ರೈತರಿಗೊಂದು ದಿನ ಕಾರ್ಯಕ್ರಮ ಮುಂದುವರೆಯಲಿದೆ: ಬಿ.ಸಿ. ಪಾಟೀಲ್

ರೈತರ ಮನೆ ಬಾಗಿಲಿಗೆ ಸರ್ಕಾರ ತರುವ ಉದ್ದೇಶದಿಂದ ಈ ರೈತರೊಂದಿಗೊಂದು ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್
ಕೃಷಿ ಸಚಿವ ಬಿ.ಸಿ.ಪಾಟೀಲ್

ಮಂಡ್ಯ: ರೈತರ ಮನೆ ಬಾಗಿಲಿಗೆ ಸರ್ಕಾರ ತರುವ ಉದ್ದೇಶದಿಂದ ಈ ರೈತರೊಂದಿಗೊಂದು ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕೆ.ಆರ್.ಪೇಟೆ ಮಡುವಿನಕೋಡಿ ಗ್ರಾಮದಲ್ಲಿ ರೈತರೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವರು, ಈ ಕಾರ್ಯಕ್ರಮ ಇಲ್ಲಿಗೆ ನಿಲ್ಲುವುದಿಲ್ಲ. ಇದು ನಿರಂತರವಾಗಿರಲಿದೆ ಎಂದರು.

ರೈತರಿಗೆ ಸಮಸ್ಯೆಯನ್ನು ಅರಿತು ಪರಿಹರಿಸುವ ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬಲು ಇನ್ನು ಪ್ರತಿ ಜಿಲ್ಲೆಯಲ್ಲೂ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮಾದರಿ ರೈತರನ್ನು ಭೇಟಿ ಮಾಡಿ ಅವರ ಅನುಭವ ಬೇರೆ ರೈತರಿಗೆ ಒದಗಿಸುವ ಉದ್ದೇಶದಿಂದ ಇದಕ್ಕೆ ದಿಂಗಳಿನಲ್ಲಿ 3 ದಿನ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ. 

ರೈತರು ಸಾವಯವ, ಸಮಗ್ರ ಕೃಷಿ ಅಳವಡಿಸಿಕೊಂಡಾಗ ಆದಾಯ ದ್ವಿಗುಣವಾಗಲು ಸಾಧ್ಯ. ಸಮಗ್ರ ಕೃಷಿಯಲ್ಲಿ ಹತ್ತು ಹಲವು ಬೆಳೆ ಬೆಳೆಯುವುದರಿಂದ ಒಂದರಲ್ಲಿ ನಷ್ಟವಾದರೂ ಉಳಿದ ಬೆಳೆಗಳಿಂದ ಆದಾಯ ಗಳಿಸಬಹುದು. ಬರಡು ಪ್ರದೇಶವಿರುವ ಕೋಲಾರದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ. ಮಂಡ್ಯ ರೈತರೂ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಎದೆತಟ್ಟಿ ಹೇಳುವಂತಾಗಬೇಕೆಂದು ಸಚಿವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com