ಹಸಿರು ಪಟಾಕಿಗಳನ್ನು ಗುರುತಿಸುವುದು ಹೇಗೆ? ಸರ್ಕಾರದ ಆದೇಶ ಹೀಗೆ ಹೇಳುತ್ತದೆ

ದೀಪಾವಳಿಗೆ ಕಡಿಮೆ ಮಾಲಿನ್ಯ ಉಂಟು ಮಾಡುವ ಹಸಿರು ಪಟಾಕಿಗಳನ್ನು ಬಳಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಅವುಗಳನ್ನು ಹೇಗೆ ಗುರುತಿಸುವುದು ಹೇಗೆ  ಎಂಬುದು ಗ್ರಾಹಕರನ್ನು ಕಾಡುತ್ತಿದೆ. 
ಪಟಾಕಿ
ಪಟಾಕಿ

ಬೆಂಗಳೂರು: ದೀಪಾವಳಿಗೆ ಕಡಿಮೆ ಮಾಲಿನ್ಯ ಉಂಟು ಮಾಡುವ ಹಸಿರು ಪಟಾಕಿಗಳನ್ನು ಬಳಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಅವುಗಳನ್ನು ಹೇಗೆ ಗುರುತಿಸುವುದು ಹೇಗೆ  ಎಂಬುದು ಗ್ರಾಹಕರನ್ನು ಕಾಡುತ್ತಿದೆ. 

ಈ ಬಗ್ಗೆ ಅನುಮಾನವಿದ್ದವರು ಪಟಾಕಿ ಪೊಟ್ಟಣಗಳ ಮೇಲಿರುವ ಕ್ಯೂ- ಆರ್  ಕೋಡ್ ವ್ಯವಸ್ಥೆ ಹಾಗೂ  ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ, ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಮತ್ತು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಮೂಲಕ ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹೊರಡಿಸಿರುವ  ಆದೇಶದಲ್ಲಿ ಈ ವಿಷಯ ತಿಳಿಸಲಾಗಿದೆ. ಹಸಿರು ಪಟಾಕಿಗಳಲ್ಲಿ  ಹಾನಿಕಾರಕ ರಾಸಾಯನಿಕಗಳು ಇರುವುದಿಲ್ಲ, ಇದರಿಂದಾಗಿ ವಾಯುಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಅವುಗಳು ಕಡಿಮೆ ಹಾನಿಕಾರಕ ಎನ್ನಲಾಗಿದೆ. 

ಹಸಿರು ಪಟಾಕಿಗಳು ಹೂ ಕುಂಡಗಳು, ಸುರುಸುರು ಬತ್ತಿ ರೀತಿಯಲ್ಲಿ ಲಭ್ಯವಿರುತ್ತವೆ. ನಕಲಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸಲು ಪಟಾಕಿಗಳ ಮೇಲೆ ಕ್ಯೂ ಆರ್ ಕೋಡ್ ವ್ಯವಸ್ಥೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 ಹಸಿರು ಪಟಾಕಿಗಳನ್ನು ಶೆಲ್ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಕಚ್ಚಾ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದ್ದು, ಏಕರೂಪದ ಗುಣಮಟ್ಟದ್ದಾಗಿವೆ. ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ನ್ನು ಹೊರಸೂಸುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com