ಕರ್ನಾಟಕದಲ್ಲಿ ತಲೆಯೆತ್ತಲಿದೆ ಕೃತಕ ಬುದ್ಧಿಮತ್ತೆ ಆರ್ಟ್ ಪಾರ್ಕ್ 

ಸ್ಟಾರ್ಟ್ ಅಪ್ ಉದ್ಯಮದ ಭಾಗವಾಗಿ ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ ಕಲಾ ಉದ್ಯಾನವನ(Artificial intelligence art park) ಆರಂಭವಾಗಲಿದೆ ಎಂದು ವಿಷನ್ ಗ್ರೂಪ್ ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಟಾರ್ಟ್ ಅಪ್ ಉದ್ಯಮದ ಭಾಗವಾಗಿ ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ ಆರ್ಟ್ ಪಾರ್ಕ್ (Artificial intelligence art park) ಆರಂಭವಾಗಲಿದೆ ಎಂದು ವಿಷನ್ ಗ್ರೂಪ್ ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ತಿಳಿಸಿದ್ದಾರೆ.

ಬೆಂಗಳೂರು ಟೆಕ್ ಸಮಿತ್ 2020ರಲ್ಲಿ ಮಾತನಾಡಿದ ಅವರು, ಆರೋಗ್ಯ ಸೇವೆ, ಸಾಗಾಣಿಕೆ, ಹಣಕಾಸು ವಲಯಗಳಲ್ಲಿ ಮುಂದಿನ ತಲೆಮಾರಿಗೆ ಕೃತಕ ಬುದ್ಧಿಮತ್ತೆ ಆರ್ಟ್ ಪಾರ್ಕ್ ನ್ನು ಆರಂಭಿಸಲಾಗುವುದು ಎಂದರು. 

ಕರ್ನಾಟಕದ ಮೊದಲ ಕೃತಕ ಬುದ್ಧಿಮತ್ತೆ ಪಾರ್ಕ್ ನಲ್ಲಿ 5 ಸಾವಿರಕ್ಕೂ ಹೆಚ್ಚು ಎಂಜಿನಿಯರ್ ಗಳಿಗೆ ಉದ್ಯೋಗ ನೀಡಲಿದೆ ಎಂದರು.

ಕರ್ನಾಟಕ ಕಳೆದ 4 ವರ್ಷಗಳಲ್ಲಿ 20 ಬಿಲಿಯನ್ ಗಿಂತಲೂ ಅಧಿಕ ಹೂಡಿಕೆಯನ್ನು ಆಕರ್ಷಿಸಿದ್ದು ಅದು ಭಾರತದ ಒಟ್ಟು ಬಂಡವಾಳ ಹೂಡಿಕೆಯ ಸುಮಾರು ಶೇಕಡಾ 40ರಷ್ಟಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com