ದೀಪಾವಳಿ ಪಟಾಕಿ: ಬೆಂಗಳೂರಿನಲ್ಲಿ ಮಾಲಿನ್ಯ ಶೇ.46.7ರಷ್ಟು ಕಡಿಮೆ

ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಏಳು ಸ್ಥಳಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿದ್ದು ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಸರಾಸರಿ 46.7 ರಷ್ಟು ಕಡಿತವನ್ನು ದಾಖಲಿಸಿದೆ.
ದೀಪಾವಳಿ ಪಟಾಕಿ: ಬೆಂಗಳೂರಿನಲ್ಲಿ ಮಾಲಿನ್ಯ ಶೇ.46.7ರಷ್ಟು ಕಡಿಮೆ

ಬೆಂಗಳೂರು: ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಏಳು ಸ್ಥಳಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿದ್ದು ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಸರಾಸರಿ 46.7 ರಷ್ಟು ಕಡಿತವನ್ನು ದಾಖಲಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸಿದ ಈ ಸಮೀಕ್ಷೆಯಲ್ಲಿ ಈ ಬಾರಿ ನಗರದಲ್ಲಿ ಪಟಾಕಿಗಳಿಂಡಾಗುವ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಸಾಬೀತಾಗಿದೆ.

ಇದೇ ಅಲ್ಲದೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಶೇಕಡಾ 30.34 ರಷ್ಟು ಇಳಿಕೆ ಕಂಡುಬಂದಿದೆ. ಕೆಎಸ್‌ಪಿಸಿಬಿ ಮಾಹಿತಿಯ ಪ್ರಕಾರ, ನವೆಂಬರ್ 9 ಅನ್ನು (ವರ್ಷದ ಸಾಮಾನ್ಯ ದಿನ) ಪರಿಗಣಿಸುವಾಗ, ಏಳು ಸ್ಥಳಗಳ ಪೈಕಿ ನಾಲ್ಕರಲ್ಲಿ ಪರಿಸ್ಥಿತಿ ಮದ್ಯಮ ಪ್ರಮಾಣದಲ್ಲಿತ್ತು. ಪಶುವೈದ್ಯಕೀಯ ಆಸ್ಪತ್ರೆ, ಹೆಬ್ಬಾಳ, ; ಜಯನಗರ 5 ನೇ ಬ್ಲಾಕ್; ಕವಿಕಾ, ಮೈಸೂರು ರಸ್ತೆ; ಮತ್ತು ನಿಮ್ಹಾನ್ಸ್, ಸಿಟಿ ರೈಲ್ವೆ ನಿಲ್ದಾಣ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಲ್ಲಿ ಮಾಲಿನ್ಯ ಪ್ರಮಾಣ ತೃಪ್ತಿಕರವಾಗಿದೆ

ಬಸವೇಶ್ವರ ನಗರದ ಎಸ್‌ಜಿ ಹಳ್ಳಿ, ಯಲ್ಲಿ ಅದು ‘ಉತ್ತಮ’ವಾಗಿತ್ತು. ದೀಪಾವಳಿ ಸಮಯದಲ್ಲಿ (ನವೆಂಬರ್ 14-16), ಸಿಟಿ ರೈಲ್ವೆ ನಿಲ್ದಾಣದಲ್ಲಿ ಎಕ್ಯೂಐ ಮೌಲ್ಯ 77, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ (64)ಕವಿಕಾ, ಮೈಸೂರು ರಸ್ತೆ (62), ಮತ್ತು ನಿಮ್ಹಾನ್ಸ್ (61). ದಾಖ್ಲಾಗಿದೆ.

ಎಕ್ಯೂಐ 51-100ರ ಒಳಗಿದ್ದರೆ ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಎಸ್‌ಜಿ ಹಳ್ಳಿ(39), ಜಯನಗರ 5 ನೇ ಬ್ಲಾಕ್ (44), ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ (43) ನಲ್ಲಿ ಅದು ‘ಉತ್ತಮ ಎನಿಸಿದೆ.  ಏಕೆಂದರೆ ಅವು 0-50ರ ವರ್ಗಕ್ಕೆ ಬಂದಿದ್ದವು, ಕೆಎಸ್‌ಪಿಸಿಬಿ ನಗರದಲ್ಲಿ ನಿರಂತರವಾಗಿ 10 ರೌಂಡಪ್ ಶಬ್ದ ಮಾಲಿನ್ಯ ಅಂದಾಜಿಸುವ ಕೇಂದ್ರಗಳನ್ನು ಸ್ಥಾಪಿಸಿತ್ತು ಮತ್ತು ಈ ಅವಧಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಮೇಲ್ವಿಚಾರಣೆ ನಡೆಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com