ಉದ್ಯೋಗವಿಲ್ಲದ ಯುವಕರನ್ನು ಅಪರಾಧದತ್ತ ತಳ್ಳಿದ ಕೋವಿಡ್-19 ಸಾಂಕ್ರಾಮಿಕ!

ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆ ಕುಸಿದಿದ್ದು, ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಂಡಿದೆ. ವ್ಯವಹಾರಗಳು ಮುಚ್ಚಿದ್ದು, ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಅನೇಕರ ಜೀವನ ಮಾಡುವ ಹಕ್ಕನ್ನು ನಿರಾಕರಿಸಿದ್ದು, ಅವರು ಹಿಂಸೆ, ಅಪರಾಧದತ್ತ ಇಳಿಯುತ್ತಿದ್ದಾರೆ

Published: 15th November 2020 01:16 PM  |   Last Updated: 15th November 2020 01:18 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಮನುಷ್ಯನಿಗೆ ಜೀವನ ನಡೆಸುವ ಹಕ್ಕನ್ನು ನಿರಾಕರಿಸಿದಾಗ, ಆತ ಕಾನೂನು ಬಾಹಿರ ಕೃತ್ಯಗಳನ್ನು ಆಯ್ಕೆ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸಾನ್ ಮಂಡೇಲಾ ಹೇಳಿದಂತೆ, ಕೋವಿಡ್-19 ಸಾಂಕ್ರಾಮಿಕ ರೋಗವು ಉದ್ಯೋಗವಿಲ್ಲದ ಯುವಕರನ್ನು ಅಪರಾಧದತ್ತ ಹೊರಳುವಂತೆ ಮಾಡಿದೆ.

ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆ ಕುಸಿದಿದ್ದು, ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಂಡಿದೆ. ವ್ಯವಹಾರಗಳು ಮುಚ್ಚಿದ್ದು, ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಅನೇಕರ ಜೀವನ ಮಾಡುವ ಹಕ್ಕನ್ನು ನಿರಾಕರಿಸಿದ್ದು, ಅವರು ಹಿಂಸೆ, ಅಪರಾಧದತ್ತ ಇಳಿಯುತ್ತಿದ್ದಾರೆ. ಬೆಂಗಳೂರಿನ ಹೋಟೆಲ್ ವೊಂದರಲ್ಲಿ ರಿಸೆಫನಿಸ್ಟ್ ಆಗಿದ್ದ ಅಮೀರ್ ಅಹ್ಮದ್ ಎಂಬ 28 ವರ್ಷದ ಯುವಕ ಸೂಕ್ತ ಸಂಬಳ ಪಡೆದು ಜೀವನ ಸಾಗಿಸುತ್ತಿದ್ದ. ಆದರೆ, ಕೋವಿಡ್ ಎಲ್ಲವನ್ನೂ ಬದಲಾವಣೆ ಮಾಡಿಬಿಟ್ಟಿತು. ಆತ ಉದ್ಯೋಗ ಕಳೆದುಕೊಂಡು, ಪಿಣ್ಯ ಕಾರ್ಖಾನೆ ಬಳಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಅಹ್ಮದ್ ರೀತಿ ಕೆಲಸ ಕಳೆದುಕೊಂಡ ಸಮೀರ್ ಕುಮಾರ್, ಹತಾಸೆಯಿಂದ ಮಹಿಳಾ ಫ್ಯಾಶನ್ ಸ್ಟೋರ್ ವೊಂದರ ಮಹಿಳಾ ಮ್ಯಾನೇಜರ್ ಫೋಟೋ ಬಳಸಿ, ತಮ್ಮ ತಾಯಿ ಚಿಕಿತ್ಸೆಗಾಗಿ ಹಣ ಬೇಕಾಗಿದ್ದು, ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಎಂದು ಸಹೋದ್ಯೋಗಿಗಳಿಗೆ ಸಂದೇಶ ಕಳುಹಿಸಿದ್ದಾನೆ. ಈ ವಿಚಾರ ತಿಳಿದು ಆ ಮಹಿಳೆ ಸಿಇಎನ್ ಪೊಲೀಸರಿಗೆ ದೂರು ನೀಡಿದ ನಂತರ ಆತನನ್ನು ಬಂಧಿಸಲಾಗಿದೆ. 

ಮತ್ತೊಂದು ಘಟನೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಿರಾಕರಿಸಿದಾಗ ಹತಾಶೆಗೊಂಡ ದಿನಗೂಲಿ ಕಾರ್ಮಿಕರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಹಿರಿಯ ಮಹಿಳೆಯರ ಚಿನ್ನಾಭರಣ ಕದಿಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಅವರನ್ನು ಬಂಧಿಸಿದಾಗ ಉದ್ಯೋಗವಿಲ್ಲದೆ ಇಂತಹ ಕೃತ್ಯ ನಡೆಸುತ್ತಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದರು.

ಕೆಲವೊಂದು ಸಂದರ್ಭಗಳು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದವರನ್ನು ಕೂಡಾ ಸರಗಳ್ಳತನ ಮತ್ತಿತರ ಕೃತ್ಯಗಳಿಗೆ ತಳಲ್ಪಡುತ್ತವೆ, ಆರ್ಥಿಕತೆ ಸುಧಾರಿಸಿದಾಗ ಮಾತ್ರ ಇಂತಹ ಘಟನೆಗಳು ನಿಲ್ಲಲಿವೆ  ಎಂದು ನಿವೃತ್ತ ಎಸಿಪಿ ಬಿಬಿ ಅಶೋಕ್ ಕುಮಾರ್ ಹೇಳಿದರೆ, ಅನೇಕರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಂತೆ, ಅವರು ಅಪರಾಧ ಮಾಡಲು ಪ್ರಾರಂಭಿಸುತ್ತಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ಹೇಳುತ್ತಾರೆ.

ಲಾಕ್ ಡೌನ್ ಮತ್ತು ಅನ್ ಲಾಕ್ ಅವಧಿಯಲ್ಲಿ ಕೌಟುಂಬಿಕ ಹಿಂಸೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದಾಗಿ ಮಂಗಳೂರಿನ ಪ್ರಜ್ಞಾ ಸಮಾಲೋಚನಾ ಕೇಂದ್ರದ ಪ್ರೊಫೆಸರ್ ಹಿಲ್ಡಾ ರಾಯಪ್ಪನ್ ಹೇಳಿದ್ದಾರೆ. ಜನವರಿಂದ ಅಕ್ಟೋಬರ್ ತಿಂಗಳವರೆಗೂ 150 ಕೌಟುಂಬಿಕ ವಿವಾದಗಳು ಮಂಗಳೂರು ಸಾಂತ್ವನ ಕೇಂದ್ರದಲ್ಲಿ ದಾಖಲಾಗಿವೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ  ಮಕ್ಕಳು ಮನೆಯಲ್ಲಿಯೇ ಇದ್ದಾಗ, ಅವರ ಮದ್ಯವ್ಯಸನಿ ತಂದೆಯಿಂದ ಹೊಡೆದ ಉದಾಹರಣೆಗಳು ವರದಿಯಾಗಿವೆ ಎಂದು ಉಡುಪಿಯ ಹೆಸರಾಂತ ಮನೋಶಾಸ್ತ್ರಜ್ಞ ಡಾ. ಪಿ. ವಿ. ಬಂಡಾರಿ ತಿಳಿಸಿದ್ದಾರೆ.

ಏಪ್ರಿಲ್ -ಸೆಪ್ಟೆಂಬರ್ ನಡುವೆ ಮೈಸೂರು ನಗರ ಪೊಲೀಸರು 14 ಹತ್ಯೆ ಪ್ರಕರಣಗಳನ್ನು ದಾಖಲಿಸಿದ್ದರೆ, ಮೈಸೂರು ಜಿಲ್ಲಾ ಪೊಲೀಸರು 15 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಅವಧಿಯಲ್ಲಿ 110 ಕಳ್ಳತನ ಪ್ರಕರಣ, 15 ಸರಗಳ್ಳತನ ಪ್ರಕರಣಗಳು ನಗರದ ವ್ಯಾಪ್ತಿಯಲ್ಲಿ ದಾಖಲಾಗಿವೆ. 

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp