ಕೊರೋನಾ ಎಫೆಕ್ಟ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜಿಮ್'ಗಳು, ಪರಿಸ್ಥಿತಿ ನಿಭಾಯಿಸಲು ಆ್ಯಪ್'ಗಳ ಬಳಕೆ

ಮಹಾಮಾರಿ ಕೊರೋನಾ ವೈರಸ್ ದೇಶದ ವಿವಿಧ ಕ್ಷೇತ್ರಗಳ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಪ್ರಮುಖವಾಗಿ ಜಿಮ್'ಗಳನ್ನು ನಡೆಸಿ ಜೀವನ ನಡೆಸುತ್ತಿದ್ದವರ ಮೇಲಂತೂ ಗಂಭೀರ ಪರಿಣಾಮ ಬೀರಿದೆ. ಕೊರೋನಾಗೆ ಹೆದರಿ ಸಾಕಷ್ಟು ಜನರು ಜಿಮ್'ಗಳತ್ತ ಮುಖ ಮಾಡುತ್ತಿಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ದೇಶದ ವಿವಿಧ ಕ್ಷೇತ್ರಗಳ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಪ್ರಮುಖವಾಗಿ ಜಿಮ್'ಗಳನ್ನು ನಡೆಸಿ ಜೀವನ ನಡೆಸುತ್ತಿದ್ದವರ ಮೇಲಂತೂ ಗಂಭೀರ ಪರಿಣಾಮ ಬೀರಿದೆ. ಕೊರೋನಾಗೆ ಹೆದರಿ ಸಾಕಷ್ಟು ಜನರು ಜಿಮ್'ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಜಿಮ್'ಗಳ ಮಾಲೀಕರು ತಮ್ಮದೇ ಆ್ಯಪ್ ಗಳನ್ನು ಸಿದ್ಧಪಡಿಸಿ ಆನ್'ಲೈನ್ ಮೂಲಕ ಸೇವೆ ನೀಡಲು ಮುಂದಾಗಿದ್ದಾರೆ. 

ಇದರಂತೆ ಮೊದಲ ಹೆಜ್ಜೆ ಇಟ್ಟಿರುವ ಮೈಸೂರು ಮೂಲದ ಅರ್ನಾಲ್ಡ್ ಫಿಟ್‌ನೆಸ್ ತಮ್ಮದೇ ಆದ ಆ್ಯಪ್'ವೊಂದನ್ನು ಬಿಡುಗಡೆ ಮಾಡಿದ್ದು, ಆ್ಯಪ್ ಮೂಲಕ ವ್ಯಾಯಾಮ ಹಾಗೂ ಆಹಾರ ಕ್ರಮಗಳ ಕುರಿತು ಮಾಹಿತಿ ನೀಡಲು ಆರಂಭಿಸಿದೆ. 

ಆ್ಯಪ್'ನಲ್ಲಿ ವರ್ಕೌಟ್ ವಿಡಿಯೋಗಳು, ನ್ಯುಟ್ರಿಷಿಯನ್ ಟಿಪ್ಸ್'ಗಳು, ಕ್ಯಾಲರಿ ಕ್ಯಾಲ್ಕ್ಯುಲೇಟರ್ಸ ಸೇವೆಗಳ ಹಾಗೂ ಬುಕಿಂಗ್ ಗಳ ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ಅರ್ನಾಲ್ಡ್ ಫಿಟ್‌ನೆಸ್‌ನ ಮಾಲೀಕ ಮತ್ತು ಮೈಸೂರು ಜಿಮ್ ಮತ್ತು ಫಿಟ್‌ನೆಸ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್ ಹರ್ಷ ಅವರು ಹೇಳಿದ್ದಾರೆ. 

ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಜಿಮ್'ಗೆ ನಟರನ್ನು ರಾಯಭಾರಿಗಳಾಗಿ ಮಾಡುವುದನ್ನು ಆರಂಭಿಸಲಾಗಿದೆ. ಫಿಟ್ನೆಸ್ ಉತ್ಸಾಹಿ ಎಂದು ಕರೆಯಲ್ಪಡುವ ಕನ್ನಡ ನಟ ಧನಂಜಯ್ ಅವರು ನಗರದ ಜಿಮ್ನಾಷಿಯಂನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. 

ಈ ಬೆಳವಣಿಗೆ ಬಳಿಕ ಇದೀಗ ನಗರದಲ್ಲಿರುವ ಸಾಕಷ್ಟು ಜಿಮ್ ಮಾಲೀಕರೂ ಕೂಡ ಆನ್'ಲೈನ್ ಮೊರೆ ಹೋಗುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com