ರೂ.200 ಕಟ್ಟಿ... ಮನೆ ಬಾಗಿಲಿಗೇ ಬಂದು ಕಸ ಸ್ವೀಕರಿಸಲಿದ್ದಾರೆ ಬಿಬಿಎಂಪಿ ಸಿಬ್ಬಂದಿಗಳು!

ನಗರದಲ್ಲಿ ಕಸ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಲು ಮುಂದಾಗಿರುವ ಬಿಬಿಎಂಪಿ ಶೀಘ್ರದಲ್ಲೇ ಜನರ ಮನೆ ಬಾಗಿಲಿಗೇ ಬಂದು ಕಸ ಸ್ವೀಕರಿಸಲು ಚಿಂತನೆ ನಡೆಸುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಕಸ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಲು ಮುಂದಾಗಿರುವ ಬಿಬಿಎಂಪಿ ಶೀಘ್ರದಲ್ಲೇ ಜನರ ಮನೆ ಬಾಗಿಲಿಗೇ ಬಂದು ಕಸ ಸ್ವೀಕರಿಸಲು ಚಿಂತನೆ ನಡೆಸುತ್ತಿದೆ. 

ಮನೆ ಬಾಗಿಲಿನಲ್ಲೇ ಕಸ ಸ್ವೀಕರಿಸುತ್ತಾರೆಂದ ಮಾತ್ರಕ್ಕೆ ಖುಷಿ ಪಡದಿರಿ... ಇದೇಕೆ ಎನ್ನಬೇಡಿ... ಬಿಬಿಎಂಪಿ ಸಿಬ್ಬಂದಿಗಳು ಉಚಿತವಾಗಿ ಕಸ ಸ್ವೀಕರಿಸುವುದಿಲ್ಲ. ಇದಕ್ಕಾಗಿ ನೀವು ಪ್ರತೀ ತಿಂಗಳು ರೂ.200 ಕಟ್ಟಬೇಕಾಗುತ್ತದೆ. ಪ್ರತೀವರ್ಷ ಆಸ್ತಿ ತೆರಿಗೆ ಕಟ್ಟುವ ಸಮಯದಲ್ಲಿಯೇ ಈ ಹಣವನ್ನು ಕಟ್ಟಬಹುದು ಎಂದು ಹೇಳಲಾಗುತ್ತಿದ್ದು, ಹೊಸ ಯೋಜನೆ ಜನವರಿ ತಿಂಗಳಿನಿಂದಲೇ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. 

ಕಳೆದ ಜೂನ್ ತಿಂಗಳಿನಲ್ಲಿಯೇ ಬಿಬಿಎಂಪಿ ಈ ಕಸ ನಿರ್ವಹಣೆ ಉಪ ನಿಯಮಕ್ಕೆ ಒಪ್ಪಿಗೆ ನೀಡಿತ್ತು. ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ಹೊಸ ನಿಯಮ ಕೆಲ ಕಾರಣಗಳಿಂದ ಜಾರಿಗೆ ಬಂದಿರಲಿಲ್ಲ. ಇದೀಗ ಹೊಸ ನಿಯಮವನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ. 

ಹೊಸ ನಿಯಮಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಇದು ದಂಡವಲ್ಲ. ಮಾಡಿದ ಸೇವೆಗೆ ಬಳಕೆದಾರರಿಂದ ಪಡೆಯುವ ಶುಲ್ಕವಾಗಿದೆ ಎಂದು ತಿಳಿಸಿದೆ. 

ಹೊಸ ನಿಯಮ ಜಾರಿಗೆ ತರಲು ಎಲ್ಲಾ ವಿಧಾನ ಹಾಗೂ ಸೌಲಭ್ಯಗಳನ್ನು ಒದಗಿಸುವ ಕುರಿತು ಕಾರ್ಯ ನಿಭಾಯಿಸಲಾಗುತ್ತಿದೆ. ಜನವರಿ ತಿಂಗಳಿನಲ್ಲಿ ನಿಯಮವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಇದೀಗ ಮುಂಬರುವ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತೆದ ಎಂಬುದು ತಪ್ಪು ಮಾಹಿತಿಯಾಗಿದೆ. ಇದೆಲ್ಲಾ ಸುಳ್ಳು, ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ-2020ರ ಅನ್ವಯ ಶುಲ್ಖವನ್ನು ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಅವರು ಹೇಳಿದ್ದಾರೆ. 

ನಗರದಲ್ಲಿ 1 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ಇದರಲ್ಲಿ 32 ಲಕ್ಷ ಮನೆಗಳನ್ನು ಲೆಕ್ಕ ಹಾಕಲಾಗಿದೆ. ಆರಂಭದಲ್ಲಿಯೇ ಹಣವನ್ನು ಸಂಗ್ರಹ ಮಾಡಲಾಗುತ್ತದೆ. ಇದು ದಂಡವಲ್ಲ. ಸರ್ಕಾರಿ ಸಂಸ್ಥೆಗಳಂತೆಯೇ ನಾವೂ ಕೂಡ ಸೇನಾ ಶುಲ್ಕವನ್ನು ಪಡೆಯುತ್ತೇವೆಂದು ತಿಳಿಸಿದ್ದಾರೆ. 

ಕಸಗಳೇ ಬಾರದ ಮನೆಗಳು ನಗರದಲ್ಲಿ ಕಡಿಮೆ ಇವೆ. ಅವುಗಳನ್ನೂ ಕೂಡ ಮೌಲ್ಯಮಾಪನ ಮಾಡಲಾಗುತ್ತಿದೆ. ಒಣ ಹಾಗೂ ಹಸಿ ಕಸವನ್ನು ಸಂಗ್ರಹಿಸಿ ಮರುಬಳಕೆ ಮಾಡಲು ಸಂಸ್ಕರಿಸಲಾಗುತ್ತಿದೆ. ಇದಕ್ಕೆ ಆರ್ಥಿಕ ನೆರವು ಬೇಕಾಗುತ್ತದೆ ಎಂದಿದ್ದಾರೆ. 

ಈ ನಡುವೆ ಬಿಬಿಎಂಪಿ ಹೊಸ ನಿಯಮಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತ್ಯಾಜ್ಯ ವಿಂಗಡಣೆ ಮಾಡದಿರುವುದಕ್ಕೆ ಜನರಿಗೆ ಬಿಬಿಎಂಪಿ ದಂಡ ವಿಧಿಸುತ್ತಿದೆ ಎಂದು ಹೇಳುತ್ತಿದ್ದಾರೆ. "ಹೆಚ್ಚುವರಿ ಶುಲ್ಕಗಳನ್ನು ಸಂಗ್ರಹಿಸುವ ಬದಲು, ಕಸ ನಿರ್ವಹಣೆಯ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲು ಸರ್ಕಾರವು ಕೆಲಸ ಮಾಡಬೇಕು ಇದರಿಂದ ಸಾರಿಗೆ ಶುಲ್ಕ ಕೂಡ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com