ಸಂಪತ್ ರಾಜ್ ಎಲ್ಲೂ ಓಡಿ ಹೋಗಿರಲಿಲ್ಲ: ಡಿಕೆ ಶಿವಕುಮಾರ್

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ  ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ  ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ ಎಂದಿದ್ದಾರೆ.

"ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನನ್ನು ಸಹ ಟಾರ್ಗೆಟ್ ಮಾಡಿದ್ದರು, ಈಗ ಸಂಪತ್ ರಾಜ್ ಅವರನ್ನ ಮಾಡುತ್ತಿದ್ದಾರೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ನನ್ನ ಬಳಿ ಮಾತನಾಡಲಿ" ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಹೇಳಿದ್ದಾರೆ.

"ಸಂಪತ್ ರಾಜ್ ಎಲ್ಲೂ ಓಡಿಹೋಗಿರಲಿಲ್ಲ, ಅವರ ಆರೋಗ್ಯ ಸರಿಯಿರಲಿಲ್ಲ. ಪೋಲೀಸರು ಯಾವ ಕ್ರಮ ತೆಗೆದುಕೊಂಡಿದ್ದಾರೆ ಗೊತ್ತಿದೆ. ಸರ್ಕಾರ, ಅಧಿಕಾರದಲ್ಲಿರುವವರು ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. 

"ಒಬ್ಬರ ವೈಯುಕ್ತಿಕ ಹೇಳಿಕೆ ಮೇಲೆ ನಾನೇನೂ ಕ್ರಮ ಜರುಗಿಸಲು ಬರುವುದಿಲ್ಲ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಂದು ನನ್ನ ಬಳಿ ಮಾತನಾಡಲಿ.  ಸಂಪತ್ ರಾಜ್ ಓಡಿ ಹೋಗಿದ್ದಾರೆಂದು ಹೇಳಿದ್ದು ಯಾರು? ಕಾನೂನಿಗಿಂತ ಸಂಪತ್ ರಾಜ್, ಡಿಕೆಶಿ ಯಾರೂ ಮೇಲಲ್ಲ. ಬಿಜೆಪಿ ನಾಯಕರು ಕಾನೂನಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ" ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆರೋಪಿಸಿದ್ದಾರೆ. ಅಲ್ಲದೆ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆನ್ನುವ ಶಾಸಕ ಅಖಂಡ ಅವರ ಬೇಡಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"ನನ್ನ ಮನೆ ಇದೆ, ಪಕ್ಷದ ಕಚೇರಿ ಇದೆ, ಅಲ್ಲಿ ಬಂದು ಮಾತನಾಡಲಿ. ಮಾಧ್ಯಮಗಳ ಮುಂದೆ ಹೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಏನಾದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು" ಶಿವಕುಮಾರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com