ಮಂಗಳೂರು: ಪೋಸ್ಟ್-ಕೋವಿಡ್ ಕೇರ್ ಆಯುಷ್ ಕೇಂದ್ರ ಉದ್ಘಾಟನೆ

ಬಹು ನಿರೀಕ್ಷೆಯ ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರವನ್ನು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ಧಾಮ ಕ್ಯಾಂಪಸ್‌ನಲ್ಲಿ ಉದ್ಘಾಟಿಸಲಾಯಿತು.

Published: 21st November 2020 01:44 PM  |   Last Updated: 21st November 2020 01:58 PM   |  A+A-


Sharada Ayur kendra

ಶಾರದಾ ಆಯುರ್ ಕೇಂದ್ರ

Posted By : Shilpa D
Source : The New Indian Express

ಮಂಗಳೂರು : ಬಹು ನಿರೀಕ್ಷೆಯ ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರವನ್ನು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ಧಾಮ ಕ್ಯಾಂಪಸ್‌ನಲ್ಲಿ ಉದ್ಘಾಟಿಸಲಾಯಿತು.

ಕೊರೋನಾದಿಂದ ಗುಣಮುಖರಾದ ನಂತರ ಹಲವರಲ್ಲಿ ಬಳಲಿಕೆ, ಮೈಕೈ ನೋವು, ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆ, ತಲೆನೋವು, ನರದೌರ್ಬಲ್ಯ, ಮಲಬದ್ಧತೆ,ಮತ್ತು ಮಾನಸಿಕವಾಗಿ ಒತ್ತಡ, ಆತಂಕ, ಖಿನ್ನತೆಯಂತಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ನಂತರದ ಆರೈಕೆ ಸೇವೆಗಳ ಅಗತ್ಯವನ್ನು ಪರಿಗಣಿಸಿ, ಮಂಗಳೂರಿನ ತಲಪಾಡಿಯಲ್ಲಿರುವ ಶಾರದಾ ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಗಳು, ಈ ಕೇಂದ್ರವನ್ನು ತೆರೆದಿದ್ದು, ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆಗಳು ಒಳ/ಹೊರರೋಗಿ ಆಧಾರದಲ್ಲಿ ಲಭ್ಯವಿವೆ. 

ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗಾಭ್ಯಾಸಗಳಂತಹ ಸಾಂಪ್ರದಾಯಿಕ ಔಷಧಿಗಳ ಮೂಲಕ ಮಾತ್ರ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಸಾಧ್ಯ. ಕೋವಿಡ್‌ನಿಂದ ಹೊರಬರಲು ನಾನು ಕೂಡ ಈ ಔಷಧಿಗಳನ್ನು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಮಾಡಿಸಿದ್ದೇನೆ ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ತಿಳಿಸಿದರು. ಟ್ರೀಟ್ಮೆಂಟ್ ಪ್ರೋಟೋಕಾಲ್‌ಗಳನ್ನು ಸಿದ್ಧಪಡಿಸಿ, ಚಿಕಿತ್ಸೆ ನೀಡಲು ಮುಂದೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕೊರೋನಾ ಮುಕ್ತರ ಪುನಶ್ಚೇತನ ಕೇಂದ್ರದಲ್ಲಿ ಅವರು ನೀಡುವ ಎಲ್ಲಾ ಚಿಕಿತ್ಸೆಗಳು ಸಹಾಯವಾಗುತ್ತದೆ ಎಂದು ತಿಳಿಸಿದರು.

ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರ ಆರಂಭಿಸುವ ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗಿಯಾಗಿರುವ ಪ್ರೊ. ಎಂ ಬಿ ಪುರಾಣಿಕ್ ಮತ್ತು ಅವರ ವೈದ್ಯರ ತಂಡವನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಈ ರೀತಿಯ ಆರೋಗ್ಯ ಸೌಲಭ್ಯಗಳನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಇದರಿಂದ ಹೆಚ್ಚಿನ
ಜನರು ಪ್ರಯೋಜನವನ್ನು ಪಡೆಯುತ್ತಾರೆ ಎಂಬ ಭರವಸೆ ನನಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಭಿಪ್ರಾಯ ಪಟ್ಟರು.

ನಾನು ಒಬ್ಬ ಕೋವಿಡ್ ಮುಕ್ತನಾಗಿದ್ದು, ನನ್ನ ಆರೋಗ್ಯವನ್ನು ಮರಳಿ ಪಡೆಯುವಲ್ಲಿ ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗದ ಪ್ರಾಮುಖ್ಯತೆಯನ್ನು ಸ್ವತ: ಅರಿತಿದ್ದೇನೆ ಮತ್ತು ಅನುಭವಿಸಿದ್ದೇನೆ. ಭಾರತೀಯ ಔಷಧ ಪದ್ಧತಿಗಳು ಯಾವಾಗಲೂ ಸಂಪೂರ್ಣ ಸ್ವರೂಪದಲ್ಲಿರುತ್ತವೆ ಎಂಬುದಕ್ಕೆ ಇದೊಂದು ಪುರಾವೆ. ರಾಷ್ಟ್ರೀಯ ಆಯುರ್ವೇದ ದಿನ ಹಾಗೂ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನದ ಪ್ರಯುಕ್ತ ಲೋಕಾರ್ಪಣೆ ಗೊಂಡಿರುವ ಈ ಪೋಸ್ಟ್-ಕೋವಿಡ್ ಕೇಂದ್ರವನ್ನು ಬಳಸಿ ಜನರು ತಮ್ಮ ಆರೋಗ್ಯವನ್ನು ಮರಳಿ ಪಡೆಯಬೇಕಾಗಿ   ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ತಿಳಿಸಿದರು.

ವಿವರಗಳಿಗಾಗಿ ಶಾರದ ಆಯುಷ್ ಕೇರ್ ಕೇಂದ್ರವನ್ನು 0824-2281231, 8971153232 ಸಂಪರ್ಕಿಸಬಹುದು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp