ದಕ್ಷಿಣ ಕನ್ನಡದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ಆಂಧ್ರ ಪ್ರದೇಶ, ತೆಲಂಗಾಣಕ್ಕೆ ಸಾಗಾಟ: ಆರ್ ಟಿಐಯಲ್ಲಿ ಬಹಿರಂಗ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲು ಕೋರೆ ಕಲ್ಲು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಿಮೆಂಟ್ ತಯಾರಿಕೆ ಕಾರ್ಖಾನೆಗಳಿಗೆ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗಗೊಂಡಿದೆ.
ಗಣಿಗಾರಿಕೆ (ಸಾಂದರ್ಭಿಕ ಚಿತ್ರ)
ಗಣಿಗಾರಿಕೆ (ಸಾಂದರ್ಭಿಕ ಚಿತ್ರ)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲು ಕೋರೆ ಕಲ್ಲು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಿಮೆಂಟ್ ತಯಾರಿಕೆ ಕಾರ್ಖಾನೆಗಳಿಗೆ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗಗೊಂಡಿದೆ.

ಗಣಿಗಾರಿಕೆ ಮತ್ತು ಭೂಗರ್ಭ ಇಲಾಖೆ(ಎಂಜಿಡಿ) ಆರ್ ಟಿಐಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದು, 12 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಗಳಷ್ಟು ಎ ಗ್ರೇಡ್ ಕಲ್ಲುಕೋರೆಯನ್ನು ಸಾಗಾಟ ಮಾಡಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮದಲ್ಲಿ ಸರ್ವೆ ನಂಬರ್ 141/1Aಯಲ್ಲಿ 6.76 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿದೆ. ಇದು ಕಳೆದ ಆಗಸ್ಟ್ 14ರಿಂದ ಸೆಪ್ಟೆಂಬರ್ 30ರ ಮಧ್ಯೆ ನಡೆದಿದ್ದು, ಗಣಿಗಾರಿಕೆಗೆ ಅನುಮತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಡಿದ್ದಾರೆ ಎಂದು ಆರ್ ಟಿಐಯಲ್ಲಿ ತಿಳಿದುಬಂದಿದೆ.

ಈ ಭೂಮಿ ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು 135 ಸೈಟ್ ಗಳನ್ನು ಅಭಿವೃದ್ಧಿಪಡಿಸಿ ಬಡವರಿಗೆ ಹಂಚಿಕೆ ಮಾಡಲು ಕಳೆದ ಮಾರ್ಚ್ ನಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಭೂಮಿಯಲ್ಲಿ ಕಲ್ಲು ಕೋರೆ ಇರುವುದರಿಂದ ಅದಕ್ಕೆ ಭೂಗರ್ಭ ಇಲಾಖೆಯ ಅನುಮತಿ ಅಗತ್ಯವಿರುವುದರಿಂದ ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ ಕೆಲಸಕ್ಕೆ ತಡೆ ತಂದಿತು. ನಂತರ ಮಾಡಿದ ಸಮೀಕ್ಷೆಯಲ್ಲಿ 89 ಸಾವಿರದ 223 ಮೆಟ್ರಿಕ್ ಟನ್ ಎ ಗ್ರೇಡ್ ಜೇಡಿಮಣ್ಣು ಅಲ್ಲಿ ಸಿಗುತ್ತಿದ್ದು, ಒಂದು ವರ್ಷಕ್ಕೆ ಗಣಿಗಾರಿಕೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೀಡಲಾಗಿತ್ತು.

ಗುತ್ತಿಗೆದಾರರು ಕೆಲಸ ಆರಂಭಿಸಿದ್ದರು. ಆದರೆ ಕೆಲ ವಾರಗಳು ಕಳೆದ ನಂತರ ಅಲ್ಲಿ ಚಿನ್ನ ಮತ್ತು ಬಾಕ್ಸೈಟ್ ಅದಿರು ಇದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂಗರ್ಭ ಇಲಾಖೆ ಅನುಮತಿಯನ್ನು ಹಿಂಪಡೆಯಿತು. 

ಅಧಿಕಾರಿಗಳು ಇನ್ನೂ ಮೌಲ್ಯವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದ್ದ ಕಾರಣ ಪಂಚಾಯತ್ ಮಿತಿಯ ಹೊರಗೆ ಮಣ್ಣನ್ನು ಸಾಗಿಸಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿಲ್ಲ. ಪಿಡಿಒ ಪರವಾನಗಿಯನ್ನು ಕಲ್ಲನ್ನು ಸಿಮೆಂಟ್ ಕೈಗಾರಿಕೆಗಳಿಗೆ ಮಾರಾಟ ಮಾಡಲು ದುರುಪಯೋಗಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಆಘಾತ ವ್ಯಕ್ತಪಡಿಸಿದ್ದಾರೆ. “ಅಷ್ಟೇ ಅಲ್ಲ, ಇಲ್ಲಿಯವರೆಗೆ 3,000 ಟನ್ ಕಲ್ಲುಕೋರೆ ಮಾತ್ರ ಹೊರತೆಗೆಯಲು ಅವಕಾಶವಿತ್ತು.ಆದರೆ ಅಲ್ಲಿಂದ 12,000 ಮೆಟ್ರಿಕ್ ಟನ್ ಕಲ್ಲುಕೋರೆಯನ್ನು ತೆಗೆದು ಸಾಗಿಸಲಾಗಿದೆ ಎಂದಿದ್ದಾರೆ. 

ಇಲ್ಲಿ ಪಿಡಿಒ ಅವರ ಹೆಸರಿನಲ್ಲಿ ನೀಡಲಾಗಿದ್ದ ಅನುಮತಿಯನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾಂಗ್ರೆಸ್ ನಾಯಕ ಬಿ ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ಪತ್ನಿ ಉಷಾ ಆರ್ ನಾಯಕ್ ತೆಂಕ ಯಡಪದವಿನಲ್ಲಿ ಕಲ್ಲುಕೋರೆ ತೆಗೆಯುವ ಅನುಮತಿ ಪಡೆದು ಅಕ್ರಮ ಗಣಿಗಾರಿಕೆ ನಡೆಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. 

ಶಾಸಕ ರಾಜೇಶ್ ನಾಯಕ್ ಆರೋಪವನ್ನು ತಳ್ಳಿಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com