ಶೀಘ್ರದಲ್ಲೇ ಒಎಫ್'ಸಿ ಕರಡು ನೀತಿ: ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದೊಂದಿಗೆ ಐಟಿ ಮತ್ತು ಬಿಟಿ ಇಲಾಖೆಯು ರಾಜ್ಯದಾದ್ಯಂತ ಇಂಟರ್ನೆಂಟಕ್ ಸಂಪರ್ಕ ಸುಧಾರಿಸುವ ಸಲುವಾಗಿ ಡ್ರಾಫ್ಟ್ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಕರಡು ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ.
ಅಶ್ವತ್ಥ್ ನಾರಾಯಣ್
ಅಶ್ವತ್ಥ್ ನಾರಾಯಣ್

ಬೆಂಗಳೂರು: ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದೊಂದಿಗೆ ಐಟಿ ಮತ್ತು ಬಿಟಿ ಇಲಾಖೆಯು ರಾಜ್ಯದಾದ್ಯಂತ ಇಂಟರ್ನೆಂಟಕ್ ಸಂಪರ್ಕ ಸುಧಾರಿಸುವ ಸಲುವಾಗಿ ಡ್ರಾಫ್ಟ್ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಕರಡು ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ.

ಹೊಸ ನೀತಿಯಡಿಯಲ್ಲಿ, ಸಿಂಗಲ್-ವಿಂಡೋ ವ್ಯವಸ್ಥೆಯನ್ನು ಪರಿಚಯಿಸಲಾಗುವುದು, ಇದು ಸೇವಾ ಪೂರೈಕೆದಾರರಿಗೆ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಉಪ ಮುಖ್ಯಮಂತ್ರಿ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ. 

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ವರ್ಚುಯಲ್ ರೂಪದಲ್ಲಿ ನ.19ರಿಂದನಡೆಯುತ್ತಿರುವ ಬೆಂಗಲೂರು ತಂತ್ರಜ್ಞಾನ ಶೃಂಗಸಭೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗುವ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪಿಸಲು ಯೋಜಿಸುತ್ತಿರುವ ಅರ್ಹ ಐಟಿ ಸಂಸ್ಥೆಗಳಿಗೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ವಿವಿಧ ಪ್ರೋತ್ಸಾಹಗಳನ್ನು ಒದಗಿಸಿ ಉತ್ತೇಜಿಸಲು ಮುಂದಾಗಿದ್ದಾರೆ. ಬಾಡಿಗೆ ವೆಚ್ಚದ ಮರುಪಾವತಿ ಮುದ್ರಾಂಕ ಶುಲ್ಕದಿಂದ ವಿನಾಯಿತಿ, ವಿದ್ಯುಚ್ಛಕ್ತಿ ದರದಲ್ಲಿ ರಿಯಾಯಿತಿ, ಪೇಟೆಂಟ್'ಗಳಿಗೆ ತಗಲಿದೆ ವೆಚ್ಚದ ಮರುಪಾವತಿ, ಮಾರಾಟೋದ್ಯಮ ವೆಚ್ಚದ ಮರುಪಾವತಿ ಸೇರಿದಂತೆ ಹಲವು ಪ್ರೋತ್ಸಾಹಕ ನೀಡುವ ಮಹತ್ವದ ನಿರ್ಧಾರನಗಳನ್ನು ಅಶ್ವತ್ಥ ನಾರಾಯಣ್ ಅವರು ಕೈಗೊಂಡಿದ್ದಾರೆ. 

ಬೆಂಗಳೂರು ಹೊರತು ಇತರೆ ನಗರದಲ್ಲಿ ಸ್ಥಾಪಿಸುವ ಐಟಿ ಹಬ್'ಗಳು, ಕ್ಲಸ್ಟರ್'ಗಳಿಗೆ, ಸ್ಥಿರ ಹೂಡಿಕೆಗಳ ಶೇ.20ರವರೆಗೆ ಮತ್ತು ರೂ.3 ಕೋಟಿಗಳ ಪರಿಮಿತಿಗೊಳಪಟ್ಟು, ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಆರ್ಥಿಕ ಬೆಂಬಲ ಕಲ್ಪಿಸಲಿದೆ. ಐಟಿ ಹಬ್'ಗಳು, ಕ್ಲಸ್ಟರ್'ಗಳು ನೆಲೆಯೂರಿರುವ ಸ್ಥಳದ ಕನಿಷ್ಠ ಶೇ.60ರಷ್ಟಕ್ಕೆ ಅಥವಾ ಐಟಿ ಉದ್ಯಮದಲ್ಲಿ ಕನಿಷ್ಟ 500 ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸಂಸ್ಥೆಗಳಿಗೆ ರಾಜ್ಯ ಮಟ್ಟದ ಸಮಿತಿಗಳಿಂದ ಅನುಮೋದನೆ ಮತ್ತು ಶಿಫಾರಸ್ಸುಗಳಿಗೆ ಒಳಪಟ್ಟು ಆರ್ಥಿಕ ಸಹಾಯವು ಅನ್ವಯವಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com