ವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ಮೂರ್ತಿ ನಿರ್ಮಾಣಕ್ಕೆ ಕಿಷ್ಕಿಂಧೆಯಲ್ಲಿ ಪೇಜಾವರ ಶ್ರೀಗಳಿಂದ ಶಿಲಾನ್ಯಾಸ

ವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ವಿಗ್ರಹ, ದೇವಾಲಯದ ನಿರ್ಮಾಣಕ್ಕೆ ನ.20 ರಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಶಿಲಾನ್ಯಾಸ ನೆರವೇರಿಸುವ ಐತಿಹಾಸಿಕ ಕಾರ್ಯಕ್ರಮ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟದಲ್ಲಿ ನಡೆಯಿತು.
ವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ಮೂರ್ತಿ ನಿರ್ಮಾಣಕ್ಕೆ ಕಿಷ್ಕಿಂಧೆಯಲ್ಲಿ ಪೇಜಾವರ ಶ್ರೀಗಳಿಂದ ಶಿಲಾನ್ಯಾಸ
ವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ಮೂರ್ತಿ ನಿರ್ಮಾಣಕ್ಕೆ ಕಿಷ್ಕಿಂಧೆಯಲ್ಲಿ ಪೇಜಾವರ ಶ್ರೀಗಳಿಂದ ಶಿಲಾನ್ಯಾಸ

ಗಂಗಾವತಿ: ವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ವಿಗ್ರಹ, ದೇವಾಲಯದ ನಿರ್ಮಾಣಕ್ಕೆ ನ.20 ರಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ಶಿಲಾನ್ಯಾಸ ನೆರವೇರಿಸುವ ಐತಿಹಾಸಿಕ ಕಾರ್ಯಕ್ರಮ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟದಲ್ಲಿ ನಡೆಯಿತು.

"ಪಂಪಾ ಕ್ಷೇತ್ರ ಕಿಷ್ಕಿಂಧೆ ಹನುಮಂತನ ಜನ್ಮಭೂಮಿಯಾಗಿದೆ. 215 ಮೀಟರ್ ಎತ್ತರದ ಭಕ್ತಿ ಹನುಮಾನ್ ವಿಗ್ರಹ ನಿರ್ಮಾಣದಿಂದಾಗಿ ಪವಿತ್ರ ಸಾಮ್ರಾಜ್ಯದ ಭಕ್ತಿ ನಗರ ತನ್ನ ವೈಭವವನ್ನು ಮರಳಿಪಡೆಯಲಿದೆ ಎಂದು ಹನುಮದ್ ಜನ್ಮಭೂಮಿ ಟ್ರಸ್ಟ್ ನ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ತಿಳಿಸಿದ್ದಾರೆ. 

ಹನುಮದ್ ಜನ್ಮಭೂಮಿ ಟ್ರಸ್ಟ್ ನ ಈ ಯೋಜನೆಗೆ ಸರ್ಕಾರಗಳು ಸಹಕರಿಸುವಂತೆ ವಿಶ್ವಪ್ರಸನ್ನ ಶ್ರೀಗಳು ಒತ್ತಾಯಿಸಿದ್ದು ಯೋಜನೆಯ ಯಶಸ್ಸಿಗೆ ಹಾರೈಸಿದ್ದಾರೆ. 

ಈ ಪುರಾತನ ಕಿಷ್ಕಿಂಧೆ ಸಾಮ್ರಾಜ್ಯಕ್ಕೆ 15 ಲಕ್ಷ ವರ್ಷಗಳ ಇತಿಹಾಸವಿದ್ದು, 600 ವರ್ಷಗಳ ಹಿಂದಿನ ವಿದ್ಯಾರಣ್ಯರ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಹಿನ್ನೆಲೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com