ಕೊರೋನಾ ಮರೆತು ದೀಪಾವಳಿ ಸಂಭ್ರಮ: ಮಾಸ್ಕ್, ಸಾಮಾಜಿಕ ಅಂತರ ಮರೆತು, ಮಾರುಕಟ್ಟೆಗಳಲ್ಲಿ ಖರೀದಿಯಲ್ಲಿ ಮುಳುಗಿದ ಜನತೆ!

ರಾಜ್ಯದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಗರಿಗೆದರಿದ್ದು, ಕೊರೋನಾ ಭೀತಿಯನ್ನೂ ಲೆಕ್ಕಿಸದೆ ಜನರು ಸಂತೆ, ಮಾರುಕಟ್ಟೆಗಳಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. 
ಮಾರುಕಟ್ಟೆಯಲ್ಲಿ ಜನಜಂಗುಳಿ
ಮಾರುಕಟ್ಟೆಯಲ್ಲಿ ಜನಜಂಗುಳಿ

ಬೆಂಗಳೂರು: ರಾಜ್ಯದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಗರಿಗೆದರಿದ್ದು, ಕೊರೋನಾ ಭೀತಿಯನ್ನೂ ಲೆಕ್ಕಿಸದೆ ಜನರು ಸಂತೆ, ಮಾರುಕಟ್ಟೆಗಳಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. 

ಯುಗಾದಿ, ನಾಗರ ಪಂಚಮಿ, ಗಣೇಶ ಚತುರ್ಥಿ, ದಸರಾ ಹಬ್ಬವನ್ನು ಅಷ್ಟೊಂದು ಅದ್ದೂರಿಯಾಗಿ ಆಚರಿಸದ ಜನತೆಗೆ ಇದೀಗ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಖರೀದಿಗೆ ಮುಂದಾಗಿದ್ದಾರೆ. 

ಶನಿವಾರ ರಾಜ್ಯ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಗದಗ, ಕಾರವಾರ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಕಲಬುರಗಿ, ಮಂಗಳೂರು, ಉಡುಪಿ, ಮಡಿಕೇರಿ, ಮೈಸೂರು ಸೇರಿದಂತೆ ಹೆಚ್ಚಿನ ನಗರ, ಪಟ್ಟಣಗಳಲ್ಲಿ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಜನರು ಕೋವಿಡ್ ನಿಯಮಗಳನ್ನು ಮರೆತು ಮಾಸ್ಕ್ ಕೂಡ ಧರಿಸದೆಯೇ, ಸಮಾಜಿಕ ಅಂತರ ಕಾಯ್ದುಕೊಳ್ಳದೇ ಖರೀದಿಗೆ ಮುಗಿಬಿದ್ದಿದ್ದರು. ಅದರಲ್ಲೂ ಹೂವು, ಹಣ್ಣು, ವಿದ್ಯುತ್ ದೀಪಗಳು, ಆಕಾಶಬುಟ್ಟಿ, ಸಿಹಿ ತಂಡಿ, ಹಣತೆ, ಹೊಸ ಬಟ್ಟೆಗಳ ಖರೀದಿಯಲ್ಲಿ ಜನ ಮೈಮರೆತಿದ್ದರು. ಎಲ್ಲೆಡೆ ಮಾರುಕಟ್ಟೆಯದಲ್ಲಿ ಜನಜಂಗುಳಿ ಕಂಡು ಬರುತ್ತಿತ್ತು. 

ಇದೇ ವೇಳೆ ಸರ್ಕಾರ ಹಸಿರು ಪಟಾಕಿಗಳಿಗಷ್ಟೇ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪಟಾಕಿ ವ್ಯಾಪಾರ ವಹಿವಾಟು ರಾಜ್ಯ ಹಲವು ಕಡೆ ತೀವ್ರ ಕುಸಿದ ಕಂಡಿದ್ದು, ಲಕ್ಷಾಂತರ ಬಂಡವಾಳ ಹೂಡಿ ಮಾರಾಟಕ್ಕಿಳಿಯುವವರು ಇದೀಗ ನಷ್ಟದ ಹಾದಿ ಹಿಡಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com