ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಅಗತ್ಯವಿಲ್ಲ, ಆರ್ಥಿಕವಾಗಿ ಹಿಂದುಳಿದವರ ಉದ್ಧಾರ ಮಾಡಲಿ: ಸಿದ್ಧಗಂಗಾ ಶ್ರೀ
ಲಿಂಗಾಯತ ಸಮುದಾಯಗಳ ಅಭಿವೃದ್ಧಿ ಮತ್ತು ಹಿಂದುಳಿದ 2(ಎ) ಮೀಸಲಾತಿಗೆ ಒತ್ತಾಯಕ್ಕೆ ಪ್ರತ್ಯೇಕ ನಿಗಮ ರಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವೀರಶೈವ ಲಿಂಗಾಯತ ಸಂಘಟನೆ ಸ್ವಾಗತಿಸಿದರೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಿರೋಧಿಸಿದ್ದಾರೆ.
Published: 19th November 2020 08:39 AM | Last Updated: 19th November 2020 08:39 AM | A+A A-

ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ
ತುಮಕೂರು: ಲಿಂಗಾಯತ ಸಮುದಾಯಗಳ ಅಭಿವೃದ್ಧಿ ಮತ್ತು ಹಿಂದುಳಿದ 2(ಎ) ಮೀಸಲಾತಿಗೆ ಒತ್ತಾಯಕ್ಕೆ ಪ್ರತ್ಯೇಕ ನಿಗಮ ರಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವೀರಶೈವ ಲಿಂಗಾಯತ ಸಂಘಟನೆ ಸ್ವಾಗತಿಸಿದರೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಿರೋಧಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಅಭಿವೃದ್ಧಿ ನಿಗಮವನ್ನು ರಚಿಸುವ ಅವಶ್ಯಕತೆಯಿರಲಿಲ್ಲ, ರಾಜ್ಯ ಸರ್ಕಾರದ ನಡೆ ಅಚ್ಚರಿಯನ್ನುಂಟುಮಾಡಿದೆ. ಸರ್ಕಾರ ಹೀಗೆ ಪ್ರತಿ ಸಮುದಾಯಕ್ಕೆ ನಿಗಮ ರಚಿಸುವ ಇಂತಹ ಪ್ರವೃತ್ತಿಯನ್ನು ಮುಂದುವರಿಸಿದರೆ ಇದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ.ಬೇರೆ ಸಮುದಾಯದವರು ಕೂಡ ಇಂತಹದ್ದೇ ಬೇಡಿಕೆ ಮುಂದಿಡಲು ಆರಂಭಿಸುತ್ತಾರೆ ಎಂದಿದ್ದಾರೆ.
ಇದರ ಬದಲು ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳು, ಜಾತಿಗಳಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವವರ ಉದ್ಧಾರಕ್ಕೆ ಶ್ರಮಿಸಬೇಕು, ರಾಜ್ಯದ ಜನತೆಯ ಒಟ್ಟು ಬೆಳವಣಿಗೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.