ಹಸಿರು ಪಟಾಕಿ ಎಂದರೇನು, ನಿಷೇಧ ಪರಿಣಾಮಕಾರಿಯಲ್ಲ: ಹೈಕೋರ್ಟ್ 

ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆಲ್ಲಾ ರೀತಿಯ ಪಟಾಕಿಗಳನ್ನು ಈ ಬಾರಿ ದೀಪಾವಳಿಗೆ ರಾಜ್ಯ ಸರ್ಕಾರ ಮಾರಾಟ ಮತ್ತು ಹಚ್ಚುವುದಕ್ಕೆ ನಿಷೇಧ ಹೇರಿರುವುದು ಪರಿಣಾಮಕಾರಿ ನಿರ್ಧಾರವಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆಲ್ಲಾ ರೀತಿಯ ಪಟಾಕಿಗಳನ್ನು ಈ ಬಾರಿ ದೀಪಾವಳಿಗೆ ರಾಜ್ಯ ಸರ್ಕಾರ ಮಾರಾಟ ಮತ್ತು ಹಚ್ಚುವುದಕ್ಕೆ ನಿಷೇಧ ಹೇರಿರುವುದು ಪರಿಣಾಮಕಾರಿ ನಿರ್ಧಾರವಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀವಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ, ಬೆಂಗಳೂರಿನ ಜಯನಗರ ನಿವಾಸಿ 68 ವರ್ಷದ ಎ ಎಸ್ ವಿಷ್ಣು ಭರತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿ ಇಂದಿಗೆ ತೀರ್ಪನ್ನು ಮುಂದೂಡಿದೆ.

ವಿಷ್ಣು ಭರತ್ ಅವರು ಎಲ್ಲಾ ರೀತಿಯ ಪಟಾಕಿಗಳನ್ನು ನಿಷೇಧಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು, ಅದಕ್ಕೆ ನಿನ್ನೆ ಉತ್ತರಿಸಲು ಸರ್ಕಾರ ಸಮಯ ಕೇಳಿರುವುದರಿಂದ ವಿಚಾರಣೆಯನ್ನು ಹೈಕೋರ್ಟ್ ಇಂದಿಗೆ ಮುಂದೂಡಿದೆ.

ಪಟಾಕಿ ಹಚ್ಚುವುದರಿಂದ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ನವೆಂಬರ್ 6 ಮತ್ತು ನವೆಂಬರ್ 10ರಂದು ಎರಡು ದಿನ ಆದೇಶ ಹೊರಡಿಸಿದ ಸರ್ಕಾರ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆಲ್ಲಾ ಪಟಾಕಿಗಳಿಗೆ ಈ ಬಾರಿ ದೀಪಾವಳಿಗೆ ನಿಷೇಧ ಹೇರಿತು. ಆದರೆ ಅದರಲ್ಲಿ ಹಸಿರು ಪಟಾಕಿಗಳು ಎಂದರೇನು ಎಂದು ನಿಖರವಾಗಿ ಹೇಳಿಲ್ಲ. ಮೇಲ್ನೋಟಕ್ಕೆ ಈ ಆದೇಶ ಪರಿಣಾಮಕಾರಿಯಲ್ಲ ಎಂದು ಕಂಡುಬರುತ್ತಿದೆ ಎಂದು ನಿನ್ನೆಯ ವಿಚಾರಣೆ ವೇಳೆ ನ್ಯಾಯಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com