ದೆಹಲಿಯ ಕರ್ನಾಟಕ ಭವನದ ನಿರ್ವಹಣೆ ಹೊಣೆ ಕೆಎಸ್ ಟಿಡಿಸಿ ಹೆಗಲಿಗೆ

ದೆಹಲಿಯ ಸೌತ್-ಎಕ್ಸ್ ನಲ್ಲಿ ಕರ್ನಾಟಕ ಭವನ -3 ರ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಬುಧವಾರ ವಹಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೆಹಲಿಯ ಸೌತ್-ಎಕ್ಸ್ ನಲ್ಲಿ ಕರ್ನಾಟಕ ಭವನ -3 ರ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಬುಧವಾರ ವಹಿಸಿಕೊಂಡಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ಕುಮಾರಕೃಪಾ ಅತಿಥಿ ಗೃಹವನ್ನು ವಶಕ್ಕೆ ತೆಗೆದುಕೊಂಡಿದೆ. ಸರ್ಕಾರ ಮತ್ತು ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ (ಡಿಪಿಎಆರ್) ಕರ್ನಾಟಕ ಭವನ -3 ಅನ್ನು ಕೆಎಸ್‌ಟಿಡಿಸಿಗೆ ನೀಡಿದೆ, . ಕೆಎಸ್ಟಿಡಿಸಿ ಕರ್ನಾಟಕದ ಹೊರಗೆ ನಿರ್ವಹಿಸುತ್ತಿರುವ ಮೊದಲ ಸರ್ಕಾರಿ ಸ್ವಾಮ್ಯದ ಆಸ್ತಿಯಾಗಿದೆ.

ಹಲವಾರು ಸುತ್ತಿನ ಮಾತುಕತೆಗಳ ನಂತರ ಕುಮಾರ ಕೃಪಾ ಅತಿಥಿ ಗೃಹವನ್ನು ಮುಖ್ಯ ಕಾರ್ಯದರ್ಶಿ ಮತ್ತು ಡಿಪಿಎಆರ್ ಶಿಫಾರಸ್ಸಿನ ಮೇರೆಗೆ ಕೆಎಸ್ ಟಿಡಿಸಿಗೆ ನೀಡಲಾಗಿದೆ.

ವ್ಯಕ್ತಿಯೊಬ್ಬರಿಗೆ ದಿನಕ್ಕೆ 1 ಸಾವಿರ ರು ಚಾರ್ಜ್ ಮಾಡಲಾಗುತ್ತಿದೆ, ಕನ್ನಡಿಗ ಸ್ಪರ್ಷದೊಂದಿಗೆ ಉತ್ತಮ ಆತಿಥ್ಯ ನೀಡಲಾಗುವುದು, ಕೆಎಸ್ ಟಿಡಿಸಿ ಉತ್ತಮ ಸಿಬ್ಬಂದಿಯನ್ನು ನೇಮಿಸಿದೆ. 

ಆದರೆ ಕೆಎಸ್‌ಟಿಡಿಸಿ ತನ್ನ  ಸಹವರ್ತಿಗಳೊಂದಿಗೆ ತಮ್ಮ ಪೋರ್ಟಲ್‌ಗೆ ಲಿಂಕ್ ಮಾಡಲು ಮಾತುಕತೆ ನಡೆಸುತ್ತಿದೆ, ಇದರಿಂದಾಗಿ ಆನ್‌ಲೈನ್ ಬುಕಿಂಗ್  ಸರಾಗಗೊಳಿಸಬಹುದು.

ಕೆಕೆಜಿಹೆಚ್‌ನಲ್ಲಿ 180 ಕೋಣೆಗಳ ಒಂದು ಭಾಗವನ್ನು ಮಾತ್ರ ಪ್ರವಾಸಿಗರಿಗಾಗಿ ತೆರೆಯಲಾಗಿದ್ದು, ಉಳಿದವುಗಳನ್ನು ವಿಐಪಿಗಳು ಮತ್ತು ರಾಜ್ಯ ಅತಿಥಿಗಳಿಗಾಗಿ ಕಾಯ್ದಿರಿಸಲಾಗಿದೆ, ಕರ್ನಾಟಕ ಭವನದಲ್ಲಿ, 37 ಕೊಠಡಿಗಳಲ್ಲಿ ಕೇವಲ ಮೂರು ಕೊಠಡಿಗಳನ್ನು ಇತರ ಉದ್ದೇಶಗಳಿಗಾಗಿ ಕಾಯ್ದಿರಿಸಲಾಗಿದೆ ಮತ್ತು ಉಳಿದವು ಸಾರ್ವಜನಿಕರಿಗೆ ಮುಕ್ತವಾಗಿವೆ ಎಂದು ಕೆಎಸ್ ಡಿಟಿಸಿ ಎಂಡಿ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.

ಕೆಎಸ್‌ಟಿಡಿಸಿ ಡಿಪಿಎಆರ್‌ನೊಂದಿಗೆ ವರ್ಷಪೂರ್ತಿ ಗುತ್ತಿಗೆ ಒಪ್ಪಂದವನ್ನು ಹೊಂದಿದೆ, ಇದರ ಆದಾಯವು ದೆಹಲಿ ಭವನಕ್ಕೆ ಹೋಗುತ್ತದೆ, ಆದರೆ ಕೆಎಸ್‌ಟಿಡಿಸಿ ಮಾಡಿದ ಖರ್ಚುಗಳನ್ನು ಸರ್ಕಾರ ಮರುಪಾವತಿ ಮಾಡಲಿದೆ.

ಕರ್ನಾಟಕ ಭವನ್ -3 ರ ರೆಸ್ಟೋರೆಂಟ್ ಅಲ್ಲಿ ಕರ್ನಾಟಕದ ಅಧಿಕೃತ ಆಹಾರವನ್ನು ನೀಡಲಾಗುವುದು, ದೆಹಲಿಯ ಇತರ ಎರಡು ಕರ್ನಾಟಕ ಭವನಗಳ ಆಡಳಿತವನ್ನು ಡಿಪಿಎಆರ್‌ ನೋಡಿಕೊಳ್ಳಲಿದೆ.. ಅದನ್ನು ಪಡೆಯಲು ಕೆಎಸ್‌ಟಿಡಿಸಿ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ನಿರ್ವಹಣೆ ಮತ್ತು ಆದಾಯವನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com