ಹಾಸನ: ಅನುಮಾನದ ಭೂತ, ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ!

ಅನುಮಾನದ ಭೂತಕ್ಕೆ ತುಂಬು ಜೀವವೊಂದು ಬಲಿಯಾಗಿದೆ. ಹೌದು ಪತ್ನಿಯ ನಡತೆ ಬಗ್ಗೆ ಶಂಕಿಸುತ್ತಿದ್ದ ಪತಿಯೊರ್ವ ಕಳೆದ ರಾತ್ರಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

Published: 18th November 2020 03:40 PM  |   Last Updated: 18th November 2020 04:10 PM   |  A+A-


crime

ಸಾಂದರ್ಭಿಕ ಚಿತ್ರ

Posted By : Vishwanath S
Source : Online Desk

ಹಾಸನ: ಅನುಮಾನದ ಭೂತಕ್ಕೆ ತುಂಬು ಜೀವವೊಂದು ಬಲಿಯಾಗಿದೆ. ಹೌದು ಪತ್ನಿಯ ನಡತೆ ಬಗ್ಗೆ ಶಂಕಿಸುತ್ತಿದ್ದ ಪತಿಯೊರ್ವ ಕಳೆದ ರಾತ್ರಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾಚೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು 25 ವರ್ಷದ ಪೂಜಾ ಎಂದು ಗುರುತಿಸಲಾಗಿದೆ.

ಆರೋಪಿ ಗಂಗಾಧರ್ ಪತ್ನಿ ಹಾಗೂ ಐದು ವರ್ಷದ ಮಗನ ಜೊತೆ ಕಾಚೇನಹಳ್ಳಿಯಲ್ಲಿ ವಾಸವಾಗಿದ್ದರು. ಪತ್ನಿಯನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದ ಗಂಗಾಧರ್ ಈ ಸಂಬಂಧ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. 

ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದ್ದ ಕೋಪದಲ್ಲಿ ಗಂಗಾಧರ್ ಪೂಜಾಳನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಆರೋಪಿ ಗಂಗಾಧರ್ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಪರಿಸ್ಥಿತಿ ಗಂಭೀರವಾಗಿದೆ. 

ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp