ಆನ್‌ ಲೈನ್ ಗೇಮಿಂಗ್ ನಿಷೇಧಕ್ಕೆ ದಿನೇಶ್ ಗುಂಡೂರಾವ್ ಒತ್ತಾಯ

ರಮ್ಮಿ, ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹಾಗಾಗಿ ಇಂತಹ ಗೇಮ್‌ಗಳ ಮೇಲೆ ಕಡಿವಾಣ ಬೀಳಬೇಕು.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ರಮ್ಮಿ, ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹಾಗಾಗಿ ಇಂತಹ ಗೇಮ್‌ಗಳ ಮೇಲೆ ಕಡಿವಾಣ ಬೀಳಬೇಕು ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ತಾವು ಕೂಡ ಹಲವು ಯುವಕರು ಈ ಆನ್‌ಲೈನ್ ಜೂಜಿನಲ್ಲಿ ವ್ಯಸ್ತರಾಗಿರುವುದನ್ನು‌ ಗಮನಿಸಿದ್ದೇನೆ. ಎಷ್ಟೋ ಕುಟುಂಬಗಳು ಇದರಿಂದ ನಾಶವಾಗಿ ಹೋಗಿದೆ ಆನ್ ಲೈಟ್ ನ್ ಆಟ 'ಕೌಶಲ್ಯದ ಆಟ-ಅದೃಷ್ಟದ ಆಟವಲ್ಲ' ಎಂಬ ಆಧಾರದ ಮೇಲೆ ಕಾನೂನಿನ ಮಾನ್ಯತೆ ಪಡೆದುಕೊಂಡಿದೆ.

ನಾನು ಈ ವಾದ ಒಪ್ಪುವುದಿಲ್ಲ. ತಮ್ಮ ಪ್ರಕಾರ ಹಣವನ್ನು ಬಾಜಿ ಕಟ್ಟಿ ಆಡುವುದು ಕೂಡು ಜೂಜು ಎಂಬುದು ನಿರ್ವಿವಾದ. ಇಂತಹ ಜೂಜಿಗೆ ವಿಶೇಷವಾಗಿ ಯುವಕರು ಆಕರ್ಷಿತರಾಗಿರುವುದು ದುರಂತ. ಸರ್ಕಾರ ಈ ಮನೆಹಾಳು ಗೇಮಿಂಗ್‌ಗಳ ಮೇಲೆ ನಿಷೇಧ ಹೇರಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com