ಭಾಷೆ ಅಭಿವೃದ್ಧಿಗೆ ಶೀಘ್ರದಲ್ಲೇ 'ಕನ್ನಡ ವರ್ಕ್ ಫೋರ್ಸ್' ರಚನೆ

ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಿಂದ ಕಾಯಕ ವರ್ಷವನ್ನು ಆಚರಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು, ಕನ್ನಡ ಪರವಾಗಿ ಸಾಕಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಿಂದ ಕಾಯಕ ವರ್ಷವನ್ನು ಆಚರಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು, ಕನ್ನಡ ಪರವಾಗಿ ಸಾಕಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕನ್ನಡೇತರ ಜನರರಿಗೆ ಕನ್ನಡ ಭಾಷೆಯನ್ನು ಕಲಿಸಲು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರಾಧಿಕಾರವು, ಆಯಾ ತಾಲೂಕು  ಹಾಜೂ ಜಿಲ್ಲೆ ಮಟ್ಟದಲ್ಲಿ ಡಿಸಿಗಳ ಅಧ್ಯಕ್ಷತೆಯಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಕನ್ನಡ ವರ್ಕ್ ಫೋರ್ಸ್ (ಕನ್ನಡ ಕಾರ್ಯಪಡೆ) ರಚನೆ ಮಾಡುತ್ತಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಟಿ.ಎಸ್.ನಾಗಾಭರಣ ಅವರು, ಭಾಷೆಯನ್ನು ಜನಪ್ರಿಯಗೊಳಿಸಲು ಆಸಕ್ತಿ ಹೊಂದಿರುವ ಅಥವಾ ರಾಜ್ಯದ ಬಗ್ಗೆ ಪ್ರೀತಿ ಹೊಂದಿರುವ ಯಾರಾದರೂ ಸ್ವಯಂಪ್ರೇರಿತರಾಗಿ ಕಾರ್ಯಪಡೆಯ ಸದಸ್ಯರಾಗಬಹುದು. ಪ್ರತಿಯೊಬ್ಬರಿಗೂ ಗುರುತಿನ ಸಂಖ್ಯೆಯನ್ನು ನೀಡಲಾಗುವುದು. ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸುವುದು ಮತ್ತು ಸಾಧ್ಯವಾದಲ್ಲೆಲ್ಲಾ ಭಾಷೆಯನ್ನು ಬಳಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 

ವಿಸಿಟಿಂಗ್ ಕಾರ್ಡ್‌ಗಳು, ಆಮಂತ್ರಣ ಪತ್ರಿಕೆಗಳು ಮತ್ತು ಮನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆಯನ್ನು ಉತ್ತೇಜಿಸಲು ಕೂಡ ಇದು ಸಹಾಯಕವಾಗುತ್ತದೆ. “ಇದು ಕಡ್ಡಾಯವಲ್ಲ. ಜನರನ್ನು ಒತ್ತಾಯಿಸದೆ, ಕಾರ್ಯಪಡೆಯ ಸದಸ್ಯರು ಕನ್ನಡದ ಬಳಕೆಯನ್ನು ಬಳಕೆ ಮಾಡುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.
 
ಬೀದಿಗಳಲ್ಲಿರುವ ಅಂಗಡಿಗಳ ನಾಮಫಲಕ, ಸರ್ಕಾರಿ ಕಚೇರಿಗಳ ಮೇಲೆ ಎಲ್ಲಿಯೇ ಆದರೂ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡದಿರುವುದು ಅಥವಾ ತಪ್ಪುಗಳು ಕಂಡು ಬಂದಿದ್ದೇ ಆದರೆ, ಸದಸ್ಯರು ಕೂಡಲೇ ಪ್ರಾಧಿಕಾರದ ಗಮನಕ್ಕೆ ತರಬೇಕೆಂದು ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com