ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ನಡೆಸಿದ್ದ ಮೂವರ ಸೆರೆ

ನಕಲಿ ಭೂ ದಾಖಲೆಗಳೊಂದಿಗೆ ಭೂಮಿಯನ್ನು ಮಾರಾಟ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಮೂವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ನಡೆಸಿದ್ದ ಮೂವರ ಸೆರೆ

ಬೆಂಗಳೂರು: ನಕಲಿ ಭೂ ದಾಖಲೆಗಳೊಂದಿಗೆ ಭೂಮಿಯನ್ನು ಮಾರಾಟ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಮೂವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ದೇವನಹಳ್ಳಿಯ ನಿವಾಸಿಗಳಾದ ಬಸವರಾಜು, ಪ್ರಸನ್ನ ಕುಮಾರ್ ಮತ್ತು ಉಮೇಶ್ ಎಂದು ಗುರುತಿಸಲಾಗಿದೆ. 

ಆರೋಪಿಗಳು ದೇವನಹಳ್ಳಿ, ದೊಡ್ಡಬಳ್ಳಾಪುರ, ಯಲಹಂಕ  ಸುತ್ತಮುತ್ತಲಿನ 138 ಎಕರೆ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದ್ದರು.

ಇತ್ತೀಚಿಗೆ ರೈತನೊಬ್ಬ ಪೋಲೀಸರ ಬಳಿ ಬಂದು ತನ್ನ ಭೂದಾಖಲೆಗಳ ನಕಲಿ ಪ್ರತಿ ಮಾಡಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ದೂರಿನ ಹಿನ್ನೆಲೆ ಇಂತಹಾ  ನಕಲಿ ದಾಖಲೆಗಳನ್ನು ತಯಾರಿಸಿ ಜಮೀನನ್ನು ಕಸಿದುಕೊಳ್ಳಲು ಸಂಚು ರೂಪಿಸಿದ್ದ ಆರೋಪಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿದ್ದ ಪೋಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com