ರಾಜ್ಯದಲ್ಲಿ ಇಂದು 1,704 ಕೋವಿಡ್ ಪ್ರಕರಣಗಳು, 13 ಸಾವು; ಒಟ್ಟು ಸೋಂಕಿತರ ಸಂಖ್ಯೆ 873046 ಕ್ಕೆ ಏರಿಕೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,704 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 873046ಕ್ಕೆ ಏರಿಕೆಯಾಗಿವೆ.
Published: 22nd November 2020 10:24 PM | Last Updated: 22nd November 2020 10:24 PM | A+A A-

ಕೋವಿಡ್-19 (ಸಂಗ್ರಹ ಚಿತ್ರ)
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,704 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 873046ಕ್ಕೆ ಏರಿಕೆಯಾಗಿವೆ.
ಕೋವಿಡ್-19 ಸೋಂಕಿಗೆ ಗುರಿಯಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳ ಸಂಖ್ಯೆ 470 ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 24868ಕ್ಕೆ ಏರಿಕೆಯಾಗಿವೆ.
ರಾಜ್ಯದಲ್ಲಿ ಇಂದು 1,704 ಕೋವಿಡ್ ಪ್ರಕರಣಗಳು, 13 ಸಾವು; ಒಟ್ಟು ಸೋಂಕಿತರ ಸಂಖ್ಯೆ 873046 ಕ್ಕೆ ಏರಿಕೆ#COVID_19_Cases #Karnataka #ಕೊರೋನಾ_ಪ್ರಕರಣಗಳು #ಕರ್ನಾಟಕ pic.twitter.com/OJHxy88xi7
— kannadaprabha (@KannadaPrabha) November 22, 2020
ನ.22 ರಂದು ಕೋವಿಡ್-19 ನಿಂದ ಚೇತರಿಕೆ ಕಂಡು ಆಸ್ಪತ್ರೆಯಿಂದ 1,537 ಜನರು ಬಿಡುಗಡೆಯಾಗಿದ್ದು, ಕೋವಿಡ್-19 ಗೆ ಚಿಕಿತ್ಸೆ ಪಡೆದವರ ಪೈಕಿ 836505 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ಕೋವಿಡ್-19 ನಿಂದ 13 ಜನರು ನ.22 ರಂದು ಮೃತಪಟ್ಟಿದ್ದು, ಮೃತರ ಸಂಖ್ಯೆ 11654 ಕ್ಕೆ ಏರಿಕೆಯಾಗಿದೆ. ಮರಣದ ಪ್ರಮಾಣ ಶೇ.076 ರಷ್ಟಿದ್ದರೆ, ಸೋಂಕಿತರ ಪ್ರಮಾಣ ಶೇ.1.34 ರಷ್ಟಿದೆ.