ಸಂಪತ್ ರಾಜ್ ಬಂಧನದ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ: ಅಖಂಡ ಶ್ರೀನಿವಾಸ ಮೂರ್ತಿ

ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆಯಾಗಬೇಕು. ಸಂಪತ್ ರಾಜ್'ರನ್ನು ಬಂಧನಕ್ಕೊಳಪಡಿಸುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ. 
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಬೆಂಗಳೂರು: ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆಯಾಗಬೇಕು. ಸಂಪತ್ ರಾಜ್'ರನ್ನು ಬಂಧನಕ್ಕೊಳಪಡಿಸುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ. 

ಗಲಭೆ ಪ್ರಕರಣ ಸಂಬಂಧ ಇಷ್ಟು ದಿನ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಮಂಗಳವಾರ ಬಂಧನಕ್ಕೊಳಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಖಂಡ ಶ್ರೀನಿವಾಸ ಮೂರ್ತಿಯವರು, ಕೊನೆಗೂ ಸಂಪತ್ ರಾಜ್ ಬಂಧನವಾಗಿದೆ. ತಮಗೆ ಪೊಲೀಸ್, ಮಾಧ್ಯಮದವರಿಂದ ನ್ಯಾಯ ಸಿಕ್ಕಿದೆ. ಮನೆ ಸುಟ್ಟಾಗಿನಿಂದಲೂ ಮಾಧ್ಯಮಗಳು ಬೆಳಕು ಚೆಲ್ಲಿದ್ದವು‌. ಆದರೆ ಸಂಪತ್ ರಾತ್ರೋರಾತ್ರಿ ಓಡಿಹೋಗಲು ಕಾರಣವೇನು?. ನ್ಯಾಯಾಲಯದ ಆದೇಶದಿಂದ ಇವತ್ತು ಬಂಧನವಾಗಿದೆ ಎಂದರು.

ತಮ್ಮಿಂದ ಏನಾದರೂ ತಪ್ಪಾಗಿದೆಯೇ?. ತಪ್ಪಾಗಿದ್ದರೆ ಸಂಪತ್ ರಾಜ್ ತಮ್ಮನ್ನೇ ಕೇಳಬಹುದಿತ್ತು, ಆದರೆ ಮನೆ, ವಾಹನಗಳನ್ನ ಸುಟ್ಟು ಹಾಕಿದ್ದಾದರೂ ಯಾಕೆ? ನಮ್ಮ ಸಮುದಾಯದ ಶ್ರೀಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈಗ ಸರ್ಕಾರ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದೆ. ಶಾಸಕರಿಗೆ ಹೀಗಾದರೆ ಸಾಮಾನ್ಯರ ಕಥೆಯೇನು?ಯಾರೇ ಆಗಲಿ ಅವರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ಕೆಪಿಸಿಸಿ ಅಧ್ಯಕ್ಷರು ಈಗಲಾದರೂ ನಮ್ಮ ಪರ ನಿಲ್ಲಲಿ. ನನ್ನ ಪರ ಯಾಕೆ ನಿಂದಿಲ್ಲವೆಂದು ಡಿಕೆ. ಶಿವಕುಮಾರ್ ಅವರಿಗೆ ಕೇಳಲು ಇಚ್ಛಿಸುತ್ತೇನೆ. ಸಂಪತ್ ರಾಜ್ ಆಸ್ಪತ್ರೆಯಿಂದ ಏಕೆ ಓಡಿ ಹೋಗಬೇಕಿತ್ತು. ಅವರು ತಪ್ಪು ಮಾಡಿದ್ದರಿಂದಲೇ ಓಡಿ ಹೋಗಿದ್ದಾರೆ. ನಾನು ಯಾವುದೇ ದ್ವೇಷದ ರಾಜಕಾರಣವನ್ನು ಮಾಡಿಲ್ಲ. ಈ ಹಿಂದೆಯೂ ಮಾಡಿಲ್ಲ. ಇನ್ನು ಮುಂದೆಯೂ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

ಸಂಪತ್ ರಾಜ್ ಅವರು ನನ್ನ ಜೊತೆಗೆ ಚೆನ್ನಾಗಿಯೇ ಇದ್ದರು. ನನ್ನ ಜೊತೆಗಿದ್ದು ಇಂತಹ ಕೆಲಸ ಮಾಡುತ್ತಾರೆಂದು ಗೊತ್ತಿರಲಿಲ್ಲ. ಘಟನೆಯ ಬಳಿಕ ಸಂಪರ್ ರಾಜ್ ರನ್ನು ಭೇಟಿಯಾಗಿಲ್ಲ. ಕಾಂಗ್ರೆಸ್ ಕೂಡ ನಮ್ಮನ್ನು ಕರೆಸಿ ಮಾತನಾಡಿಲ್ಲ. ಇನ್ನು ನನಗೆ ನ್ಯಾಯ ಕೊಡಿಸುವುದಾಗಿ ಮಾತ್ರ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ನನಗೆ ಕಾಂಗ್ರೆಸ್ ಪಕ್ಷ ರಕ್ಷಣೆಗೆ ನಿಂತಿದೆ. ಘಟನೆಯ ಬಗ್ಗೆ ಹೈಕಮಾಂಡ್ ಗಮನಕ್ಕೂ ತರುತ್ತೇನೆ. ಮನೆಗೆ ಬೆಂಕಿ ಹಚ್ಚಿದ್ದರಿಂದ ಎಲ್ಲೋ ಹೊರಗಿರುವಂತಾಗಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಕಾನೂನು ಪ್ರಕಾರ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು. ನನಗೆ ಸಿದ್ದರಾಮಯ್ಯ. ಜಮೀರ್ ಧೈರ್ಯ ತುಂಬುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com