ಪ್ರತಿ ಹಳ್ಳಿಯಲ್ಲಿ ಜನೌಷಧ ಮಳಿಗೆ ಸ್ಥಾಪನೆ: ಎಸ್.ಟಿ. ಸೋಮಶೇಖರ್

ಗ್ರಾಮೀಣ ಪ್ರದೇಶದ ಜನಾರೋಗ್ಯದ ಸಲುವಾಗಿ ಪ್ರತಿಹಳ್ಳಿಯಲ್ಲಿ ಜನೌಷಧ ಮಳಿಗೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಹೇಳಿದ್ದಾರೆ.
ಸೋಮಶೇಖರ್
ಸೋಮಶೇಖರ್

ವಿಜಯಪುರ: ಗ್ರಾಮೀಣ ಪ್ರದೇಶದ ಜನಾರೋಗ್ಯದ ಸಲುವಾಗಿ ಪ್ರತಿಹಳ್ಳಿಯಲ್ಲಿ ಜನೌಷಧ ಮಳಿಗೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಹೇಳಿದ್ದಾರೆ.

ವಿಜಯಪುರ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಜರುಗಿದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಆದ್ಯತೆ ಮೇರೆಗೆ ಜನೌಷಧ ಮಳಿಗೆಗಳನ್ನು ಆರಂಭಿಸಿ ಅವರಿಗೆ ಕಡಿಮೆ ದರದಲ್ಲಿ ಔಷಧ ಪಡೆಯುವ ಸೌಲಭ್ಯವನ್ನು ಇಲಾಖೆ ಶೀಘ್ರದಲ್ಲಿಯೇ ರೂಪಿಸಿ ಅನುಷ್ಠಾನಗೊಳಿಸಲಿದೆ. ಗ್ರಾಮೀಣ ಜನತೆಗೆ ಈ ಜನೌಷಧ ಮಳಿಗೆಗಳು ವರದಾನವಾಗಲಿವೆ ಎಂದರು.

ಮೊದಲು ಸಹಕಾರ ಸಂಘಗಳ ಸಾಧನೆಯ ವಿಷಯ ಬಂದಾಗ ಗುಜರಾತ್‌, ಮಹಾರಾಷ್ಟ್ರ ರಾಜ್ಯಗಳ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. ಆದರೆ ಇದೀಗ ಕರ್ನಾಟಕ ರಾಜ್ಯವು ಸಹಕಾರ ರಂಗದಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ರಾಷ್ಟ್ರಮಟ್ಟದಲ್ಲಿ ಸಹಕಾರ ಸಂಘಗಳ ಸಾಧನೆಯ ವಿಷಯ ಬಂದಾಗ ಕರ್ನಾಟಕದ ಸ್ಥಾನ ಅಗ್ರಗಣ್ಯವಾಗಿದೆ. ಮುಂದಿನ ಸಹಕಾರಿ ಸಪ್ತಾಹದಲ್ಲಿ ಪ್ರತಿ ಜಿಲ್ಲೆಯ ಉತ್ತಮ ಸಹಕಾರಿ ಸಂಸ್ಥೆ ಕುರಿತ ಕಿರು ಹೊತ್ತಿಗೆ ಹೊರ ತರಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com