ತಂಬಾಕು ಉದ್ಯಮದ ಮೇಲೆ ಕೊರೋನಾ ಬಿಸಿ: ಜಾಗತಿಕ ಮಾರುಕಟ್ಟೆಯಲ್ಲಿ ತಗ್ಗಿದ ಬೇಡಿಕೆ

ಕೊರೋನಾ ಸಾಂಕ್ರಾಮಿಕ ರೋಗ ತಂಬಾಕು ಉದ್ಯಮದ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಗಳು ಸಾಕಷ್ಟು ಇಳಿಕೆ ಕಂಡಿದೆ. ಪರಿಣಾಮ ರಾಜ್ಯದ ಬೀಡಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ಸಾಂಕ್ರಾಮಿಕ ರೋಗ ತಂಬಾಕು ಉದ್ಯಮದ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಗಳು ಸಾಕಷ್ಟು ಇಳಿಕೆ ಕಂಡಿದೆ. ಪರಿಣಾಮ ರಾಜ್ಯದ ಬೀಡಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. 

ಕಳೆದ ವರ್ಷ ಕಡಿಮೆ ಪ್ರಮಾಣ ಮಳೆ ಹಾಗೂ ಉತ್ತಮ ಬೆಳೆಯಿಂದಾಗಿ ಉತ್ಪನ್ನಗಳು ಉತ್ತಮ ಬೆಲೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಮಳೆ ಹಾಗೂ ಬೆಳೆ ಎರಡೂ ಉತ್ತಮವಾಗಿ ಬಂದಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳವಂತಾಗಿದೆ. 

ವರ್ಜೀನಿಯಾದ ವೈವಿಧ್ಯಮಯ ತಂಬಾಕಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಆದರೆ ತಂಬಾಕು ಮಾರುಕಟ್ಟೆಗೆ ಬೇಡಿಕೆಗಳು ಹೆಚ್ಚಾಗದ ಕಾರಣ ರೈತರು ಆತಂಕಕ್ಕೊಳಗಾಗಿದ್ದಾರೆ, 

ಈಗಾಗಲೇ ತಂಬಾಕುಗಳ ಮೇಲಿನ ಬೆಲೆಗಳು ಸಾಕಷ್ಟು ಕುಸಿತ ಕಂಡಿದ್ದು, ಈವರೆಗೂ ಶೇಕಡಾ 20 ಕ್ಕಿಂತ ಕಡಿಮೆ ತಂಬಾಕು ಮಾರಾಟವಾಗಿದೆ. ಹುಣ್ಸೂರು, ಪೆರಿಯಪಟ್ಟಣ, ಅರಕಲಗೂಡು ಮತ್ತು ಹೆಚ್ ಡಿ ಕೋಟೆ ಮಾರುಕಟ್ಟೆಗಳಲ್ಲಿ ತಂಬಾಕಿನ ಅಷ್ಟಾಗಿ ಮಾರಾಟವಾಗುತ್ತಿಲ್ಲ. 

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆಂಧ್ರಪ್ರದೇಶದ ಮಾರುಕಟ್ಟೆಗಳಲ್ಲಿ ನಿರತರಾಗಿರುವ ಖರೀದಿದಾರರು ಕರ್ನಾಟಕ ರಾಜ್ಯದತ್ತ ತಿರುಗಿ ನೋಡುತ್ತಿಲ್ಲ. ಕೋವಿಡ್ -19 ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಗಳು ಕುಸಿದಿದ್ದು, ಖರೀದಿದಾರರು ಕೂಡ ಷೇರುಗಳನ್ನು ಖರೀದಿಸಲು ಉತ್ಸುಕತೆ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ. 

ತಂಬಾಕು ಬೆಳೆಗಾರ ರಮೇಶ್ ಎಂಬುವವರು ಮಾತನಾಡಿ, ತಂಬಾಕು ಬೆಲೆ ಕೆ.ಜಿ.ಗೆ 30-40 ರೂ.ಗಳಿಗೆ ಕುಸಿದಿದೆ ಮತ್ತು ಮಧ್ಯಮ ಮತ್ತು ಕಡಿಮೆ ದರ್ಜೆಯ ತಂಬಾಕುಗಳಿಗೆ ಬೇಡಿಕೆಗಳು ಮತ್ತಷ್ಟು ಕಡಿಮೆಯಾಗಬಹುದು. ಕೃಷಿ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ಕಾರವು ವ್ಯಾಪಾರಿಗಳ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. 

ಆಂಧ್ರಪ್ರದೇಶದತ್ತ ಮುಖ ಮಾಡಿರುವ ಖರೀದಿದಾರರು ಕರ್ನಾಟಕದತ್ತ ಒಮ್ಮೆ ಮುಖ ಮಾಡಿದರೂ ಪರಿಸ್ಥಿತಿ ಸುಧಾರಿಸಲಿದೆ. ಆದರೆ,  ಮಧ್ಯಮ ಮತ್ತು ಕಡಿಮೆ ಗುಣಮಟ್ಟದ ತಂಬಾಕಿಗೆ ಕಳೆದ ವರ್ಷದಂತೆ ಈ ಬಾರಿ ಉತ್ತಮ ಬೆಲೆ ಸಿಗುವ ಸಾಧ್ಯತೆಗಳಿಲ್ಲ. ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿರುವ ಆಂಧ್ರಪ್ರದೇಶದಂತೆಯೇ ಕರ್ನಾಟಕ ಸರ್ಕಾರ ಕೂಡ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಖರೀದಿದಾರರಾಗಿರುವ ಪ್ರಕಾಶ್ ಎಂಬುವವರು ಹೇಳಿದ್ದಾರೆ. 

ಮಾಜಿ ಸಂಸದ ಮತ್ತು ಕಾಂಗ್ರೆಸ್ ಮುಖಂಡ ಆರ್ ಧ್ರುವನಾರಾಯಣ್ ಅವರು ತಂಬಾಕು ಬೆಲೆ ಕುಸಿತವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ. 

ತಂಬಾಕು ಉತ್ಪನ್ನಗಳ ಮೇಲೆ ಸರ್ಕಾರ ಶೇ 18 ರಷ್ಟು ಜಿಎಸ್‌ಟಿ ಸಂಗ್ರಹಿಸುತ್ತಿದೆ, ಇದು ಸರ್ಕಾರದ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ತಂಬಾಕು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ವಿಫಲವಾಗಿವೆ" ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com