10 ವರ್ಷದಿಂದ ಪ್ರೀತಿಸಿದ್ದ ಹುಡುಗಿ ಸಿಕ್ಕಿಲ್ಲ, ತಂಗಿ ಮದುವೆಯೂ ರದ್ದು: ಮನನೊಂದ ಯುವಕ ಆತ್ಮಹತ್ಯೆ!

ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೂ ಸಿಕ್ಕಿಲ್ಲ,  ನಿಶ್ಚಯವಾಗಿದ್ದ ತಂಗಿ ಮದುವೆಯೂ ಕಾರಣಾಂತರದಿಂದ ಮುರಿದು ಹೋಯ್ತು ಎಂಬ ಕಾರಣಗಳಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Published: 14th November 2020 02:03 PM  |   Last Updated: 14th November 2020 02:03 PM   |  A+A-


Posted By : Raghavendra Adiga
Source : Online Desk

ಮೈಸೂರು: ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೂ ಸಿಕ್ಕಿಲ್ಲ,  ನಿಶ್ಚಯವಾಗಿದ್ದ ತಂಗಿ ಮದುವೆಯೂ ಕಾರಣಾಂತರದಿಂದ ಮುರಿದು ಹೋಯ್ತು ಎಂಬ ಕಾರಣಗಳಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿಜಯಶ್ರೀಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೆಂಗಳೂರು ಮೂಲದ ಯುವಕ ಚೇತನ್ ಶರ್ಮ(29) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಕಂಪ್ಯೂಟರ್ ಸೈನ್ಸ್ ಶಿಪ್ಲೋಮಾ ಮಾಡಿದ್ದ ಚೇತನ್ ಕಳೆದ ಹತ್ತು ವರ್ಷಗಳಿಂಡ ಯುವತಿಯೊಬ್ಬಳನ್ನು ಪ್ರೀತಿಸಿದ್ದ.  ಆದರೆ ಇತ್ತೀಚೆಗೆ ಅವರ ಪ್ರೀತಿಯಲ್ಲಿ ಬಿರುಕುಂಟಾಗಿ ಯುವತಿ ದೂರವಾಗಿದ್ದಳು.

ಇದಲ್ಲದೆ ಚೇತನ್ ತಂಗಿಗೆ ನಿಶ್ಚಯವಾಗಿದ್ದ ಮದುವೆ ಸಹ ಕಾರಣಾಂತರಗಳಿಂದ ರದ್ದಾಗಿದೆ. ಇದರಿಂದಾಗಿ ಚೇತನ್ ಖಿನ್ನತೆಗೆ ಒಳಗಾಗಿದ್ದ. ಮತ್ತೀಗ ತಾನಿದ್ದ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ  ಶರಣಾಗಿದ್ದಾನೆ.

ಘಟನೆ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp