ತಾಯಿ ಕಳೆದುಕೊಂಡು ಅನಾಥವಾಗಿದ್ದ ಎರಡು ಹುಲಿ ಮರಿಗಳ ರಕ್ಷಣೆ

ತಾಯಿ ಕಳೆದುಕೊಂಡು ಅನಾಥವಾಗಿದ್ದ ಎರಡು ಮರಿ ಹುಲಿಗಳನ್ನು ರಕ್ಷಿಸಿರುವ ಘಟನೆ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಸಿಂಗಾರಾ ಎಂಬಲ್ಲಿ ನಡೆದಿದೆ.
ಹುಲಿ ಮರಿಗಳ ರಕ್ಷಣೆ
ಹುಲಿ ಮರಿಗಳ ರಕ್ಷಣೆ

ಚಾಮರಾಜನಗರ: ತಾಯಿ ಕಳೆದುಕೊಂಡು ಅನಾಥವಾಗಿದ್ದ ಎರಡು ಮರಿ ಹುಲಿಗಳನ್ನು ರಕ್ಷಿಸಿರುವ ಘಟನೆ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಸಿಂಗಾರಾ ಎಂಬಲ್ಲಿ ನಡೆದಿದೆ.

ಶುಕ್ರವಾರವಷ್ಟೇ ಹೆಣ್ಣು ಹುಲಿಯೊಂದು ಅಸಹಜವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿತ್ತು. ಸಾವಿನ ತನಿಖೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಸ್ಥಳಕ್ಕೆ ತೆರಳಿದ ವೇಳೆ ಎರಡು ಗಂಡು‌ ಹುಲಿ ಮರಿಗಳು ಪತ್ತೆಯಾಗಿವೆ. ತಾಯಿಯನ್ನು‌ ಕಳೆದುಕೊಂಡಿದ್ದ ಕಂಗಲಾಗಿದ್ದ ಮರಿಗಳ ಆರೈಕೆ‌ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಮೃತಪಟ್ಟ ಹುಲಿಯು ವಿಷ ಹಾಕಿದ್ದ ಕಾಡುಹಂದಿ ಮಾಂಸ ತಿಂದು ಸತ್ತಿರುವ ಶಂಕೆ ವ್ಯಕ್ತವಾಗಿದೆ. ಎರಡು ತಿಂಗಳ ಹಿಂದೆಯೂ 5 ಕೆನ್ನಾಯಿಗಳು ಇದೇ ಪ್ರದೇಶದಲ್ಲಿ ವಿಷ ಪ್ರಾಷನದಿಂದ ಸಾವನ್ನಪ್ಪಿದ್ದವು‌.

ಬುಡಕಟ್ಟು ಮಹಿಳೆಯೊಬ್ಬಳು ಹುಲಿ ದಾಳಿಗೆ ಬಲಿಯಾದ ಬಳಿಕ ವಿಷಪ್ರಾಶನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.
-ಗುಳಿಪುರ ನಂದೀಶ್ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com