ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆಗೆ ಕರ್ನಾಟಕ ಹೈಕೋರ್ಟ್ 5 ಲಕ್ಷ ರೂ. ದಂಡ!

ಚುನಾವಣಾ ತಕರಾರು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಕರ್ನಾಟಕ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ. 
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ

ಬೆಂಗಳೂರು: ಚುನಾವಣಾ ತಕರಾರು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಕರ್ನಾಟಕ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ. 

ವಿಧಾನಸಭೆ ಚುನಾವಣೆ ವೇಳೆ ಅಕ್ರಮ ನಡೆದಿದೆ. ಈಶ್ವರ್ ಖಂಡ್ರೆ ಅವರು ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಚುನಾವಣಾ ಸಂದರ್ಭಲ್ಲಿ ಅಕ್ರಮವಾಗಿದೆ. ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಅರ್ಜಿದಾರರು ಆರೋಪಿಸಿದ್ದರು. ಹೀಗಾಗಿ ಶಾಸಕರಾಗಿರುವ ಈಶ್ವರ್ ಖಂಡ್ರೆ ಅವರ ಆಯ್ಕೆಯನ್ನು  ಅಸಿಂಧುಗೊಳಿಸಬೇಕೆಂದು ಸಿದ್ದರಾಮ ಎಂಬುವವರು ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠ ಈಶ್ವರ್ ಖಂಡ್ರೆ ಅವರಿಗೆ 5 ಲಕ್ಷ ರೂ ದಂಡ ವಿಧಿಸಿದೆ. ಅಲ್ಲದೆ ಈ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ 5 ಲಕ್ಷ ರೂ. ಪಾವತಿಸಲು  ಸೂಚನೆ ನೀಡಿದೆ.

ಈ ವೇಳೆ ತಮ್ಮ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ ಅವರು, 'ತಮ್ಮ ಆಪ್ತ ಸಹಾಯಕನಿಗೆ ಮರೆವಿನ ಕಾಯಿಲೆ ಇರುವುದರಿಂದ ಈ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ಖಂಡ್ರೆ ಅವರಿಗೆ 5 ಲಕ್ಷ ರೂ. ದಂಡ ವಿಧಿಸಿ ಅದನ್ನು ಸಿಎಂ ಕೋವಿಡ್  ಪರಿಹಾರ ನಿಧಿಗೆ ಪಾವತಿಸಲು ಸೂಚಿಸಿದೆ. 

ಓರ್ವ ಜನಪ್ರತಿನಿಧಿಯಾಗಿ ನ್ಯಾಯಾಲಯದ ಸೂಚನೆ ತಲುಪಿಲ್ಲ ಎಂಬುದು ಸರಿಯಲ್ಲ. ಹಾಗೆಯೇ ಮಾಧ್ಯಮಗಳಲ್ಲಿ ಸಾಕಷ್ಟು ವರದಿ ಬಂದಿದ್ದೂ ತಮಗೆ ಮಾಹಿತಿ ಇಲ್ಲ ಎಂಬುದು ಒಪ್ಪಿತವಾದ ವಾದವಲ್ಲ. ಜನಪ್ರತಿನಿಧಿಗಳು ನ್ಯಾಯಾಲಯದ ಆದೇಶಗಳಿಗೆ ಗೌರವ ತೋರಿಸದೇ ಇರುವುದು ಕ್ಷಮಾರ್ಹವಲ್ಲ. ಅಲ್ಲದೇ ಪ್ರಕರಣವನ್ನು 2 ವರ್ಷಗಳ ಕಾಲ ತಳ್ಳಿಕೊಂಡು ಬರುವುದು ಸೂಕ್ತವಲ್ಲ. ಇದಕ್ಕೆ ಕಾರಣವಾಗಿರುವ ಈಶ್ವರ ಖಂಡ್ರೆ 5 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕು. ದಂಡದ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ಪಾವತಿಸಬೇಕು. ಮುಂದೆ ಸೂಕ್ತ ಕಾರಣವಿಲ್ಲದೆ ಈ ರೀತಿ ವಿಚಾರಣೆಗೆ ಗೈರು ಹಾಜರಾಗುವುದು ಅಥವಾ ಮುಂದೂಡುವುದನ್ನು ಮಾಡಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com