ಬೆಂಗಳೂರು: ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯೂರಿಟಿ ಗಾರ್ಡ್

ಸೆಕ್ಯುರಿಟಿ ಗಾರ್ಡ್ ಪತ್ನಿಯನ್ನು ಗುಂಡಿಕ್ಕಿ ಕೊಂದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ. 
ಬೆಂಗಳೂರು: ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯೂರಿಟಿ ಗಾರ್ಡ್

ಬೆಂಗಳೂರು: ಸೆಕ್ಯುರಿಟಿ ಗಾರ್ಡ್ ಪತ್ನಿಯನ್ನು ಗುಂಡಿಕ್ಕಿ ಕೊಂದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ. 

ಖಾಸಗಿ ನಗದು ನಿರ್ವಹಣಾ ಕಂಪನಿಯ ಸೆಕ್ಯುರಿಟಿ ಗಾರ್ಡ್ ಕಾಳಪ್ಪ (68) ಅವರ ಪತ್ನಿ ಸುಮಿತ್ರಾ (60) ಎನ್ನುವವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಮೂಲತಃ ಇವರು ಮಡಿಕೇರಿಗೆ ಸೇರಿದ್ದು ತಮ್ಮ ಮೂವರು ಪುತ್ರಿಯರ ಮದುವೆಯಾದ ನಂತರ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ತಂಗಿದ್ದರು

ನೆರೆಹೊರೆಯವರು ಗುಂಡಿನ ಸದ್ದು ಕೇಳಿ ಆಗಮಿಸಿದಾಗ ಸುಮಿತ್ರಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಕೊಂಡರು. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ, ಸುಮಿತ್ರಾ ಜಗಳದ ನಂತರ ಪುತ್ರಿಯ ಮನೆಗೆ ತೆರಳಿದ್ದರು. ಮಗಳು ಸೋಮವಾರ ಮತ್ತೆ ಅಮ್ಮನನ್ನು ಅವರ ಮನೆಗೆ ಕರೆತಂದು ಬಿಟ್ಟಿದ್ದಳು. ಆದರೆ ಮಗಳು ಬಿಟ್ಟು ಹೋದ ನಂತರ ಕಾಳಪ್ಪ ಮತ್ತೆ ಪತ್ನಿಗೆ ಹೊಡೆಯಲು ಪ್ರಾರಂಭಿಸಿದ್ದ. ಆ ವೇಳೆ ಸುಮಿತ್ರಾ ಮತ್ತೆ ಮಗಳ ಮನೆಗೆ ತೆರಳಲು ಯತ್ನಿಸಿದಾಗ ಕಾಳಪ್ಪ ಸಿಂಗಲ್ ಬ್ಯ್ರಾರಲ್ ಗನ್  ನಿಂದ ಅವಳ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಆಗ ಸುಮಿತ್ರಾ ಮನೆಯಿಂದ ಹೊರಗೆ ಓಡಿ ಅಲ್ಲೇ ಕುಸಿದಿದ್ದಾಳೆ.  ಆ ನಂತರ ಕಾಳಪ್ಪ ಸಹ ತನ್ನ ಹೊಟ್ಟೆಗೆ ಗುಂಡು ಹಾರಿಸಿಕೊಂಡು ಸಾಯಲು ಯತ್ನಿಸಿದ್ದಾನೆ.

ಅಕ್ಕಪಕ್ಕದ ಮನೆಯವರು ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಿಸದೆ ಸುಮಿತ್ರಾ ಸಾವನ್ನಪ್ಪಿದ್ದಾಳೆ. ಪೋಲೀಸರು ಸ್ಥಳ ಪರಿಶೀಲನೆ ನಡೆಸಿ ಕಾಳಪ್ಪ ವಿರುದ್ಧ ಕೊಲೆ ಮತ್ತು ಆತ್ಮಹತ್ಯೆಗೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಯ ಮಾಲೀಕರಾದ ನಂದ ಕುಮಾರ್ ಪೊಲೀಸ್ ದೂರು ಸಲ್ಲಿಸಿದ್ದಾರೆ. ಕಾಳಪ್ಪ ಬಳಿ ಕೆಲಸದ ಕಾರಣ ಪರವಾನಗಿ ಪಡೆದ ಗನ್ ಇತ್ತು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದಿದೆ.  ಕಾಳಪ್ಪ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಆತ ಚೇತರಿಸಿಕೊಂಡ ನಂತರ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸುಮಿತ್ರಾ ಅವರ ಕೊನೆಯ ವಿಧಿಗಳನ್ನು ಮಂಗಳವಾರ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com