ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ‌ ತಾಜಾ ಮೀನು: ಆ್ಯಪ್ ಸಿದ್ಧಪಡಿಸಿದ ರಾಜ್ಯ ಮೀನುಗಾರಿಕಾ ಇಲಾಖೆ

ಮತ್ಸ್ಯಪ್ರಿಯರಿಗೆ ಬಾಯಿರುಚಿಗೆ ಇನ್ಮುಂದೆ ಮನೆ ಬಾಗಿಲಿಗೆ ತಾಜಾ ಮೀನುಗಳು ಬರಲಿವೆ. ಆನ್'ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೇ ತಾಜಾ ಮೀನುಗಳು ಬರಲಿವೆ. ಇದಕ್ಕಾಗಿ ರಾಜ್ಯ ಮೀನುಗಾರಿಕಾ ಇಲಾಖೆ ಆ್ಯಪ್ ಒಂದನ್ನು ಸಿದ್ಧಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮತ್ಸ್ಯಪ್ರಿಯರಿಗೆ ಬಾಯಿರುಚಿಗೆ ಇನ್ಮುಂದೆ ಮನೆ ಬಾಗಿಲಿಗೆ ತಾಜಾ ಮೀನುಗಳು ಬರಲಿವೆ. ಆನ್'ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೇ ತಾಜಾ ಮೀನುಗಳು ಬರಲಿವೆ. ಇದಕ್ಕಾಗಿ ರಾಜ್ಯ ಮೀನುಗಾರಿಕಾ ಇಲಾಖೆ ಆ್ಯಪ್ ಒಂದನ್ನು ಸಿದ್ಧಪಡಿಸಿದೆ. 

ಮೀನಿನ ಖಾದ್ಯ ಮಾಡುವವರಿಗೆ ಮೀನನ್ನು ಇಷ್ಟಪಟ್ಟು ತಿನ್ನುವವರಿಗೆ ಇನ್ನ ಮುಂದೆ ಕರಾವಳಿ ಭಾಗದಂತೆಯೇ ತಾಜಾ ಮೀನುಗಳು ಸಿಗಲಿವೆ. ಅದು ಮನೆ ಬಾಗಿಲ ಬಳಿಯೇ. ಮಾಲ್‌ಗಳಿಗೋ ಮೀನು ಅಂಗಡಿಗಳನ್ನು ಹುಡುಕಿಕೊಂಡು ಹೋಗುವವರಿಗೆ ಕರ್ನಾಟಕ ರಾಜ್ಯ ಮೀನುಗಾರಿಕೆ ಇಲಾಖೆಯಿಂದ ಇದಕ್ಕಾಗಿ ಹೊಸ ಯೋಜನೆಯೊಂದು ಬರಲಿದೆ.

ಆನ್ ಲೈನ್ ಮುಖಾಂತರ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಮೀನು ತಂದು‌ಕೊಡುವ ಯೋಜನೆ ರೂಪಿಸಲಾಗುತ್ತಿದ್ದು,ಈ ಬಗ್ಗೆ ಈಗಾಗಲೇ ಅಪ್ ಸಿದ್ಧ ಪಡಿಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಒಳನಾಡು ಮೀನುಗಾರಿಕೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ 9ನೇ ಸ್ಥಾನದಲ್ಲಿದೆ. ಸಮುದ್ರ ಕಿನಾರೆ ಮೀನುಗಾರಿಕೆಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಇದರಲ್ಲಿಯೂ ಕರ್ನಾಟಕ ಪ್ರಥಮ ಸ್ಥಾನಕ್ಕೆ ಬರುವ ಗುರಿಯನ್ನು ಹೊಂದಲಾಗಿದೆ ಎಂದ ಅವರು, ನ.21ರಂದು ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಮೀನಿನ ಚಿಪ್ಸ್ ಸೇರಿದಂತೆ ಇನ್ನಿತರ ಖಾದ್ಯಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.

ಮಂಗಳೂರು ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕಾ ವಿಶ್ವ ವಿದ್ಯಾಲಯವನ್ನಾಗಿ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವ ನಿರೀಕ್ಷೆ ಇದೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪನೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಮಂಗಳೂರು ಮೀನುಗಾರಿಕಾ ವಿಶ್ವ ವಿದ್ಯಾಲಯದ ಜೊತೆಗೆ ರಾಜ್ಯದಲ್ಲಿನ ಶಿವಮೊಗ್ಗ, ಉಡುಪಿ, ಕಾರವಾರದ ಅಂಕೋಲ ಹಾಗೂ ಮೈಸೂರಿನಲ್ಲಿ ನೂತನವಾಗಿ ಮೀನುಗಾರಿಕಾ ಕಾಲೇಜನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದ ಅವರು, ಅದೇ ರೀತಿಯಲ್ಲಿ ರಾಜ್ಯದ ಹತ್ತು ಕಡೆಗಳಲ್ಲಿ ಮೀನುಗಾರಿಕೆ ಸಂಬಂಧಿಸಿದ ಡಿಪ್ಲೊಮಾ ತರಗತಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. 

ಮೀನು ಕ್ವಾರಂಟೈನ್ ವ್ಯವಸ್ಥೆ ತಮಿಳುನಾಡಿನ ಚೆನ್ನೈನಲ್ಲಿದ್ದು, ಇದೀಗ ರಾಜ್ಯದಲ್ಲಿಯೂ ಆರಂಭಿಸಲಾಗುತ್ತಿದೆ. 2020-21ನೇ ಸಾಲಿಗೆ ರಾಜ್ಯಕ್ಕೆ 137.20 ಕೋಟಿ ರೂ.ಯೋಜನೆಗಳಿಗೆ ಕೇಂದ್ರ ಮಂಜೂರಾತಿ ನೀಡಿದ್ದು, ಇದರ ಅನುಷ್ಠಾನಕ್ಕೆ ಇಲಾಖೆ ಕ್ರಮ ವಹಿಸಲಿದೆ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಒಟ್ಟು 4,115 ಕೋಟಿ ರೂ.ಗಳನ್ನು ಒದಗಿಸಲು ಕೋರಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದ ಅವರು, ಆತ್ಮನಿರ್ಭರ ಯೋಜನೆಯಡಿ ಸುಮಾರು 10 ಸಾವಿರ ಯುವಕರಿಗೆ ಇಲಾಖೆಯಿಂದ ವಿವಿಧೆಡೆಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com