ವಾರಣಾಸಿಯ 'ಗಂಗಾ ಆರತಿಯಂತೆ' ಹಂಪಿಯಲ್ಲಿ ಪ್ರತಿ ಹುಣ್ಣಿಮೆಯಂದು 'ತುಂಗಾ ಆರತಿ'

ವಾರಣಾಸಿಯಲ್ಲಿ ನಡೆಯುವ ಗಂಗಾರತಿಂತೆ ‘ಇನ್ನೂ ಮುಂದೆ ಪ್ರತಿ ಹುಣ್ಣಿಮೆಯಂದು ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಬಳ್ಳಾರಿ ಜಿಲ್ಲಾಡಳಿತ ನಿರ್ಧರಿಸಿದೆ.
ಹಂಪಿಯ ತುಂಗಾ ಆರತಿ
ಹಂಪಿಯ ತುಂಗಾ ಆರತಿ

ಬಳ್ಳಾರಿ: ವಾರಣಾಸಿಯಲ್ಲಿ ನಡೆಯುವ ಗಂಗಾರತಿಂತೆ ‘ಇನ್ನೂ ಮುಂದೆ ಪ್ರತಿ ಹುಣ್ಣಿಮೆಯಂದು ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಬಳ್ಳಾರಿ ಜಿಲ್ಲಾಡಳಿತ ನಿರ್ಧರಿಸಿದೆ.

‘ಹುಣ್ಣಿಮೆ ದಿನ ತುಂಗಾಭದ್ರಾ ಆರತಿಗೆ‌ ಆಗಮಿಸುವ ಜನರಿಗಾಗಿ ಬೆಳಕಿನ ವ್ಯವಸ್ಥೆ, ಕುಳಿತುಕೊಳ್ಳುವುದಕ್ಕೆ ಆಸನ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗುವುದು.  ಎಲ್ಲಿಯವರೆಗೆ ಸೂರ್ಯಚಂದ್ರರು ಇರುತ್ತಾರೋ ಅಲ್ಲಿಯವರೆಗೆ ಹಂಪಿ ಉತ್ಸವ ನಡೆಯುತ್ತದೆ. ತುಂಗಾಭದ್ರಾ ಆರತಿಯೂ ನಡೆಸಲು ತೀರ್ಮಾನಿಸಲಾಗಿದೆ.

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿ ದಂಡೆಯಲ್ಲಿ ಶುಕ್ರವಾರ ಸಂಜೆ ನಡೆದ ತುಂಗಾ ಆರತಿ ಮಹೋತ್ಸವ ನಡೆಯಿತು.

ಈ ಮೊದಲು ಕೇವಲ ಹಂಪಿ ಉತ್ಸವದಂದು ಮಾತ್ರ ತುಂಗಾ ಆರತಿ ನಡೆಸಲಾಗುತ್ತಿತ್ತು, ಇನ್ನು ಮುಂದೆ ಪ್ರತಿ ಹುಣ್ಣಿಮೆಂದು  ನಡೆಸಲಿದ್ದು, ಸುಮಾರು 2000 ಜನ ಸಂಜೆ ಆರತಿಯಲ್ಲಿ ಪಾಲ್ಗೋಳ್ಳಲು  ವ್ಯವಸ್ಥೆ ಮಾಡಲಾಗುವುದು, ಇದು ಗಂಗಾರತಿಯ ರೀತಿಯೇ ಇರಲಿದೆ, ಇದಕ್ಕೆ ಅಗತ್ಯವಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ತಿಂಗಳು ತುಂಗಾ ಆರತಿ ನಡೆಸುವುದು ನಮ್ಮ  ಹಲವು ದಿನಗಳ ಬೇಡಿಕೆಯಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ನಾಗರಾಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com