿದ್ದಿ ಬರೆಯಲಾಗಿತ್ತು. ಈ ದಾಖಲೆಗಳನ್ನು ನಾವು ಕೆಪಿಎಸ್‌ಸಿಯೊಂದಿಗೆ ಪರಿಶೀಲಿಸಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com