'ಕೃಷಿ ತಜ್ಞರೇ ಕೃಷಿಗೆ ವೈದ್ಯರಾಗಬೇಕು: ಬಿ.ಸಿ.ಪಾಟೀಲ್

ಕೃಷಿ ತಜ್ಞರೇ ಕೃಷಿಗೆ ವೈದ್ಯರಾಗಬೇಕು. ಕೃಷಿ ವಿಜ್ಞಾನಿಗಳು ಕೃಷಿ ಪ್ರೊಫೆಸರ್ ಗಳು ವಿಶ್ವವಿದ್ಯಾಲಯದ ಕಾಂಪೌಂಡ್ ಬಿಟ್ಟು ಹೊರಬರಬೇಕು. ತಮ್ಮ ಜ್ಞಾನವನ್ನು ಸಮಗ್ರವಾಗಿ ರೈತರಿಗೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್

ಬೆಂಗಳೂರು: ಕೃಷಿ ತಜ್ಞರೇ ಕೃಷಿಗೆ ವೈದ್ಯರಾಗಬೇಕು. ಕೃಷಿ ವಿಜ್ಞಾನಿಗಳು ಕೃಷಿ ಪ್ರೊಫೆಸರ್ ಗಳು ವಿಶ್ವವಿದ್ಯಾಲಯದ ಕಾಂಪೌಂಡ್ ಬಿಟ್ಟು ಹೊರಬರಬೇಕು. ತಮ್ಮ ಜ್ಞಾನವನ್ನು ಸಮಗ್ರವಾಗಿ ರೈತರಿಗೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ(ಜಿಕೆವಿಕೆ) 55ನೇ‌ ಸಂಸ್ಥಾಪನಾ‌ ದಿನಾಚರಣೆ ವೇದಿಕೆ ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.

ಕೃಷಿ ವಿಶ್ವವಿದ್ಯಾಲಯಗಳು ಆದಷ್ಟು ಗುಣಮಟ್ಟದ ತಳಿಗಳನ್ನು ಹೊರತರಬೇಕು. ತಮ್ಮ ತಳಿಗಳನ್ನು ಪ್ರಚಾರ ಮಾಡಿ ರೈತರನ್ನು ತಲುಪಬೇಕು. ರೈತರು ಕೃಷಿ ಸಮಸ್ಯೆ ಬಂದಾಗ ಔಷಧಿ ಅಂಗಡಿ ಗೊಬ್ಬರದಂಗಡಿಗೆ ಕೃಷಿ ಸಮಸ್ಯೆಗೆ ಹೋಗುವುದು ಹೆಚ್ಚಾಗಿದೆ. ಆದರೆ ಇದು ತಪ್ಪಬೇಕು. ರೈತ ಕೃಷಿ ಸಮಸ್ಯೆಗೆ ಕೃಷಿ ವಿಶ್ವವಿದ್ಯಾಲಯಗಳಿಗೆ ಪ್ರೊಫೆಸರ್‌ಗಳಿಗೆ ಕೃಷಿ ವಿಜ್ಞಾನಿಗಳನ್ನು ಭೇಟಿ ಮಾಡುವಂತಾಗಬೇಕು ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com